ಈ ರೈತ ಚಳವಳಿಯನ್ನೂ ಅದು ತೀವ್ರವಾಗಿ ಅನಾವರಣಗೊಳಿಸಿರುವ ಕೃಷಿ ಲೋಕದ ಬಿಕ್ಕಟ್ಟನ್ನೂ ಒಟ್ಟಾರೆಯಾಗಿ ದಾಖಲಿಸಬೇಕೆಂಬ ಉದ್ದಿಶ್ಯದಿಂದ ನಾನು ಈ ಸಾಕ್ಷ್ಯ ಚಿತ್ರ ಮಾಡುತ್ತಿದ್ದೇನೆ. ಈ ಚಳವಳಿಯ ಎರಡನೇ ಹಂತವನ್ನು ದಾಖಲಿಸುವುದು ಈ ಕಾರಣಕ್ಕೆ ಅತಿ ಮುಖ್ಯವಾಗಿತ್ತು. ಜನವರಿ 26ರ ರೈತರ ಟ್ರ್ಯಾಕ್ಟರ್ ಪೆರೇಡನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು, ಹೇಗಾದರೂ ಹೋಗಿ ಶೂಟ್ ಮಾಡಲೇಬೇಕು ಎನ್ನುವ ತವಕ ಅಂತೂ ಕೈಗೂಡಿದ್ದು ಹಲವಾರು ಸಹೃದಯ ಗೆಳೆಯ/ಗೆಳತಿಯರಿಂದ. 24ರಂದು ದೆಹಲಿಯಲ್ಲಿ ನಮ್ಮ ಎರಡನೇ ಹಂತದ ಶೂಟ್ ಆರಂಭಿಸಿ 31ರ ವರೆಗೆ ಏಳು ದಿನ ಶೂಟ್ ಮಾಡಿ ಫೆ.2ರ ಬೆಳಿಗ್ಗೆ ಮರಳಿದ್ದೇವೆ.
ಈಗಾಗಲೇ ಈ ಚಿತ್ರಕ್ಕೆ ಸಾಲವೂ ಸೇರಿ ಸುಮಾರು ಐದು ಲಕ್ಷ ಖರ್ಚಾಗಿದೆ. ಇನ್ನೂ ಹತ್ತು, ಹನ್ನೆರಡು ಲಕ್ಷಗಳದರೂ ಬೇಕು. ಈಗಲೂ ಹಣ ಹೊಂದಿಸುವ ಪ್ರಯತ್ನ ನಡೆದೇ ಇದ್ದರೂ, ಇದು ಜನರೇ ನಿರ್ಮಿಸಿದ ಸಿನಿಮಾ ಆದರೆ ಎಷ್ಟು ಚೆನ್ನ ಎಂದು ನಮಗೆ ಆಸೆಯಿದೆ. ಆಗ ಇದು copyleft ಚಿತ್ರವೂ ಆಗಿ ಎಲ್ಲರಿಗೂ ಮುಕ್ತವಾಗಿ ತೋರಿಸಬಹುದಲ್ಲಾ ಎಂಬುದೂ ನನ್ನ ಆಸೆ. ಹಾಗಾಗಿ ಈ ಚಿತ್ರಕ್ಕೆ ದೇಣಿಗೆ ಕೇಳುವಲ್ಲಿ ನಮಗೆ ಯಾವುದೇ ಅಳುಕು ಅಥವಾ ಮುಜುಗರ ಇಲ್ಲ. ಆಸಕ್ತರು ಮತ್ತು ಶಕ್ತಿಯಿದ್ದವರು ನನ್ನ UPI kesari.haravoo@oksbi ಬಳಸಿ ದೇಣಿಗೆ ನೀಡಬಹುದು.
