ಕಂದನ ಸ್ಕೂಲ್ ಬ್ಯಾಗ್

– ಪ್ರೊ. ಟಿ. ಯಲ್ಲಪ್ಪ

ಅಯ್ಯೋ..!
ಇದು ಶಾಲೆಗೆ ಕೊಂಡೊಯ್ದ
ನನ್ನ ಕಂದನದೇ ರಕ್ತ ಸಿಕ್ತ ಸ್ಕೂಲ್ ಬ್ಯಾಗು !
ಅವನದೇ ಈ ನೆತ್ತರ ಗುರುತುಗಳು !
ರಕ್ತಪಿಪಾಸು ಸಾಮ್ರಾಜ್ಯಶಾಹಿಗಳ
ಮೆದುಳಿಗೂ, ಹೃದಯಗಳಿಗೂ ಅಂಟಿದೆಯಾ ಎಂದು ಅವರ ಎದೆ, ಮೆದುಳುಗಳ ಬಗೆದು ನೋಡಬೇಕು .
ನನ್ನ ಬಳಿಯೂ ಅಂತಹ ಹರಿತ ಕತ್ತಿಯಿಲ್ಲ
ಲೇಖನಿಯೂ ಮೊಂಡಾಗಿದೆ.
ನನ್ನೆದೆಯನೂ ಕತ್ತರಿಸಿ
ತುರ್ತುನಿಗಾ ಘಟಕದಲಿ ಇಡಲಾಗಿದೆ !

ಈ ಹಾಳಾದ ಸುದ್ದಿವಾಹಿನಿಗಳು
ಒಂದೇ… ಸಮ ಬಿತ್ತರಿಸಿ ಬೊಬ್ಬಿರಿಯುತ್ತಿವೆ
ಸತ್ತ ಮಕ್ಕಳ ಸುದ್ದಿಯನೂ ಸಿಹಿ ಸುದ್ದಿಯಂತೆ !

ಅಮೆರಿಕಾ ಇಸ್ರೇಲ್ಗಳ ಅಧ್ಯಕ್ಷರ ಬಿರಿಯಾನಿ ಪಾರ್ಟಿಗೆ ಎಳೆಕಂದಮ್ಮಗಳ ಮೃದು ಖಂಡಗಳೆ
ಬಲು ಹಿತವಂತೆ
ಕಣ್ಣೇದುರೇ ಕರುಳ ಕುಡಿಗಳ ಕಳೆದುಕೊಂಡು
ಗೋಳಿಡುವ ತಾಯಂದಿರ ಕಣ್ಣೀರಲ್ಲೇ ಕುದಿಸಿದರೆ ಬಲು ರುಚಿಯಂತೆ ಇರಾನಿನ ಬಾಸುಮತಿ ಅಕ್ಕಿಯ ಬಿರಿಯಾನಿ !

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ: ತಿದ್ದುಪಡಿ ವಿಧೇಯಕ ಮಂಡನೆ

ಅಮೆರಿಕಾದ ಅಧ್ಯಕ್ಷ ಟ್ರಂಪನ ತಟ್ಟೆಗೆ
ಮಾಡಿ ಬಡಿಸಿದ್ದಾರಂತೆ ಸರ್ವಾಧಿಕಾರಿ ಖಮೇನಿಯ ಬಿಸಿನೆತ್ತರಾರದ ತಾಜಾ ಹೆಣದ ಸ್ಪೈಸಿ ಕಬಾಬಿನ ತುಕಡಾ !

ಕೊಲ್ಲ ಬಂದವನನ್ನೂ ತಾಯ ಕರುಳಿಂದಲೇ
ಕ್ಷಮಿಸಿಬಿಡೆಂದು ದೇವರಲ್ಲಿ ಮೊರೆ ಇಟ್ಟ
ಶಿಲುಬೆ ಹೊತ್ತೇ ಸತ್ತ ಏಸುಕ್ರಿಸ್ತನ
ಕರುಣೆ ಜಿನುಗುವ ಜೆರುಸಲೇಂನಲ್ಲೀಗ
ಮಂಡಿಯೂರಿ ಪ್ರಾರ್ಥಿಸಲು ಕ್ರಿಸ್ತನಿಲ್ಲ.
ಬದಲಿಗೆ ಕೊಂದವರನ್ನು ಮಂಡಿಯೂರಿ
ಶಪಿಸುತ್ತಿರುವ ಶಿಯಾಗಳ – ಸುನ್ನಿಗಳ
ಎದೆಯಾರ್ದ್ರ ಲಾ..ಇಲಾಹ ಇಲ್ಲಲ್ಲಾಹ್ ಗಳ ನಿತಾಂತ ಮೊಳಗು. ಒಂದೇ ಸಮಾ …
ಬೇಧವಿಲ್ಲದೆ ಸುಡುವ ಉರಿಬಿಸಿಲ ದಗೆ,
ಎಳೆ ಕಂದಮ್ಮಗಳ ಹೆಣಸುಡುವ ಚಿತಾಗ್ನಿಯ ಹೊಗೆ …!

ಈ ಅಧಿಕಾರಶಾಹಿ ಅಹಂಕಾರಿಗಳ
ಈ ರಾಕ್ಷಸ ರಾಜರುಗಳ ರಕ್ತಪಿಪಾಸು ದಾಹಕ್ಕೆ
ನಮ್ಮ ಮಕ್ಕಳು ಮಡದಿಯರ ಚೆರುಬಿ,ಬೋಟಿ , ತಲೆಮಾಂಸ, ಚಾಕಣ, ಎಳೆಪಾದಗಳ ಕಾಲುಸೂಪೇ ಮಜವಂತೆ !

ಅಯ್ಯೋ….
ನನ್ನ ಬುದ್ಧಿಗೇನಾಗಿದೆ ಮಂಕು !?
ಇದು ನನ್ನ ಮಗುವಿನದೇ ಸ್ಕೂಲು ಬ್ಯಾಗು !
ಅಲ್ಲೆ ಎಲ್ಲಾದರೂ ಇದ್ದೀತು ನೋಡಿ
ಇನ್ನೂ ಮನೆಗೇ ಬಾರದಿರುವ
ನಿಮ್ಮ ಮಕ್ಕಳದೂ ನೆತ್ತರು ಮೆತ್ತಿದ ಸ್ಕೂಲು ಬ್ಯಾಗೂ……. !

ಇದನ್ನೂ ನೋಡಿ: “ಆ್ಯಸಿಡ್ ದಾಳಿ ಮೆಟ್ಟಿ ನಿಂತ ಶಾನುವಿನ ಜಯಗಾಥೆ” Janashakthi Media

Donate Janashakthi Media

Leave a Reply

Your email address will not be published. Required fields are marked *