ಸೈಕಲ್ ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್; ಪೆಟ್ರೋಲ್ ಬೆಲೆ ಏರಿಕೆಗೆ ತಿರುಗೇಟು?

Please follow and like us:

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನಕ್ಕೆ ತಮಿಳು ನಟ ವಿಜಯ್ ಸೈಕಲ್​ನಲ್ಲೇ ತೆರಳಿ ಮತದಾನ ಮಾಡುವುದರ ಮೂಲಕ ಇಂಧನ ಬೆಲೆ ಏರಿಕೆಯ ವಿರೋಧಿಸಿದ್ದಾರಾ? ಎಂಬ ಹಲವು ಪ್ರಶ್ನೆಗಳು ಏಳುವಂತೆ ಮಾಡಿದ್ದಾರೆ.

ಕಪ್ಪು ಮುಖಗವಸಿನೊಂದಿಗೆ ದಳಿಪತಿ, ಭಾರೀ ಭದ್ರತೆಯಲ್ಲಿ ತಮ್ಮ ಮನೆಯಿಂದ ನೀಲಾಂಗರೈ ಮತದಾನ ಕೇಂದ್ರಕ್ಕೆ ಸೈಕಲ್​ನಲ್ಲಿ ತೆರಳಿ ಮತದಾನ ಮಾಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ತಮಿಳು ನಟ ವಿಜಯ್ ಸೈಕಲ್‌ ನಲ್ಲೆ ಮತಗಟ್ಟೆಗೆ ಬಂದು ಮತಚಲಾಯಿಸಿರುವುದಕ್ಕೆ  ಅಭಿಮಾನಿಗಳು ಇದನ್ನು ಇಂಧನ ಬೆಲೆ ಏರಿಕೆ ಕುರಿತು ಹೇಳಿಕೆಯಾಗಿ ನೋಡಿದರೆ ಇನ್ನು ಕೆಲವು ಅಭಿಮಾನಿಗಳು ಸೈಕಲ್‌ ನಲ್ಲೆ ಮತಗಟ್ಟೆಗೆ ಬಂದು ಮತಚಲಾಯಿಸಿರುವುದು ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.

ಜಿಎಸ್​​ಟಿ ನೋಟ್​ಬ್ಯಾನ್​ ಸೇರಿದಂತೆ  ಬಲಪಂಥೀಯರನ್ನು ಕೆರಳಿಸುವ ದೃಶ್ಯಗಳನ್ನು ಒಳಗೊಂಡಿರುವ ಅವರ ಚಲನಚಿತ್ರ ಮರ್ಸಲ್ ಬಿಡುಗಡೆಯಾದ ನಂತರ, ವಿಜಯ್ ತಮಿಳುನಾಡಿನ ಬಿಜೆಪಿಯಿಂದ ತೀವ್ರ ದಾಳಿಗೆ ಒಳಗಾಗಿದ್ದರು. ಅವರ ಇತ್ತೀಚಿನ ಬಿಡುಗಡೆಯ ಮಾಸ್ಟರ್ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿತ್ತು.

ರಜನಿಕಾಂತ್​ ಮತ್ತು ಕಮಲಹಾಸನ್​ ನಟರ ನಂತರ ತಮಿಳುನಾಡಿನಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತೊಬ್ಬ ನಟ ಎಂದರೆ ವಿಜಯ್. ಇವರ ಯಾವುದೇ ಹೇಳಿಕೆ ರಾಜಕೀಯವಾಗಿ ದೊಡ್ಡ ಮಹತ್ವ ಪಡೆದುಕೊಳ್ಳುತ್ತದೆ. ಯಾಕೆಂದರೆ ಇವರನ್ನು ಅನುಸರಿಸುವ ಅಭಿಮಾನಿ ಯುವ ಬಳಗಕ್ಕೆ ಯಾವುದೇ ಕೊರತೆ ಇಲ್ಲ. ಇದೇ ಕಾರಣಕ್ಕೆ ಅವರನ್ನು ಸುಮ್ಮನಾಗಿಸಲು ಬಿಜೆಪಿ ಸಾಕಷ್ಟು ಪ್ರಯತ್ನಿಸುತ್ತಿದೆಯಾದರೂ ನಟ ವಿಜಯ್ ಮಾತ್ರ ಬಿಜೆಪಿ ಗೆ ಕಿವಿಗೊಡದೆ ಜನತೆಯಪರ ಧ್ವನಿಯಾಗಿ ನಿಲ್ಲುತ್ತಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *