– ಸಮಸ್ಯೆ ಬಗೆಹರಿಸಿದರೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡೋಣ: ರೈತ ನಾಯಕರು
ಹೊಸದಿಲ್ಲಿ: ನೂತನ ಕೃಷಿ ಕಾನೂನುಗಳ ಪೂರ್ವಾಪರ ಕುರಿತು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ, ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯುತ್ತಿದೆ.
ಈ ಮಧ್ಯೆ ಊಟದ ಸಮಯದ ಬಿಡುವು ನೀಡಲಾಗಿದ್ದು, ರೈತ ಸಂಘಟನೆಗಳು ಕೇಂಧ್ರ ಸರ್ಕಾರ ಆಯೋಜಿಸಿದ್ದ ಭೋಜನ ಕೂಟವನ್ನು ತಿರಸ್ಕರಿಸಿ ಗಮನ ಸೆಳೆದಿದ್ದಾರೆ.
ಸಭೆಗೆ ತಮ್ಮದೇ ಸ್ವಂತ ಅಡುಗೆ ಕಟ್ಟಿಕೊಂಡು ಬಂದಿರುವ ರೈತ ಸಂಘಟನೆಗಖಳ ನಾಯಕರು, ಊಟದ ಸಮಯದಲ್ಲಿ ತಮ್ಮದೇ ಸ್ವಂತ ಅಡುಗೆಯನ್ನು ಪರಸ್ಪರ ಹಂಚಿಕೊಂಡು ತಿಂದಿದ್ದಾರೆ.
ಊಟದ ಬಿಡುವು ದೊರೆತ ತಕ್ಷಣ ಊಟದ ಕೋಣೆಯಲ್ಲಿ ತಮ್ಮದೇ ಸ್ವಂತ ಅಡುಗೆಯ ಬುತ್ತಿ ಬಿಚ್ಚಿದ ರೈತರು, ಸರದಿಯಲ್ಲಿ ನಿಂತು ಊಟ ಮಾಡಿದರು.
ಕೇಂದ್ರ ಸರ್ಕಾರ ನಮಗೆ ಭೋಜನ ವ್ಯವಸ್ಥೆ ಮಾಡಿರುವುದಕ್ಕೆ ಧನ್ಯವಾದ. ಆದರೆ ಈ ಸಮಯದಲ್ಲಿ ನಾವು ಕೇಂದ್ರ ಸರ್ಕಾರದ ಊಟ ಮಾಡಲು ಸಾಧ್ಯವಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿದರೆ ಆಗ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡೋಣ ಎಂದು ರೈತ ನಾಯಕರು ಹೇಳಿದ್ದು ವಿಶೇಷವಾಗಿತ್ತು.
ವಿಜ್ಞಾನ ಭವನದ ಊಟದ ಕೋಣೆಯಲ್ಲಿ ಸರದಿಯಲ್ಲಿ ನಿಂತು ಶಿಸ್ತಿನಿಂದ ಊಟ ಮಾಡಿದ ರೈತರನ್ನು ಕಂಡು, ವಿಜ್ಞಾನ ಭವನದ ಸಿಬ್ಬಂದಿ ಕೂಡ ಆಶ್ವರ್ಯಚಕಿತರಾದರು.