ಮತದಾನ : ತಮ್ಮ ಹಕ್ಕು ಚಲಾಯಿಸಿದ ಗಣ್ಯರು

ಇಂದು ಕೇರಳ, ತಮಿಳುನಾಡು ಮತ್ತು ಪುರುಚೇರಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಮೂರು ರಾಜ್ಯಗಳಲ್ಲಿ ಒಂದು ಹಂತದಲ್ಲಿ ಮತದಾನ ನಡೆಯಲಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿ ಎರಡು ರಾಜ್ಯದಲ್ಲಿ 2 ಹಂತದಲ್ಲಿ ಈಗಾಗಲೇ ಮತದಾನ ಪ್ರಕ್ರಿಯೆ ನಡೆದಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಇಂದು ಮೂರನೇ ಹಂತದ ಮತದಾನ ಪ್ರಕ್ರಿಯೆಯಲ್ಲಿದೆ. ಹಾಗೆಯೇ ಉಳಿದ ಮೂರು ರಾಜ್ಯಗಳಾದ ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಇಂದು ಒಂದೇ ಹಂತ ಹಾಗೂ ಅಂತಿಮ ಹಂತದ ಚುನಾವಣೆಯಾಗಿದೆ.

ಇಂದು ಒಟ್ಟಾರೆ 475 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಕೇರಳ :

ಕೇರಳದ 2.74 ಕೋಟಿ ಮತದಾರರು 140 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 957 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಪ್ರಭುತ್ವ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಡುವಿನ ಜಿದ್ದಾಜಿದ್ದಿಗೆ ಅಣಿಯಾಗಿದೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಶೇ .80.38 ರಷ್ಟು ಮತದಾನವಾಗಿತ್ತು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಾರಂಭವಾದ ನಂತರ ಬೆಳಿಗ್ಗೆ 9: 30 ರವರೆಗೆ ಮತದಾನದ ಪ್ರಮಾಣ ಶೇ 14.52ಕ್ಕೆ ತಲುಪಿತು.

ರಾಜ್ಯದ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ ಡಿಸಿಸಿ ಕಾರ್ಯದರ್ಶಿ ಸಿ ರಘುನಾಥ್ ವಿರುದ್ಧ ಸ್ಪರ್ಧಿಸಿದ್ದಾರೆ. ಹಿಂದಿನ ರಾಜ್ಯ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ 87,329 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.

ಮತದಾನ ಸುತ್ತಲು ಸಿಸಿ ಕ್ಯಾಮರಾಗಳ ಮೂಲಕ ದೃಶ್ಯಗಳನ್ನು ಸೆರೆಯುವಂತಹ ವ್ಯವಸ್ಥೆಯು ನಡೆದಿದ್ದು, ಈ ಚಿತ್ರಗಳು ಪಿಣರಾಯಿ ಗ್ರಾಮವೊಂದರ ದೃಶ್ಯಗಳಾಗಿವೆ.

ಪೊನ್ನಾನಿ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಇ ಸುರೇಂದ್ರನ್‌ ಅವರು ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಮತ ಚಲಾಯಿಸಿದ ನಂತರದಲ್ಲಿ ಎಲ್‌ಡಿಎಫ್ ಬೆಂಬಲಿಗರು ಮಂಗಳವಾರ ಬೆಳಿಗ್ಗೆ ಕಣ್ಣೂರಿನ ಅದೇ ಮತದಾನ ಕೇಂದ್ರಕ್ಕೆ ಮತ ಚಲಾಯಿಸಿದರು. ವಿಶೇಷವೆಂದರೆ, ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲು ಎಲ್ ಡಿ ಎಫ್ ಬೆಂಬಲಿಗರು ತಮ್ಮ ಕೂದಲನ್ನು ಕೆಂಪು ಬಣ್ಣದಲ್ಲಿ ಬಣ್ಣ ಮಾಡಿದ್ದಾರೆ.

