ಲಾಸಾ : ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ‘ಬಾಲಕನಲ್ಲಿ ನಾಲಿಗೆ ಚೀಪುವಂತೆ’ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಧರ್ಮಗುರುಗಳ ನಡೆಯನ್ನು ತೀಕ್ಷ್ಮವಾಗಿ ಖಂಡಿಸಿರುವ ಅಮೆರಿಕದ ಖ್ಯಾತ ರ್ಯಾಪ್ ಹಾಡುಗಾರ್ತಿ ಕಾರ್ಡಿ ಬಿ, ‘ನಿಮ್ಮ ಮಕ್ಕಳನ್ನು ಭಕ್ಷಕರಿಂದ ದೂರವಿಡಿ’ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ದಲೈಲಾಮಾ ಬಾಲಕನೊಬ್ಬನ ತುಟಿಗೆ ಚುಂಬಿಸಿದ್ದಾರೆ. ನಂತರ ಬಾಲಕನಿಗೆ ತಮ್ಮ ನಾಲಿಗೆ ಚೀಪುವಂತೆ ಹೇಳಿದ್ದಾರೆ. ಬಾಲಕ ಧರ್ಮಗುರುಗಳು ಹೇಳಿದ ಹಾಗೆ ನಾಲಿಗೆ ಚೀಪಲು ಮುಂದಾಗಿದ್ದನು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹಲವರು ಧರ್ಮಗುರುಗಳ ನಡೆಯನ್ನು ಖಂಡಿಸಿದ್ದರು. ವಿರೋಧ ವ್ಯಕ್ತವಾಗುತ್ತಲೇ ದಲೈಲಾಮಾ ಬಾಲಕ ಮತ್ತು ಆತನ ಪೋಷಕರಲ್ಲಿ ಕ್ಷಮೆಯಾಚಿಸಿದ್ದರು.
Man I’m telling yall https://t.co/SnVBqYW9Cj
— Cardi B (@iamcardib) April 10, 2023
ಈ ವಿಡಿಯೊಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಕಾರ್ಡಿ ಬಿ, ‘ಪ್ರಪಂಚದ ತುಂಬಾ ವಿನಾಶಕಾರಿ ಭಕ್ಷಕರಿದ್ದು, ಮುಗ್ಧ ಅಮಾಯಕ ಜನರು, ಮಕ್ಕಳನ್ನು ಅವರು ಮೊದಲು ಭೇಟೆಯಾಡುತ್ತಾರೆ’ ಎಂದು ಹೇಳಿದ್ದಾರೆ.
‘ಭಕ್ಷಕರು ನಮ್ಮ ನರೆಹೊರೆಯಲ್ಲಿಯೇ ಇರಬಹುದು ಅಥವಾ ಶಾಲಾ ಶಿಕ್ಷಕರು ಆಗಿರಬಹುದು, ಹಣವಂತರು ಆಗಿರಬಹುದು, ನಮ್ಮ ಚರ್ಚ್ಗಳಲ್ಲಿಯೂ ಇರಬಹುದು. ಆದ್ದರಿಂದ ನಿಮ್ಮ ಮಕ್ಕಳೊಂದಿಗೆ ನಿರಂತರವಾಗಿ ಮಾತನಾಡಿ ಅವರಿಗೆ ಯಾವುದು ತಪ್ಪು ಮತ್ತು ಯಾವುದು ಸರಿ ಎನ್ನುವುದರ ಬಗ್ಗೆ ತಿಳಿಸಿ’ ಎಂದು ಹೇಳಿದ್ದಾರೆ.
ಹಲವು ಟ್ವಿಟರ್ ಬಳಕೆದಾರರು ಕಾರ್ಡಿ ಬಿ ಅವರ ಮಾತನ್ನು ಬೆಂಬಲಿಸಿದ್ದಾರೆ. ‘ನೀವೊಬ್ಬರಾದರು ಈ ಬಗ್ಗೆ ಮುಕ್ತವಾಗಿ ಮಾತನಾಡಿರವುದು ಸಂತಸ ತಂದಿದೆ’ ಎಂದು ಹೇಳಿದ್ದಾರೆ. ಬೆಂಬಲಿಸಿದ ಎಲ್ಲರಿಗೂ ಕಾರ್ಡಿ ಬಿ ಧನ್ಯವಾದ ತಿಳಿಸಿದ್ದಾರೆ.