ಜನಪ್ರಣಾಳಿಕೆ-2023 : ಜನಪರ ಪರಿಣತರು, ಹೋರಾಟಗಾರರು ಮಂಡಿಸಿರುವ ಜನರ ಪ್ರಣಾಳಿಕೆಗಳ ಸಂಗ್ರಹ ಇಂದು ಬಿಡುಗಡೆ

ಕರ್ನಾಟಕದ ಹದಿನಾರನೇ ವಿಧಾನಸಭೆಯನ್ನು ಆರಿಸುವ ಪ್ರಕ್ರಿಯೆ ಆರಂಭವಾಗಿದೆ. 15ನೇ ವಿಧಾನಸಭೆಯಲ್ಲಿ ಜನಾದೇಶವನ್ನು ಬದಿಗೊತ್ತಿ, ಸರಕಾರಗಳು ರಚನೆಗೊಂಡ ರೀತಿ, ಮತ್ತು ಅದಕ್ಕೆ ತಕ್ಕಂತೆ ಕಳೆದ ಐದು ವರ್ಷಗಳ ಆಳ್ವಿಕೆಯ ಒಟ್ಟು ಸ್ವರೂಪ ಪ್ರಜಾಪ್ರಭುತ್ವವಾದಿಗಳ ವಿಶ್ವಾಸದ ಬುಡವನ್ನೇ ಅಲುಗಾಡಿಸುವಂತಿತ್ತು. ಈಗ ಮತ್ತೆ ಚುನಾವಣಾ ಪ್ರಕ್ರಿಯೆಯಲ್ಲೂ ಅದೇ ಪ್ರವೃತ್ತಿ ಕಾಣಬರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜೆಯೇ ಅಥವ ಜನತೆಯೇ ಸಾರ್ವಭೌಮ ಎಂಬುದನ್ನು ಮತ್ತೆ ಮುನ್ನೆಲೆಗೆ ತರುವುದು ಹೇಗೆ, ಜನರ ಪ್ರಶ್ನೆಗಳು, ಆಶೋತ್ತರಗಳು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಮಾಡುವುದು ಹೇಗೆ ಎಂದು ರಾಜ್ಯದಲ್ಲಿ ಹಲವಾರು ನಾಗರಿಕ ಗುಂಪುಗಳು ಗಂಭೀರವಾಗಿ ಯೋಚಿಸುತ್ತಿರುವುದು ಭರವಸೆ ಮೂಡಿಸುತ್ತಿರುವ ಸಂಗತಿ. ವಿವಿಧ ಪಕ್ಷಗಳ ಪ್ರಣಾಳಿಕೆಗಳು ಇತ್ತೀಚಿನ ವರ್ಷಗಳಲ್ಲಿ ಅರ್ಥಹೀನವಾಗಿರುವುದನ್ನು ಕಂಡಿದ್ದೇವೆ. ದೇಶದ ಪ್ರಮುಖ ಆಳುವ ಪಕ್ಷವಂತೂ ಮತದಾನದ ಕೆಲವೇ ಗಂಟೆಗಳ ಮೊದಲು ‘ಪ್ರಣಾಳಿಕೆ’ ಎಂಬುದನ್ನು ಪ್ರಕಟಿಸಿರುವುದನ್ನು ಕಂಡಿದ್ದೇವೆ.

ಈ ಸನ್ನಿವೇಶದಲ್ಲಿ ವಿವಿಧ ಜನವಿಭಾಗಗಳ ನಡುವೆ ದುಡಿಯುತ್ತಿರುವವರು ಮತ್ತು ಜನಪರ ಕಾಳಜಿ ಹೊಂದಿರುವ ಪರಿಣಿತರು ಮತದಾರರ ಕಾಳಜಿಗಳನ್ನು ಕ್ರೋಡೀಕರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅಂತಹ ಜನಪ್ರಣಾಳಿಕೆಗಳ ಒಂದು ಸಂಗ್ರಹ ಇದು. ಜನಪ್ರಣಾಳಿಕೆ-2023 ಹೆಸರೇ ಸೂಚಿಸುವಂತೆ  ಕರ್ನಾಟಕದ ಆರ್ಥಿಕತೆ, ಕೃಷಿ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯ, ಪರಿಸರ, ಸಂಸ್ಕೃತಿ ಕ್ಷೇತ್ರಗಳಲ್ಲಿ ಮುಂದಿನ ಸರಕಾರ ಅನುಸರಿಸಬೇಕಾದ ನೀತಿಗಳನ್ನು, ವಿವಿಧ ಜನವಿಭಾಗಗಳ – ರೈತ, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ದಲಿತ, ಅಲ್ಪಸಂಖ್ಯಾತ – ಹಕ್ಕೊತ್ತಾಯಗಳನ್ನುಜನಪರ ಪರಿಣತರು, ಹೋರಾಟಗಾರರ ಮಂಡಿಸಿರುವ ಜನರ ಪ್ರಣಾಳಿಕೆಗಳ ಸಂಗ್ರಹ.

