ಬೆಳಗಾವಿ ಜ 23 : ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ಸಂಹಿತೆಗಳ ಅಪಾಯವನ್ನು ಸಾರ್ವಜನಿಕರ ನಡುವ ಹಂಚುವ ಉದ್ದೇಶದಿಂದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಬ್ರಿಟಿಷ್ ಸಾಮಜ್ಯಶಾಹಿ ವಿರುದ್ದ ಕೆಚ್ಚೆದೆಯ ಸ್ವಾಭಿಮಾನಿ ಹೋರಾಟ ನಡೆಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ನಂದಗಡದ ಅವರ ಸ್ಮಾರಕದ ಜಾಗದಿಂದ ಜಾಥಾ ಉದ್ಘಾಟನೆಗೊಂಡಿತು. ಪ್ರಚಾರ ಜಾಥಾಕ್ಕೆ ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ ಚಾಲನೆ ನೀಡಿದರು. ಹಿರಿಯ ರೈತ ಮುಖಂಡ ಮಲ್ಲಿಕಾರ್ಜುನ ವಾಲಿ, ಮಹದಾಯಿ ಹೋರಾಟಗಾರ ಅಮೃತ ಇಜಾರಿ, ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಮಹೇಶ ಪತ್ತಾರ, ಗೈಬು ಜೈನೆಖಾನ ಮುಖಂಡರಾದ ಎಲ್.ಎಸ್.ನಾಯಕ, ಮಾರುತಿ ಚಿಟಗಿ, ಪೀರು ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಬೆಳವಣಕಿ ಸಮುದಾಯ ಕಲಾತಂಡದಿಂದ ಬೀದಿನಾಟಕ ಪ್ರದರ್ಶನ ನಡೆಯಿತು. ಈ ಜಾಥಾವು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಸಂಘಟಿಕರು ತಿಳಿಸಿದ್ದಾರೆ. ರಾಯಚೂರು, ಕಲಬುರ್ಗಿ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲೂ ಜನಜಾಗೃತಿ ಜಾಥಾಗಳು ನಡೆಯುತ್ತಿವೆ.
ಜಾಥಾದಲ್ಲಿ ಕಂಡು ಬಂದ ಚಿತ್ರಗಳು