ಜಾರ್ಖಂಡ್: ಸರ್ಕಾರವು ಎರಡು ಲಕ್ಷದವರೆಗಿನ ಸಾಲ ಮನ್ನಾ ಮಾಡಿ ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಮುಖ್ಯಮಂತ್ರಿ ಹೇಮಂತ್ ಸೋರೆನ್ 1,76,977 ರೈತರ 400.66 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ, ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರವು ತನ್ನ ಪ್ರಮುಖ ಭರವಸೆಗಳಲ್ಲಿ ಒಂದನ್ನು ಈಡೇರಿಸಿದೆ. ಎರಡು
ಮಯ್ಯಾ ಸಮ್ಮಾನ್ ಯೋಜನೆಯನ್ನು ಈ ಹಿಂದೆ ಸೊರೆನ್ ಸರ್ಕಾರ ಆರಂಭಿಸಿತ್ತು, ಈ ಯೋಜನೆಯಡಿ, ಮಹಿಳೆಯರು ಆಗಸ್ಟ್‌ನಿಂದ ಪ್ರತಿ ತಿಂಗಳು 1,000 ರೂ. ಅಲ್ಲದೆ, ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ಸಹ ಮನ್ನಾ ಮಾಡಲಾಗಿದ್ದು, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಎರಡು
ನಾವು ಮೊದಲ ಹಂತದಲ್ಲಿ 50,000 ರೂ.ವರೆಗಿನ ಸಾಲವನ್ನು ಮನ್ನಾ ಮಾಡಲು ಮತ್ತು ರೈತರಿಗೆ ಪ್ರಯೋಜನಗಳನ್ನು ನೀಡಲು ಯೋಜಿಸಿದ್ದೇವೆ. ಒಮ್ಮೆ ರೈತರು ಪ್ರತಿಕೂಲ ಹವಾಮಾನದಿಂದ ಹಾನಿಗೊಳಗಾದರೆ, ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ನಾವು ರಾಜ್ಯದ ಸುಮಾರು 38 ಲಕ್ಷ ನೋಂದಾಯಿತ ರೈತರ 2 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದ್ದೇವೆ. ಇಂದು ಇದರ ಅಡಿಯಲ್ಲಿ ಸುಮಾರು 400 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಪಾಟ್ನಾ: ನದಿ ಸ್ನಾನದ ವೇಳೆ ನೀರಿನಲ್ಲಿ ಮುಳುಗಿ 46 ಮಂದಿ ಸಾವು
ಸಾಲ ಮನ್ನಾ ಮಿತಿ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಚುನಾವಣಾ ತಂತ್ರ ಎಂದು ಹೇಳಿದೆ. “ಹೇಮಂತ್ ಸರ್ಕಾರ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಕಳೆದ ಐದು ವರ್ಷದಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿಯಾಗಿಲ್ಲ. ಇದೀಗ ಅವರ ಅವಧಿ ಕೊನೆಗೊಳ್ಳುತ್ತಾ ಬಂದಿದ್ದು, ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಭೀತಿಯಿಂದ ಇಂಥ ತುರಾತುರಿಯ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ವಕ್ತಾರ ಅಜಯ್ ಶಾ ಹೇಳಿದ್ದಾರೆ.
ಬಿಜೆಪಿಯನ್ನು ಗುರಿಯಾಗಿಸಿ ಮಾತನಾಡಿದ ಸೊರೆನ್, ಇಂದು ನಾವು ರೈತರನ್ನು ಗೌರವಿಸುತ್ತಿದ್ದೇವೆ. ಇದಕ್ಕೂ ಬಿಜೆಪಿ ಅಡ್ಡಿಪಡಿಸಬಾರದು. ಏಕೆಂದರೆ ನಿಮ್ಮ ಅಭಿವೃದ್ಧಿಗೆ ಏನೇ ಕೆಲಸ ಮಾಡಿದರೂ ಬಿಜೆಪಿಯವರು ಅದಕ್ಕೆ ಅಡ್ಡಿ ಸೃಷ್ಟಿಸುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಶೇ.80ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ರೈತರ ವಿರುದ್ಧ ಕೇಂದ್ರ ಸರ್ಕಾರ ಸಂಚು ಹೂಡಿದೆ ಎಂದು ಆಪಾದಿಸಿದರು.
ಈ ರಾಜ್ಯದಲ್ಲಿ ಅಪಾರ ಪ್ರಮಾಣದ ಕೃಷಿ ಸಾಮರ್ಥ್ಯವಿದ್ದರೂ ಹಣ್ಣು, ಹಾಲು, ಕೋಳಿ ಮಾಂಸ ಎಲ್ಲವೂ ಹೊರಗಿನಿಂದ ಬರುತ್ತಿದ್ದು, ನಮ್ಮ ರಾಜ್ಯದಲ್ಲಿ ಹವಾಮಾನ, ಮಣ್ಣು, ಕಷ್ಟಪಟ್ಟು ದುಡಿಯುವ ರೈತರು ಎಲ್ಲವೂ ಇರುವುದರಿಂದ ನಮ್ಮ ಉತ್ಪಾದನೆ ಕಡಿಮೆ ಇರುವ ಕಾರಣ ಈ ಕೆಲಸ ಮಾಡಬೇಕಾಗಿದೆ ಎಂದರು. ನಮ್ಮ ಸರ್ಕಾರ ಬಡವರಿಗೆ ಊಟ, ಬಟ್ಟೆ, ವಸತಿ ನೀಡುತ್ತಿದೆ. 2019 ರ ಮೊದಲು, ಸರ್ಕಾರವು ಜನರನ್ನು ಹಸಿವಿನಿಂದ ಇರುವಂತೆ ಮಾಡುತ್ತಿತ್ತು ಎಂದರು.
ಇದನ್ನೂ ನೋಡಿ: ಸಿಎಂ ವಿರುದ್ಧ ಎಫ್‌ಐಆರ್ ಸಾಧ್ಯವಿಲ್ಲ