ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆಯ ವಾಣಿಜ್ಯ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ವಾಹನ ನಿಲುಗಡೆ ಪ್ರದೇಶವು ಹೀಗೆ ಗಬ್ಬೆದ್ದು ನಾರುತ್ತಿದೆ. ನಿರ್ವಹಣೆಯಿಲ್ಲದೆ ಸೊರಗಿದೆ. ಬಣ್ಣ ಕಳೆದುಕೊಂಡ ಗೋಡೆಗಳು, ವಾರಸುದಾರರಿಲ್ಲದೇ ತುಕ್ಕು ಹಿಡಿದು ನಿಂತಿದ್ದ ವಾಹನಗಳು, ರಾತ್ರಿ ವೇಳೆ ಮದ್ಯ ವ್ಯಸನಿಗಳ ಅಡ್ಡೆ, ಎಲ್ಲೆಂದರಲ್ಲಿ ಬಿದ್ದಿರುವ ಖಾಲಿ ಬಾಟಲಿಗಳು, ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಹೆಚ್ಚಾಗಿದೆ. ಬೆಂಗಳೂರು
ವಾಹನ ನಿಲುಗಡೆ(ಪಾರ್ಕಿಂಗ್ ಸ್ಥಳ) ಪ್ರದೇಶಕ್ಕೆ ಹೊಸ ಹೊಳಪು ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಮುಕ್ತಿ ಸಿಗಲಿದ್ದು, ವಾಹನ ನಿಲುಗಡೆ ಪ್ರದೇಶದ ಚಹರೆಯೇ ಬದಲಾಗಲಿದೆ. ಬೆಂಗಳೂರು
ಇದನ್ನೂ ಓದಿ : ಜಾತಿಗಣತಿ ಸಮೀಕ್ಷೆ: ಸರಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರ ವರೆಗೆ ರಜೆ ಘೋಷಣೆ
ಪಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಕಂಪನಿ’ಯು ಈಗ ಗುತ್ತಿಗೆ ಪಡೆದುಕೊಂಡಿದ್ದು, ನವೀಕರಣ ಕಾಮಗಾರಿ ಆರಂಭಿಸಿದೆ. ಈ ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಹಿಂದಿನ ಬಿಬಿಎಂಪಿ) ಟೆಂಡರ್ ಹಣವನ್ನು ಪಾವತಿಸದಿರುವ ಕಾರಣಕ್ಕೆ ಹೊಸ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿರುವ ‘ಬಹುಮಹಡಿ ಪಾರ್ಕಿಂಗ್ ಕಟ್ಟಡ’ದ ಗುತ್ತಿಗೆ ಪಡೆದಿರುವ ‘ಪಿನ್ಸ್ ಕಂಪನಿ’ಯೇ ಈ ಸ್ಥಳವನ್ನೂ 10 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ‘ಅಡ್ವಾನ್ಸ್ಡ್ ಪಾರ್ಕಿಂಗ್ ತಂತ್ರಜ್ಞಾನ’(ದುಬೈ ಮಾದರಿಯ ತಂತ್ರಜ್ಞಾನ) ಅಳವಡಿಸುವ ಕೆಲಸಗಳು ವೇಗದಿಂದ ಸಾಗುತ್ತಿವೆ. ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅನುಷ್ಠಾನಕ್ಕೆ ಬಂದಮೇಲೆ ಮತ್ತೊಂದು ‘ಸ್ಮಾರ್ಟ್ ಪಾರ್ಕಿಂಗ್’ ಸ್ಥಳವು ವಾಹನ ಚಾಲಕರ ಬಳಕೆಗೆ ಲಭಿಸುವ ಕಾಲ ಸನ್ನಿಹಿತವಾಗಿದೆ.
ಪಿನ್ಸ್ ಕಂಪನಿಗೆ ಮೊದಲ ಐದು ವರ್ಷಕ್ಕೆ ತಲಾ ₹40.50 ಲಕ್ಷಕ್ಕೆ ಬಿಡ್ ಆಗಿದೆ. ನಂತರದ ವರ್ಷಗಳಲ್ಲಿ ಬಿಡ್ ಮೊತ್ತವು ಏರಿಕೆ ಆಗಲಿದೆ. ಅಂದಾಜು ₹4.50 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