ರಾಷ್ಟ್ರೀಯ ರೈತ ಚಳವಳಿಯನ್ನು ದಾಖಲಿಸುವ ಕೇಸರಿ ಹರವು ಅವರ ಸಾಕ್ಷ್ಯ ಚಿತ್ರಕ್ಕೆ ದೇಣಿಗೆಗೆ ಮನವಿ
ನಮ್ಮ ನಡುವಿನ ಪ್ರಗತಿಪರ ಚಿಂತಕ ಮತ್ತು ಕಾರ್ಯಕರ್ತ, ಸಮಾಜ ಜೀವಿ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರ ನಿರ್ದೇಶಕ, ಕೇಸರಿ ಹರವು ರವರು ಇತ್ತೀಚಿನ ವರ್ಷಗಳಲ್ಲಿ, ತಾನೂ ಇದೇನೂ ಅಲ್ಲವೇನೋ ಅನ್ನುವ ರೀತಿಯಲ್ಲಿ ಪರಿಸರ ರಕ್ಷಣೆ, ನದಿ-ಅರಣ್ಯ ಸಂರಕ್ಷಣೆ ಹಾಗೂ ರಾಜ್ಯಮಟ್ಟದ ಹಲವು ರೈತ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ; ಅಷ್ಟೇ ಅಲ್ಲ, ಎಲ್ಲ ರೀತಿಯ ವ್ಯಾಪಾರೀ ಮನೋಭಾವವನ್ನು ದೂರ ಇಟ್ಟು,ಕೇವಲ ಸಾಮಾಜಿಕ ಕಳಕಳಿಯ ಬದ್ದತೆಯಿಂದ ತಾನು ಭಾಗವಹಿಸಿದ ಎಲ್ಲ ಕಾರ್ಯಕ್ರಮಗಳನ್ನೂ ದಾಖಲಿಸಿ, ಯೂ ಟ್ಯೂಬ್ ಗೆ ಹಾಕಿ, ಸಾವಿರಾರು ಜನ ನೋಡುವ ಹಾಗೆ ಮಾಡಿದ್ದಾರೆ
ಕೇಸರಿ ಹರವು, ನಮ್ಮ ನಡುವೆ ಇದ್ದುಕೊಂಡು, ಯಾವ ರೈತ ಸಂಘಟನೆಯ, ರೈತ ನಾಯಕರ ಆಹ್ವಾನ, ವಿನಂತಿ ಇವುಗಳು ಇಲ್ಲದೆಯೇ, ಸ್ವಯಂ ಖುಷಿ ಮತ್ತು ಬದ್ದತೆಯಿಂದ ಎರಡು ಬಾರಿ ದೆಹಲಿಗೆ ಹೋಗಿ ಹತ್ತು-ಹದಿನೈದು ದಿನ ಇದ್ದು, ರೈತರ ಜೊತೆ ತಾನೂ ಅವರ ರೀತಿಯ ಎಲ್ಲ ಕಷ್ಟಗಳನ್ನೂ ಅನುಭವಿಸಿ, ಪ್ರಮುಖ ಹೋರಾಟಗಳನ್ನು ದಾಖಲಿಸಿಕೊಂಡು ಮರಳಿ ಬೆಂಗಳೂರಿಗೆ ಬಂದಿದ್ದಾರೆ. ನಾನು ಕೇಸರಿಗಿಂತ ತಾರೀಫ್ ಮಾಡಬೇಕಿರುವುದು, ಅವರ ಕ್ಯಾಮರಾ ಸಹಾಯಕರಾದ ಪ್ರವೀಣ್ ಕುಮಾರ್ ಅವರಿಗೆ. ಕೇಸರಿ ಜೊತೆ ಕೆಲಸ ಮಾಡಿ, ಸಂಭಾವನೆಯನ್ನು ಸಾಲದ ರೂಪದಲ್ಲಿ, ಎಂದೋ ಒಂದು ದಿನ ಬರಬಹುದು, ಬರಲಿ ಎಂದು ಇಂದಿಗೆ ಪುಕ್ಕಟ್ಟೆಯಾಗಿ ಕೆಲಸ ಮಾಡಿದವರು.
ಕೇಸರಿ ಹರವೂ ತಾನೇ ಬರೆದ ಲೇಖನ ಕೆಳಗೆ ಇದೆ. ಮಾಡಿದ ಸಾಲಗಳು, ಅವನಿಗೆ ಬಂದಿರುವ ದೇಣಿಗೆ ಇವುಗಳ ಸಮಗ್ರ ಮಾಹಿತಿ ಕೊಟ್ಟು,ದೇಣಿಗೆಗೆ ಮನವಿ ಮಾಡಿದ್ದಾರೆ. ನಾನೂ ಒಂದಿಷ್ಟು ಕೊಡುತ್ತೇನೆ. ಅದು ನಿಮ್ಮಗಳ ಗಮನಕ್ಕೆ. ನೀವೂ ಒಂದಿಷ್ಟು ದೇಣಿಗೆಕೊಡಲು ಮನಸ್ಸು ಮಾಡಿದಲ್ಲಿ, ನಿಮ್ಮಿಂದ ದೇಣಿಗೆ ಸಾಧ್ವಯವಾದಲ್ಲಿ, ಅವನ ಸಾಲಗಳು ತೀರಿ, ಈ ರಾಷ್ಟ್ರೀಯ ರೈತ ಹೋರಾಟದ ಒಂದು ಬಹಳ ಉತ್ತಮ ಸಾಕ್ಷಿಚಿತ್ರ ನಮಗೆ ಕೇಸರಿ ಕಡೆಯಿಂದ ದೊರಕಬಹುದು. ಅದಕ್ಕೆಲ್ಲ ನಾವು ಸ್ಪಂದಿಸಬೇಕಿದೆ ಎಂದು ಬೆಂಗಳೂರು ಸಮುದಾಯದ
ಗುಂಡಣ್ಣ ಚಿಕ್ಕಮಗಳೂರು ತಿಳಿಸಿದ್ದಾರೆ.
ಕೇಸರಿ ಹರವು ರವರ ಮನವಿ ಈ ರೀತಿ ಇದೆ
– ಕೇಸರಿ ಹರವು