 

 

 

 

 

 

 

 

 

 

 

 

 

 

ನಾಡಿನ ಒಬ್ಬ ಪ್ರಮುಖ ಅರ್ಥಶಾಸ್ತçಜ್ಞ ಪ್ರೊ. ಟಿ.ಆರ್.ಚಂದ್ರಶೇಖರ್, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ  ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ ಕಮ್ಮರಡಿ, ಸಾಂಸ್ಕೃತಿಕ ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ, ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಮುಜಾಫ್ಫರ್ ಅಸ್ಸಾದಿ, ಪರಿಸರ ತಜ್ಞರಾದ ನಾಗೇಶ ಹೆಗ್ಡೆ, ಶಿಕ್ಷಣ ತಜ್ಞರಾದ ಶ್ರೀಪಾದ ಭಟ್, ಆರೋಗ್ಯ ತಜ್ಞರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಕೃಷಿ ರಂಗದಲ್ಲಿ ಸಕ್ರಿಯರಾಗಿರುವ ಕೆ ಪಿ ಸುರೇಶ್, ಬುಡಮಟ್ಟದಲ್ಲಿ ರೈತರ ಸಂಘÀಟನೆಯಲ್ಲಿ ನಿರತರಾಗಿರುವ ಹೆಚ್ ಆರ್ ನವೀನ್ ಕುಮಾರ್ ಮತ್ತು ಟಿ. ಯಶವಂತ, ಕಾರ್ಮಿಕ ರಂಗದಲ್ಲಿ ದುಡಿಯುತ್ತಿರುವ ಸಿ.ಆರ್.ಶಾನಭಾಗ, ಮಹಿಳಾ ಸಂಘಟನೆಯಲ್ಲಿ ಮತ್ತು ಅಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಮೈತ್ರೇಯಿ ಮತ್ತು ರಘು,  ದಲಿತ ಸಂಘರ್ಷ ಸಮಿತಿಯ ವಿಕಾಸ್ ಮೌರ್ಯ ಮತ್ತು ಯುವಜನ ಕಾರ್ಯ ಮತ್ತು ಯುವಜನ ಹಕ್ಕುಗಳ ಕೇಂದ್ರದ ಮುಖ್ಯಸ್ಥರಾದ ಜನಾರ್ಧನ ಕೆಸರಗದ್ದೆ ಅವರ ಲೇಖನಗಳು ಕರ್ನಾಟಕದ ಪ್ರಮುಖ ಜನವಿಭಾಗಗಳ ಯಾವ ಆಶೋತ್ತರಗಳು ಮತ್ತು ಪ್ರಶ್ನೆಗಳು ಈ ಚುನಾವಣೆಯಲ್ಲಿ ಮಹತ್ವ ಪಡೆಯಬೇಕಾಗಿದೆ ಎಂದು ಈ ಸಂಗ್ರಹದಲ್ಲಿರುವ ಲೇಖನಗಳಲ್ಲಿ ಆಯಾಯ ಕ್ಷೇತ್ರಗಳ/ಜನವಿಭಾಗಗಳ ಪ್ರಣಾಳಿಕೆಯ ರೂಪದಲ್ಲಿ ಮುಂದಿಟ್ಟಿದ್ದಾರೆ.  ಈ ಲೇಖನಗಳಲ್ಲಿ ಬಹುಪಾಲು ‘ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು ಅವನ್ನು ಈ ಸಂಗ್ರಹದಲ್ಲಿ ಸೇರಿಸಲಾಗಿದೆ. ಕೆಲವು ಹೊಸ ಲೇಖನಗಳನ್ನು ಬರೆಸಲಾಗಿದೆ.

ಈ ಸಂಗ್ರಹ ಕರ್ನಾಟಕದ ಪ್ರಜ್ಞಾಶೀಲ ಮತದಾರರು ವಿಚಾರ ಮಂಥನಕ್ಕೊಳಪಡಿಸಿ ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತು ರಾಜ್ಯದ ಪ್ರಜಾಪ್ರಭುತ್ವವನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ನೆರವಾಗ   ಈ ಪುಸ್ತಕದ ಬೆಲೆ ರೂ. 80 ಆಗಿದ್ದು, ಇಂದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಬಿಡುಗಡೆ ಮಾಡಲಿದ್ದಾರೆ. ಡಾ.ಬಂಜಗೆರೆ ಜಯಪ್ರಕಾಶ್ ಮತ್ತು ಡಾ.ಎಚ್.ಜಿ.ಜಯಲಕ್ಷ್ಮಿ ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ

ಪುಸ್ತಕ ಬಿಡುಗಡೆ ಝೂಮ್ ನಲ್ಲಿ ಆನ್ ಲೈನಿನಲ್ಲಿ ನಡೆಯಲಿದ್ದು, ಕೆಳಗಿನ ಲಿಂಕ್ ಒತ್ತುವ ಮೂಲಕ ಭಾಗವಹಿಸಬಹುದು:

https://us05web.zoom.us/j/83682861547?pwd=cGxwVlBKNFhMWTRlUXdXNXdzNHAwZz09

 

Donate Janashakthi Media

Leave a Reply

Your email address will not be published. Required fields are marked *