ಬೆಂಗಳೂರು: ಸಂಯುಕ್ತ ಹೋರಾಟ-ಕರ್ನಾಟಕದಿಂದ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಹಾಗೂ ಅವರ ನೇತೃತ್ವದ ರೈತ ಸಂಘಟನೆಯನ್ನು ವಜಾಗೊಳಿಸಿದೆ ಎಂದು ಪ್ರಕಟಣೆ ನೀಡಿದೆ.
ಅದರಂತೆ, ಸಂಯುಕ್ತ ಹೋರಾಟ ಕರ್ನಾಟಕದ ಕೋರ್ ಕಮಿಟಿಯು ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ಆರೋಪಗಳನ್ನು ಪರಿಶೀಲಿಸಿ ಬಿಜೆಪಿ ಪಕ್ಷದ ಕಡೆಯಿಂದ ಬಂದಿದ್ದೇವೆ ಎಂದು ಹೇಳಿಕೊಂಡಿದ್ದ ತಂಡದ ಜೊತೆ ಸತತ ಒಡನಾಟದಲ್ಲಿದ್ದು ಸಾಬೀತಾಗಿದೆ. ಅಲ್ಲದೆ, ಅವರ ಅಮಿಷಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಒಳಪಟ್ಟಿರುವುದು ವಿಚಾರಣೆಯಲ್ಲಿ ಋಜುವಾತಾಗಿದೆ ಹಾಗಾಗಿ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಅವರ ನೇತೃತ್ವದ ರೈತ ಸಂಘಟನೆಯನ್ನು ಈ ಕೂಡಲೇ ಸಂಯುಕ್ತ ಹೋರಾಟ ಕರ್ನಾಟಕದಿಂದ ವಜಾಗೊಳಿಸಬೇಕು ಎಂದು ಶಿಪಾರಸ್ಸು ಮಾಡಿತ್ತು. ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿಯ ಸಂಯೋಜಕರಾದ ಬಡಗಲಪುರ ನಾಗೇಂದ್ರ ಹಾಗೂ ಜಿ.ಸಿ. ಬಯ್ಯಾರೆಡ್ಡಿ ಅವರು ಪ್ರಕಟಣೆ ನೀಡಿದ್ದಾರೆ.