ಕರಿಯಾನ್, ಮಾಂಚೇರಿಯಿಂದ ಪ್ರದೇಶದ ಬುಡಕಟ್ಟು ಸಮುದಾಯದವರು ತಮ್ಮ ಮತವನ್ನ ಚಲಾಯಿಸಿದರು. ಮತ ಚಲಾಯಿಸಲು ಬೆಟ್ಟಗಳಿಂದ ಮಳಪ್ಪುರಂ ಜಿಲ್ಲೆಯ ನೆಡುಂಕಯಂನ ಮತಕೇಂದ್ರಕ್ಕೆ ಬಂಣದ ದೃಶ್ಯಗಳು.

ಕೇರಳ ರಾಜ್ಯದ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರು ಬೆಳಿಗ್ಗೆ 10:00 ಕ್ಕೆ ಕಣ್ಣೂರಿನಲ್ಲಿ ಮತ ಚಲಾಯಿಸಿದರು.

ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಂದ 135 ಪೂಜಪ್ಪುರಂ ಮತಗಟ್ಟೆ ಕೇಂದ್ರದಲ್ಲಿ ನೆಮೊಮ್ ವ್ಯಾಪ್ತಿಯ ತಿರುವನಂತಪುರಂ ಜಿಲ್ಲೆ ಮತ ಚಲಾಯಿಸಿದರು

ಮಳಿಯಾಳಂ ಚಲನಚಿತ್ರನಟಶ್ರೀ.ಮಮ್ಮುಟ್ಟಿಅವರು ಎರ್ನಾಕುಲಂ ಜಿಲ್ಲೆಯಸಿಕೆಸಿಎಲ್‌ಪಿಎಸ್, ಪೊನ್ನೂರುನ್ನಿವ್ಯಾಪ್ತಿಯ83 ತ್ರಿಕ್ಕಕರಎಲ್‌ಎಸಿಕೇಂದ್ರದಲ್ಲಿಮತಚಲಾಯಿಸಿದರು.ಇಂದು ಮಧ್ಯಾಹ್ನದ ಹೊತ್ತಿಗೆ ತಮ್ಮ ಹಕ್ಕನ್ನು ಚಲಾಯಿಸಿದರು.

ಕೇರಳದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತದಾನ ಮಾಡಿದರು.

ಅಸ್ಸಾಂ ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಇಂದು ಮತಗಟ್ಟೆ ಕೇಂದ್ರಗಳ ಹೊರಗೆ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ತಮಿಳುನಾಡಿನಲ್ಲಿ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರು ಕುಟುಂಬ ಸಮೇತ ಮತದಾನ ಕೇಂದ್ರಕ್ಕೆ ಭಾಗವಹಿಸಿ ಮತ ಚಲಾಯಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸಿಲುವಂಪಲಯಂನ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ.

‌ತಮಿಳುನಾಡಿನಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಅವರು ಕೊರೊನಾ ಪಾಸಿಟಿವ್‌ ಇರುವುದರಿಂದ ಮೈಲಾಪುರ ಕ್ಷೇತ್ರದಲ್ಲಿ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದರು.

ತಮಿಳು ಚಿತ್ರನಟ ವಿಜಯ್ ಮತದಾನ ಕೇಂದ್ರಕ್ಕೆ ತಮ್ಮ ಹಕ್ಕನ್ನು ಚಲಾಯಿಸಲು ಸೈಕಲ್‌ ಸವಾರಿ ಮಾಡುವ ಮೂಲಕ ಮತಗಟ್ಟೆಗೆ ಆಗಮಿಸಿದರು.

ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ತಮ್ಮ ಕುಟುಂಬದೊಂದಿಗೆ ಹಾಗೂ ನಟ ರಜನಿಕಾಂತ್‌ ತಮ್ಮ ಮತವನ್ನು ಚಲಾಯಿಸಿದರು.

ಪುದುಚೇರಿಯಲ್ಲಿ ಮತಗಟ್ಟೆಯೊಂದರ ಮುಂಭಾಗ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲು ಸರತಿ ಸಾಲಿನಲ್ಲಿ ನಿಂತರುವುದು.

ಪುದುಚೇರಿ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಮತ ಚಲಾಯಿಸಿದರು.

ಕಾಂಗ್ರೆಸ್‌ ನಾಯಕ ಎನ್‌ ರಂಗಸ್ವಾಮಿ ಸರಕಾರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *