ಗಜೇದ್ರಗಡ: ದೇಶದ ಶೇ.75 ರಷ್ಟು ರೈತರು ಕೃಷಿ ಕ್ಷೇತ್ರ ಅವಲಂಬಿಸಿರುವಾಗ ಮೋದಿ ನೇತೃತ್ವದ ಸರ್ಕಾರವು ಭೂಮಿಯನ್ನು ಕಬಳಿಸುವ ಕಾರ್ಪೊರೇಟ್ ಕಂಪನಿಗಳ ಪರ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದು, ಈ ತಿದ್ದುಪಡಿಗೆ ಸೋಲು ಕಾದಿದೆ ಎಂದು ರಾಜ್ಯ ರೈತ ಸಂಘದ ಜಂಟಿ ಕಾರ್ಯದರ್ಶಿ ಬಿ ಎಸ್ ಸೋಪ್ಪಿನ ಎಚ್ಚರಿಸಿದರು.
ನಗರದ ಸಿಐಟಿಯು ಸಂಘಟನೆಯ ಕಛೇರಿಯಲ್ಲಿ ರವಿವಾರ ನಡೆದ ರೈತ-ಕಾರ್ಮಿಕ-ಕೃಷಿಕೂಲಿಕಾರರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದೇ ರೀತಿ ರಾಜ್ಯ ಸರ್ಕಾರವು ವಿಧನಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡಸದೇ ಕೇಂದ್ರದ ಮಸೂದೆಗಳಿಗೆ ಅಂಗೀಕರಿಸಿದೆ. ಈ ಕ್ರಮಗಳು ಕಾರ್ಪೊರೇಟ್ ಕಂಪನಿಗಳ ಲೂಟಿಗೆ ಮಾತ್ರವೇ ಸಹಾಯಕವಾಗಲಿದೆ ಎಂದು ಆರೋಪಿಸಿದರು.
ಜಿಲ್ಲಾ ಸಿಐಟಿಯು ಮುಖಂಡರಾದ ಮಾರುತಿ ಚಿಟಗಿ ಮಾತನಾಡಿ ಎಪಿಎಂಸಿ ಕಾಯ್ದೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ನಾವೆಲ್ಲರೂ ಖಂಡಿಸುವ ಅನಿವಾರ್ಯತೆ ಇದೆ. ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಸದಾ ಹೋರಾಡಲೇಬೇಕು . ಹಾಗೂ ನವೆಂಬರ 26-27 ರ ಅಖಿಲ ಭಾರತ ಮುಸ್ಕರದ ಕರೆಯ ಭಾಗವಾಗಿ ಇಂದು ಜಂಟಿ ಸಮಾವೇಶಗಳು ನಡೆಸಿ ಜನಜಾಗೃತಿ ಪ್ರರಚಾರಾಂದೋಲನ ನಡೆಸಲಾಗುವದು ಹಾಗಾಗಿ ಎಲ್ಲರೂ ಮುಂದಿನ ದಿನಗಳಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪಾಲ್ಗೊಂಡು ಮುಸ್ಕರಕ್ಕೆ ಮುಂದಾಗೋಣ ಎಂದರು.
ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರಾಗಿ ಬಾಲು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ರಾಠೋಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಶಿವಾನಂದ ಬೊಸ್ಲೆ ವಂದಿಸಿದರು.
ಈ ಸಂದರ್ಭದಲ್ಲಿ ಚಂದ್ರು ರಾಠೋಡ, ಸುವರ್ಣ ಇಂಡಿ, ರೆವಣಪ್ಪ ರಾಠೋಡ, ನೀಲಮ್ಮ ಹಿರೇಮಠ, ಸುವರ್ಣ ಚಿಗರಿ, ರುದ್ರಪ್ಪ ರಾಠೋಡ, ತುಕಾರಾಂ ಚವ್ಹಾಣ ಮುಂತಾದವರು ಹಾಜರಿದ್ದರು.