ಬೆಂಗಳೂರು: ಲೋಕಸಭಾ ಚುನಾವಣೆಗೆ ಕಗ್ಗಂಟಾಗಿರುವ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಿದ್ದಾರೆ. ಕೋಲಾರ
ಕೋಲಾರ ಕ್ಷೇತ್ರದ ವಿಚಾರವನ್ನು ಚರ್ಚಿಸಲು ಹಾಲಿ ಕ್ಷೇತ್ರದ ಶಾಸಕರೂ ಆಗಿರುವ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಂದು ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಕೆಲ ಕಾಲ ಕ್ಷೇತ್ರದ ರಾಜಕಾರಣ ಕುರಿತು ಚರ್ಚಿಸಿದರು.
ಡಿಸಿಎಂ ಭೇಟಿ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುನಿಯಪ್ಪ, 30-40 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ.ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನ್ನ ಅಳಿಯನಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ.ರಾಜ್ಯದಲ್ಲಿ ನನ್ನದೇ ಆದ ಜನ ಇದ್ದಾರೆ.ಎಲ್ಲಾ ಕಡೆ ವಿಶ್ವಾಸ- ಅವಿಶ್ವಾಸ ಇದ್ದೇ ಇರುತ್ತದೆ. ಕೋಲಾರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು .ನನ್ನ ಸೋಲಿಸಿದವರು ಗೆಲ್ಲಬೇಕು ಎಂದು ವಿಧಾನಸಭಾ ಚುನಾವಣೆಯಲ್ಲಿ ಹೇಳಿದ್ದೆ .ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಯಾರ ವಿರುದ್ಧವೂ ನಾನು ಮಾತಾಡಿಲ್ಲ. ಭಿನಾಭಿಪ್ರಾಯ ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು.
ಇನ್ನು ಕೋಲಾರದ ಜೊತೆಗೆ ಕಾಂಗ್ರೆಸ್ಗೆ ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಕ್ಷೇತ್ರಗಳಲ್ಲಿಯೂ ಪಕ್ಷದಲ್ಲಿಯೇ ಆಂತರಿಕ ಸಮಸ್ಯೆ ಉದ್ಭವವಾಗಿದೆ.
ಕಗ್ಗಂಟಿಗೆ ಕಾರಣವೇನು?: ಸಚಿವ ಕೆ.ಎಚ್ ಮುನಿಯಪ್ಪ ಫ್ಯಾಮಿಲಿಗೆ ಟಿಕೆಟ್ ನೀಡದಂತೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವ ಎಂ.ಸಿ ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್, ನಂಜೇಗೌಡ ಸೇರಿ ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ಇತ್ತ ಅಳಿಯ ಚಿಕ್ಕಪೆದ್ದಣ್ಣ, ಅಥವಾ ಪುತ್ರ ನರಸಿಂಹರಾಜುಗೆ ಟಿಕೆಟ್ ನೀಡುವಂತೆ ಕೆ.ಹೆಚ್.ಮುನಿಯಪ್ಪ ಪಟ್ಟು ಹಿಡಿದ್ದಾರೆ ಎನ್ನಲಾಗುತ್ತಿದೆ.
ಚಿನ್ನದನಾಡು ಕೋಲಾರ ಕಾಂಗ್ರೆಸ್ ಟಿಕೆಟ್ ಫೈಟ್ ದೆಹಲಿಗೆ ಶಿಫ್ಟ್ ಆಗಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಎದುರು ಎರಡು ಬಣದವರು ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಎರಡೂ ಬಣದ ನಾಯರೊಂದಿಗೆ ಈಗಾಗಲೇ ಹೈಕಮಾಂಡ್ ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಉಭಯ ಬಣಗಳ ನಡುವೆ ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಹೈಕಮಾಂಡ್ ಅಂಗಳದಲ್ಲೂ ನಡೆದ ಸಂಧಾನವೂ ಫೇಲ್ಯೂರ್ ಆಗಿದೆ.