ಕನ್ನಡ ಸಾಹಿತ್ಯ ಸಮ್ಮೇಳನ | ಆಹ್ವಾನ ಪತ್ರಿಕೆಯಲ್ಲಿ ಆರ್ಟಿಕಲ್ 18 ಉಲ್ಲಂಘನೆ – ಸ್ವಯಂ ದೂರಿಗೆ ಆಗ್ರಹ

ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನದ ಅರ್ಟಿಕಲ್ 18 ಉಲ್ಲಂಘನೆಯಾಗಿದ್ದು, ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ (Suo motu case) ದಾಖಲಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ, ತಳಗವಾದಿ, ಹೋರಾಟಗಾರರಾದ ರಾಜೇಂದ್ರ ಪ್ರಸಾದ್, ಕೆ. ಎಸ್. ನಾಗೇಗೌಡ, ಕೀಲಾರವರು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ನಗರದಲ್ಲಿ 2024 ರ ಡಿಸೆಂಬರ್ 20, 21, 22 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು (ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆ) ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ನಡೆಸುತ್ತಿವೆ.

ಇದನ್ನೂ ಓದಿಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ!

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ರಾಜಕುಟುಂಬದ ಸದಸ್ಯರಾದ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನು ಉಲ್ಲೇಖಿಸುವಾಗ ”ಶ್ರೀಮನ್ ಮಹಾರಾಣಿ” ಎಂದು ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನದ ಆರ್ಟಿಕಲ್ 18ನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ತರಹದ ಉಲ್ಲಂಘನೆಯು ಮಾಧ್ಯಮಗಳಲ್ಲಿಯೂ ಸಹ ಯಥೇಚ್ಛವಾಗಿ ನಡೆಯುತ್ತಿದೆ.

ಇಂಡಿಯಾ ಉಪಖಂಡದಲ್ಲಿ ಎಲ್ಲರನ್ನು ಸರಿಸಮಾನರಾಗಿ ಕಾಣುವ ಪ್ರಜಾಸತ್ತಾತ್ಮಕ ಗಣರಾಜ್ಯವು ಜಾರಿಯಲ್ಲಿರುವಾಗ ಅರಸೊತ್ತಿಗೆಯ ಟೈಟಲ್ ಗಳನ್ನು ಬಳಸುವಂತಿಲ್ಲ ಮತ್ತು ಬಳಸಕೂಡದೆಂದು ಸಂವಿಧಾನದಲ್ಲಿ ಸ್ವಷ್ಟವಾಗಿ ಹೇಳಲಾಗಿದೆ.

ರಾಜ್ಯಾಂಗದ ಸುಪರ್ದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲೇ ಇಂತಹ ಸಾಂವಿಧಾನಿಕ ಉಲ್ಲಂಘನೆಯಾದಲ್ಲಿ ಮಾಧ್ಯಮಗಳಲ್ಲಿ ಮತ್ತು ನಾಗರೀಕ ಸಮಾಜದಲ್ಲಿ ಮತ್ತಷ್ಟು ಉಲ್ಲಂಘನೆಗಳು ನಡೆಯಲಿವೆ. ಹಾಗಾಗಿ ಈ ಕುರಿತಾಗಿ ತಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಬೇಕೆಂದು ಪತ್ರದಲ್ಲಿ ಬರೆಯಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *