ಇರಾನಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧ – 5000 ವಿದ್ಯಾರ್ಥಿನೀಯರಿಗೆ ವಿಷವುಣಿಸಿದ ಪ್ರಕರಣ; ಗುಪ್ತಚರ ಸಂಸ್ಥೆಯಿಂದ ಆರೋಪಿಗಳ ಬಂಧನ ಆರಂಭ

ಟೆಹ್ರಾನ್: ಸುಮಾರು 6 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಆರೋಪದ ಮೇಲೆ ಕೆಲ ವಿದ್ಯಾರ್ಥಿನಿಯರ ಪೋಷಕರು ಸೇರಿದಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇರಾನ್‌ ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ವಂಚಿಸಲು, ಶಿಕ್ಷಣದಿಂದ ದೂರ ಇರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು 5,000 ವಿದ್ಯಾರ್ಥಿಗಳಿಗೆ ವಿಷಪ್ರಾಶನ ಮಾಡಿರುವ ಘಟನೆ 2022ರ ನವೆಂಬರ್‌ ನಿಂದ ಆರಂಭವಾಗಿತ್ತು.

ಇರಾನ್‌ನ ಉಪ ಆಂತರಿಕ ಸಚಿವ ಮಜಿದ್ ಮಿರಹ್ಮಾಡಿ ಈ ಬಗ್ಗೆ ಹೇಳಿಕೆ ನೀಡಿದ್ದು, ಗುಪ್ತಚರ ಸಂಸ್ಥೆಗಳು ಆರೋಪಿಗಳ ಬಂಧನ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಹಲವು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ತನಿಖಾ ಸಂಸ್ಥೆಗಳು ತಮ್ಮ ಕಾರ್ಯಕ್ಕೆ ಚುರುಕು ನೀಡಿದ್ದಾರೆ ಎಂದರು.

ಇದನ್ನು ಓದಿ: ಮುಂದುವರೆದ ಹಿಜಾಬ್‌ ವಿರೋಧಿ ಹೋರಾಟ; 326ಕ್ಕೂ ಹೆಚ್ಚು ಮಂದಿ ಸಾವು; 14 ಸಾವಿರ ಜನರ ಬಂಧನ

ವರದಿಗಳ ಪ್ರಕಾರ, ಖುಜೆಸ್ತಾನ್, ಪಶ್ಚಿಮ ಅಜೆರ್ಬೈಜಾನ್, ಫಾರ್ಸ್, ಕೆರ್ಮಾನ್ಶಾ, ಖೊರಾಸನ್ ಹಾಗೂ ಅಲ್ಬೋರ್ಜ್ ಪ್ರದೇಶಗಳಲ್ಲಿ ಆರೋಪಿಗಳ ಬಂಧನವಾಗಿದೆ ಎಂದು ತಿಳಿದುಬಂದಿದೆ.

ಇರಾನ್‌ನ 31 ಪ್ರಾಂತ್ಯಗಳ ಪೈಕಿ 25 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿರುವ ಪ್ರಕರಣ ವರದಿಯಾಗಿದೆ. ಸುಮಾರು 230 ಶಾಲೆಗಳಲ್ಲಿ 5,000 ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸದ್ಯ ವಿಷ ಸೇವಿಸಿದ ವಿದ್ಯಾರ್ಥಿನಿಯರಲ್ಲಿ ಯಾರೂ ಇಲ್ಲಿಯವರೆಗೆ ಸಾವನ್ನಪ್ಪಿಲ್ಲ. ಆದರೆ ಅವರಲ್ಲಿ ಉಸಿರಾಟದ ತೊಂದರೆ, ವಾಕರಿಕೆ, ತಲೆತಿರುಗುವಿಕೆಗಳಂತಹ ಸಮಸ್ಯೆಗಳು ಕಂಡುಬಂದಿದೆ.

ಐಆರ್‌ಎನ್ಎ ರಾಜ್ಯ ಸುದ್ದಿ ಸಂಸ್ಥೆ ಪನಾಹಿ ವರದಿ ಮಾಡಿರುವಂತೆ, ಕೋಮ್ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷವಿಕ್ಕಿದ ನಂತರ, ಕೆಲವು ಜನರು ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಬಯಸಿದ್ದಾರೆ ಎಂದು ಕಂಡುಬಂದಿದೆ ಎಂದಿದೆ.

ಇದನ್ನು ಓದಿ: ಇರಾನ್‌ ನಲ್ಲಿ ಭುಗಿಲೆದ್ದ ಆಕ್ರೋಶ: ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಟ್ಟ ಮಹಿಳೆಯರು

ಹಿಜಾಬ್‌ ವಿರೋಧಿ ಹೋರಾಟ

ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ ಗಿರಿಯಿಂದ 2022ರ ಸೆಪ್ಟಂಬರ್‌ 16ರಂದು ಇರಾನಿನ ಕುರ್ದ್ ಮಹ್ಸಾ ಅಮಿನಿ ಎಂಬ 22 ವರ್ಷದ ಯುವತಿ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದಳು. ಹಿಜಾಬ್‌ ವಿರೋಧಿ ಹೋರಾಟವೂ ದೊಡ್ಡ ಪ್ರಮಾಣದಲ್ಲಿ ಭುಗಿಲೆದ್ದಿತು. 2022ರ ನವೆಂಬರ್‌ ವೇಳೆಯೇ ಇರಾನ್‌ ದೇಶದ ಎಲ್ಲೆಡೆ ಭಾರೀ ಪ್ರತಿಭಟನೆಗಳೂ ಮುಂದುವರೆದವು. ಈ ಘಟನೆಯ ಬೆನ್ನಲ್ಲೇ ವಿದ್ಯಾರ್ಥಿನಿಯರಿಗೆ ಶಾಲೆಗೆ ಹೋಗದಂತೆ ತಡೆಯಲು ವಿಷಪ್ರಾಶನ ಮಾಡಿರುವುದಾಗಿ ವರದಿಯಾಗಿದೆ.

ಇರಾನ್‌ನ ಶಿಯಾ ಮುಸ್ಲಿಂ ನಗರ ಕೋಮ್‌ನಲ್ಲಿ ಮೊದಲ ಬಾರಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿರುವ ಘಟನೆ ನಡೆದಿತ್ತು. ಆರಂಭಿಕ ತನಿಖೆಗಳಿಂದ ಇದು ಉದ್ದೇಶಪೂರ್ವಕವಲ್ಲ ಎಂದು ತಿಳಿದು ಬಂದಿತು. ಬಳಿಕ ಇಂತಹುದೇ ಘಟನೆ ದೇಶದೆಲ್ಲೆಡೆ ವರದಿಯಾಗುತ್ತಲೇ ಹೋಯಿತು. ಇದರಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ತಡೆಯಲು ಈ ಕೃತ್ಯ ಮಾಡಲಾಗುತ್ತಿದೆ ಎಂಬುದು ಬಯಲಿಗೆ ಬಂದಿತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *