ಮಂಡ್ಯ : ಅಮಿತ್ ಷಾ ಕಾರ್ಯಕ್ರಮಕ್ಕಾಗಿ ಬಂದಿದ್ದ ಜನರ ಹೊಟ್ಟೆ ಸೇರಬೇಕಿದ್ದ ಅನ್ನ ಮಣ್ಣಿನ ಪಾಲಾಗಿದೆ.ಟನ್ ಗಟ್ಟಲೇ ಅನ್ನವನ್ನ ಗುಂಡಿ ತೆಗೆದು ಮುಚ್ಚಿದ ಘಟನೆ ಬೆಲ್ಲದ ನಾಡಲ್ಲಿ ನಡೆದಿದೆ.ಅನ್ನಕ್ಕೆ ಗೌರವ ಕೊಡದ ಬಿಜೆಪಿ ರೈತರನ್ನ ಗೌರವಿಸುತ್ತಾ…? ಎಂಬ ಪ್ರಶ್ನೆ ಉದ್ಭವಿಸಿದೆ?
ಮೊನ್ನೆ ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ವೇಳೆ ಇಂತಹ ಘಟನೆ ಬೆಳಕಿಗೆ ಬಂದಿದೆ. ಬೃಹತ್
ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು.
ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಜನರನ್ನ ಕರೆಸಲಾಗಿತ್ತು. ಸಮಾವೇಶಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನಕ್ಕೆ ಊಟ ಕೊಟ್ಟರೇ ಭಾಷಣ ಕೇಳಲ್ಲ, ಖಾಲಿ ಕುರ್ಚಿ ಕಾಣುತ್ತವೆಂಬ ಕಾರಣಕ್ಕೆ ಊಟ ಕೊಡೋದನ್ನ ನಿಲ್ಲಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
15 ಬೃಹತ್ ಸ್ಟೀಲ್ ಬಕೆಟ್‌ಗಳು, 250 ಕೆಜಿ ತರಕಾರಿ ಬಾತ್, ಏಳು ಬಕೆಟ್ ಮೊಸರನ್ನ, 50,000 ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಎಸೆದು ಮಣ್ಣಿನಿಂದ ಮುಚ್ಚಲಾಗಿದೆ. ಮಂಡ್ಯದ ಬಾಲಕರ ಕಾಲೇಜು ಬಳಿಯ ತೆರೆದ ಮೈದಾನದಲ್ಲಿ ಸಂಘಟಕರು ಅಗೆಯುವ ಯಂತ್ರ ಬಳಸಿ ಗುಂಡಿ ತೋಡಿದ್ದಾರೆ.
ಧರ್ಮ,ಸಂಪ್ರದಾಯ,ಸಂಸ್ಕೃತಿ ಬಗ್ಗೆ ಭಾಷಣ ಮಾಡುವ
ಹಸಿದವರಿಗೆ ಅನ್ನ ಕೊಡದೇ ಮಣ್ಣಲ್ಲಿ ಅನ್ನ ಹೂಳುವುದು ಯಾವ ಧರ್ಮ…?, ಸಂಸ್ಕೃತಿ…? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.