ನೀಟ್ ಮತ್ತು ನೆಟ್ ಪರೀಕ್ಷೆಯಲ್ಲಿ ಕಳಪೆ ನಿರ್ವಹಣೆ; ಅವಿರೋಧ ನಿರ್ಣಯ ಆಂಗೀಕರಿಸಿದ ಕೇರಳ

ತಿರುವನಂತಪುರ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನೀಟ್ ಮತ್ತು ನೆಟ್ ಪರೀಕ್ಷೆಯನ್ನು ಕಳಪೆಯಾಗಿ ನಿರ್ವಹಿಸಿದ್ದಕ್ಕೆ ಸಂಬಂಧಿಸಿದಂತೆ  ಕೇರಳ ರಾಜ್ಯ ವಿಧಾನಸಭೆ ಬುಧವಾರ ಅವಿರೋಧ ನಿರ್ಣಯ ಆಂಗೀಕರಿಸಿದೆ.

ಈ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರಾದ ಬಿ.ಬಿಂಧು  ನಿರ್ಣಯ ಮಂಡಿಸಿದ್ದು, ಆಗಿರುವ ಪ್ರಮಾದಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮತ್ತು ಮುಂದೆ ಇಂಥ ತಪ್ಪುಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ : 18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ: ಧ್ವನಿಮತ ಮೂಲಕ ಅಂಗೀಕಾರ

ಸಮರ್ಪಕವಾಗಿ ನಡೆಯುತ್ತಿದ್ದ ರಾಜ್ಯಮಟ್ಟದ ಪರೀಕ್ಷೆಯನ್ನು ರದ್ದುಪಡಿಸಿದ ಬಳಿಕ ನೀಟ್ ಪರೀಕ್ಷೆಯನ್ನು ಆರಂಭಿಸಲಾಗಿದೆ. ಯಾವುದೇ ಲೋಪಗಳು ಇಲ್ಲದೇ ಪರೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಎನ್‍ಟಿಎ ಪದೇ ಪದೇ ತೋರಿಸಿಕೊಟ್ಟಿದೆ” ಎಂದು ಸಚಿವರು ವಿವರಿಸಿದರು.

ಎನ್‍ಟಿಎ ನಡೆಸಿದ ಪರೀಕ್ಷೆಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಖಂಡಿಸುವ ಮತ್ತೊಂದು ನಿರ್ಣಯವನ್ನು ಕೂಡಾ ವಿಧಾನಸಭೆ ಆಂಗೀಕರಿಸಿತು. ಎಲ್‌ಡಿಎಫ್‌ ಶಾಸಕ ಎಂ.ವಿಜಿನ್ ಈ ನಿಲುವಳಿ ಸೂಚನೆ ಮಂಡಿಸಿದರು.

ಇದನ್ನು ನೋಡಿ : ಸ್ಪೀಕರ್‌ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್‌ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *