ಖಾಸಗಿ ವಿ.ವಿ ಸ್ಥಾಪನೆ : ರಾಜ್ಯ ಸರಕಾರದ ಕ್ರಮಕ್ಕೆ ಸಂಘಟನೆಗಳ ವಿರೋಧ

ಬೆಂಗಳೂರು ಜ 31:  ಸಿ.ಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ಇಂದು ಅಧಿವೇಶನದಲ್ಲಿ ೧೧ ವಿಧೇಯಕಗಳನ್ನು ಮಂಡಿಸಿದ್ದು, ಏಟ್ರಿಯಾ, ವಿದ್ಯಾಶಿಲ್ಪ ಸೇರಿದಂತೆ ಮೂರು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿರುವುದು ಖಂಡನೀಯ. ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುವ ಬಿಜೆಪಿ ಸರಕಾರದ ಈ ತೀರ್ಮಾನವನ್ನು  ಭಾರತ ವಿದ್ಯಾರ್ಥಿ ಫೆಡರೇಷನ್  (ಎಸ್.ಎಫ್.ಐ),  ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಗಳು ಜಂಟಿಯಾಗಿ ವಿರೋಧಿಸಿದ್ದು, ಕೂಡಲೇ ಖಾಸಗಿ ವಿ.ವಿಗಳಿಗೆ ಅನುಮತಿ ನೀಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ರಾಜ್ಯದ ವಿದ್ಯಾರ್ಥಿ-ಯುವಜನರು ಹೋರಾಟಕ್ಕೆ ಮುಂದಾಗಬೇಕಾಗುತ್ತೆಂದು ಎಚ್ಚರಿಸಿವೆ.

ಇದನ್ನೂ ಓದಿ :  ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲವೂ ಇದೆ, ಆದರೆ ಏನೂ ಇಲ್ಲ

ಈ ಹಿಂದೆಯೂ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೆಲ್ಲ ಬಿಜೆಪಿ ಸರಕಾರ ಖಾಸಗಿ ವಿ.ವಿಗಳಿಗೆ ಅನುಮತಿ ನೀಡುತ್ತಲೇ ಬಂದಿದೆ. ಸರಕಾರಿ ವಿಶ್ವ ವಿದ್ಯಾಲಯಗಳು ಸಮರ್ಪಕ ಅನುದಾನದ ಕೊರತೆ, ಉಪನ್ಯಾಸಕರ ಕೊರತೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ನರಳುತ್ತಿರುವ ಗಂಭೀರ ಸಮಸ್ಯೆ ಪರಿಹರಿಸುವ ಬದಲಾಗಿ ಶ್ರೀಮಂತರಿಗೆ ಮಣೆ ಹಾಕಿ, ಉನ್ನತ ಶಿಕ್ಷಣವನ್ನು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವಂಚಿಸುವ ಪ್ರಕ್ರಿಯೆ ನಡೆಸುತ್ತಲೇ ಬಂದಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ತಿಳಿಸಿದ್ದಾರೆ.

ರಾಜ್ಯ ಸರಕಾರದ ಈ ಜನವಿದ್ರೋಹಿ ನೀತಿಯು ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣವೆಂಬಂತೆ ಮಾಡಿದೆ. ಈಗಾಗಲೆ ಖಾಸಗಿ ವಿವಿಗಳು ಹೆಚ್ಚು ಸುಲಿಗೆಯನ್ನು ಮಾಡುವ ಮೂಲಕ ಸಂಶೋಧನಾ ಶಿಕ್ಷಣವನ್ನು ತಳ ಸಮುದಾಯಕ್ಕೆ ಸಿಗದಂತೆ ಮಾಡಿವೆ. ಹಾಗಾಗಿ ನಾಡಿನ ಪ್ರಜ್ಞಾವಂತರೆಲ್ಲ ಸರಕಾರದ ಈ ನಡೆಯನ್ನು ವಿರೋಧಿಸಿ ಐಕ್ಯ ಚಳುವಳಿಗೆ ಮುಂದಾಗುತ್ತೇವೆ ಎಂದು ಎಸ್ಎಫ್.ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *