ನವದೆಹಲಿ : ಈ ಕೂಡಲೇ ಲೋಕಸಭೆಯನ್ನು ವಿಸರ್ಜಿಸುವಂತೆ ಚುನಾವಣ ಆಯೋಗದ ವಿರುದ್ಧ ಮತಗಳ್ಳತನ ಅಸ್ತ್ರ ಬಳಸುತ್ತಿರುವ ವಿಪಕ್ಷಗಳು ಆಗ್ರಹಿಸಿವೆ. ಚು.ಆಯೋಗವು ಸುದ್ದಿಗೋಷ್ಠಿ ನಡೆಸಿ ಅಫಿದವಿತ್ಸಲ್ಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಗಡುವು ವಿಧಿಸಿದ ಬೆನ್ನಲ್ಲೇ ಸೋಮವಾರ ವಿಪಕ್ಷ ಒಕ್ಕೂಟದ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಸ್ಪಿ, ಡಿಎಂಕೆ, ಆರ್ಜೆಡಿ, ಸಿಪಿಎಂ, ಆಪ್ ಮತ್ತು ಶಿವಸೇನೆ(ಯುಬಿಟಿ) ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ.
ವಿಪಕ್ಷಗಳು ಎತ್ತಿರುವ ಯಾವುದೇ ಪ್ರಶ್ನೆಗಳಿಗೂ ಆಯೋಗ ಸಮರ್ಪಕ ಉತ್ತರ ನೀಡಿಲ್ಲ. ಆರೋಪದ ಬಗ್ಗೆ ತನಿಖೆಯನ್ನೂ ನಡೆಸಿಲ್ಲ. “ಮತದಾರರ ಪಟ್ಟಿಯು ದೋಷರಹಿತವಾಗಿದೆ’ ಎಂದು ಮೊದಲಿಗೆ ಚುನಾವಣ ಆಯೋಗ ಅಫಿದವಿತ್ ಸಲ್ಲಿಸಲಿ. ಅನಂತರ ನಮ್ಮಿಂದ ಅಫಿದವಿತ್ ಕೇಳಲಿ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಡೊನೇಷನ್ ಮಾಫೀಯಾಗೆ ಕಡಿವಾಣ ಯಾಕಿಲ್ಲ!
ದೋಷಪೂರಿತ ಮತಪಟ್ಟಿ ಇಟ್ಟುಕೊಂಡು ಲೋಕಸಭೆ ಚುನಾವಣೆ ನಡೆಸಲಾಗಿದೆ. ಹೀಗಾಗಿ ಮತದಾನ ನ್ಯಾಯಸಮ್ಮತವಾಗಿ ನಡೆದಿಲ್ಲ. ಹೀಗಾಗಿ ಈ ಕೂಡಲೇ ಲೋಕಸಭೆಯನ್ನು ವಿಸರ್ಜಿಸಬೇಕು’ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಗ್ರಹಿಸಿದ್ದಾರೆ.
ನುಸುಳುಕೋರರು, ಅಕ್ರಮ ವಲಸಿಗರ ಮತಗಳ ಮೂಲಕ ಗೆಲ್ಲುವುದು ವಿಪಕ್ಷಗಳ ಯೋಜನೆಯಾಗಿತ್ತು. ಆದರೆ ಬಿಹಾರ ಮತಪಟ್ಟಿ ಪರಿಷ್ಕರಣೆಯಿಂದ ಅದು ಸಾಧ್ಯವಾಗಲ್ಲ ಎಂಬ ಕಾರಣಕ್ಕೆ ಅದನ್ನು ವಿರೋಧಿಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.
ಮತಗಳ್ಳತನ ಆರೋಪದ ಕುರಿತು ತನಿಖೆ ಏಕೆ ಆರಂಭಿಸಿಲ್ಲ ಎಂಬ ಪ್ರಶ್ನೆಗೆ ಚುನಾವಣ ಆಯೋಗ ಉತ್ತರ ಕೊಟ್ಟಿಲ್ಲ
ಬದುಕಿರುವವರನ್ನೂ ಸತ್ತಿದ್ದಾರೆಂದು ಹೇಳಿ ಮತದಾರರ ಪಟ್ಟಿಯಿಂದ ಅಳಿಸಿಹಾಕಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿಲ್ಲ
2022ರ ಉತ್ತರ ಪ್ರದೇಶ ಚುನಾವಣೆ ವೇಳೆ ಅಖೀಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಹಲವು ಮತದಾರರ ಹೆಸರು ಅಳಿಸಿಹಾಕಲಾಗಿದೆ ಎಂದು ಆರೋಪಿಸಿದ್ದರು.
ಅದಕ್ಕೆ ಸ್ಪಷ್ಟನೆ ನೀಡುವಂತೆ ಆಯೋಗ ಸೂಚಿಸಿತ್ತು. ಅದರಂತೆ, ಅಖೀಲೇಶ್ 18 ಸಾವಿರ ಅಫಿದವಿತ್ಗಳನ್ನು ಸಲ್ಲಿಸಿದ್ದರು. ಆದರೆ ಈವರೆಗೂ ಆಯೋಗ ಯಾವ ಕ್ರಮವನ್ನೂ ಏಕೆ ಕೈಗೊಂಡಿಲ್ಲ ಪ್ರಶ್ನಿಸಿದರು?
ಇದನ್ನೂ ನೋಡಿ: ಪಪ್ಪೆಟ್ ಜಾನು ಈಗ ಕಾಲೇಜ್ ಹುಡುಗಿ (ಲಿಂಗತ್ವ ಅಲ್ಪಸಂಖ್ಯಾತ) Janashakthi Media
