‘ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿವಿ ಉಳಿಸಿ ಆಂದೋಲನ’ ವತಿಯಿಂದ ಬೃಹತ್ ರ‍್ಯಾಲಿ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಹಾಗೂ ಜಾತಿವಾದಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಸಂಘಟನೆಗಳು ಸಮಾಜದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರಿಂದ ವಿಶ್ವವಿದ್ಯಾಲಯವನ್ನು ಉಳಿಸುವಂತೆ ಆಗ್ರಹಿಸಿ ‘ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿವಿ ಉಳಿಸಿ ಆಂದೋಲನ’ ಸಮಿತಿ ಬುಧವಾರ ಬೃಹತ್ ಜಾಥಾ ನಡೆಸಿದ್ದು, ರಾಜ್ಯದ ಹಲವಾರು ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸಿವೆ.

ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಹಾಗೂ ಶೈಕ್ಷಣಿಕ ನಿರ್ದೇಶಕ ಪ್ರೊ. ಬಸವರಾಜ ಪಿ. ಡೋಣೂರ ಅವರ ಸಹಕಾರದೊಂದಿಗೆ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆರ್‌ಎಸ್‌ಎಸ್‌ ಹಾಗೂ ಎಬಿವಿಪಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದನ್ನು ವಿರೋಧಿಸುವ ವಿದ್ಯಾರ್ಥಿಗಳ ಮೇಲೆ ಕುಲಪತಿಯೆ ಮುಂದೆ ನಿಂತು ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರೀಯ ವಿವಿ

ಇದನ್ನೂ ಓದಿ: ನವೆಂಬರ್ 26 ರಿಂದ ರೈತ – ಕಾರ್ಮಿಕರ ಮಹಾಧರಣಿ

ಸಮಾಜದ ಸಮಸ್ಯೆಗಳಿಗೆ ಸಂಶೋಧನೆಯ ಮೂಲಕ ಪರಿಹಾರ ಸೂಚಿಸಬೇಕಾದ ವಿಶ್ವವಿದ್ಯಾಲಯ ಜಾತಿವಾದಿಗಳ, ಕೋಮುವಾದಿಗಳ, ಮತಾಂದರ ಪ್ರಯೋಗ ಶಾಲೆಯಾಗುತ್ತಿದ್ದು, ಇದನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಿ, ಅವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆರ್‌ಎಸ್‌ಎಸ್ ಶಾಖಾ ಮತ್ತು ಧಾರ್ಮಿಕ ಆಚರಣೆಗಳನ್ನು ಕ್ಯಾಂಪಸ್‌ನಲ್ಲಿ ನಡೆಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೋರಾಟಗಾರರು ಕಿಡಿ ಕಾರಿದರು.

ಉಪ ಕುಲಪತಿ ಪ್ರೊ. ಬಟ್ಟುಸತ್ಯಾನಾರಾಯಣ, ಬಸವರಾಜ ಡೋಣೂರ ಅವರೇ ಇದಕ್ಕೆಲ್ಲಾ ನೇರ ಕಾರಣಕರ್ತರಾಗಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಕೇಂದ್ರೀಯ ವಿವಿ

ಇದನ್ನೂ ಓದಿ: ಗುತ್ತಿಗೆ ಪದ್ದತಿ ಕೈಬಿಟ್ಟು ಸೇವಾ ಭದ್ರತೆ ಖಚಿತಪಡಿಸಿ – ಹಾಸ್ಟೆಲ್‌ ನೌಕರರ ಅನಿರ್ದಿಷ್ಟ ಮುಷ್ಕರ

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ, ರಾಜ್ಯ ಕೋಲಿ-ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ಎಸ್‌ಎಫ್‌ಐ, ಕೆವಿಎಸ್‌, ಕರ್ನಾಟಕ ಜನಶಕ್ತಿ, ಜಮಾತೆ ಇಸ್ಲಾಂ, ಪ್ರಬುದ್ಧ ಭಾರತ ಸಂಘರ್ಷ ಹಲವಾರು ಪ್ರಗತಿಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಪ್ರತಿಭಟನಾ ಮರವಣಿಗೆಯು ಕಡಗಂಚಿಯ ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆ ಮೈದಾನದಿಂದ ವಿಶ್ವವಿದ್ಯಾಲಯ ಗೇಟ್‌ವರೆಗೆ ನಡೆಯಿತು. ಹೋರಾಟ ಸಮಿತಿಯ ಅಧ್ಯಕ್ಷ ಡಿ.ಜಿ. ಸಾಗರ, ಗೌರವ ಅಧ್ಯಕ್ಷ ಪ್ರೊ.ಆರ್‌.ಕೆ. ಹುಡಗಿ, ಪದಾಧಿಕಾರಿ ಮೀನಾಕ್ಷಿ ಬಾಳಿ, ಕಾರ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್, ಕಾರ್ಯದರ್ಶಿ ಮಾರುತಿ ಗೋಖಲೆ, ಪಾದಾಧಿಕಾರಿಗಳಾದ ಸುರೇಶ ಹಾದಿಮನಿ, ಪ್ರಕಾಶ ಮೂಲಭಾರತಿ, ಮಹಾದೇವ ದನ್ನಿ, ಎಸ್‌.ಪಿ. ಸುಳ್ಳದ್, ಎಚ್‌.ಶಂಕರ್, ಅಶ್ವಿನಿ ಮದನಕರ್, ಲಕ್ಷ್ಮಿಕಾಂತ ಹುಬ್ಬಳ್ಳಿ, ಹಣಮಂತ ಭೊದನ, ಸಿ.ಕೆ.ಮಂಜು, ಭೀಮಶಾದರಿ, ದತ್ತಾತ್ರೇಯ ಇಕ್ಕಳಕಿ ಸೇರಿದಂತೆ ರಾಜ್ಯದ ಪ್ರಮುಖ ಹೋರಾಟಗಾರು ಭಾಗವಹಿಸಿದರು.

 

ವಿಡಿಯೊ ನೋಡಿ: ʼಹೊರಗುತ್ತಿಗೆʼ ಎಂಬ ಜೀತ ಪದ್ದತಿಯಿಂದ ಮುಕ್ತಿಗೊಳಿಸಿ ಹಾಸ್ಟೆಲ್‌ ಅಡುಗೆದಾರರಿಂದ ಅನಿರ್ದಿಷ್ಟ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *