ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ | ಭರ್ಜರಿ ಗೆಲುವು ಸಾಧಿಸಿದ ಎಸ್‌ಎಫ್‌ಐ ಮೈತ್ರಿ

ಹೈದರಾಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಯಗಳಿಸಿದೆ. ಎಸ್‌ಎಫ್‌ಐ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA) ಮತ್ತು ಟ್ರೈಬಲ್ ಸ್ಟೂಡೆಂಟ್ಸ್ ಫೆಡರೇಶನ್ (TSF) ಅಭ್ಯರ್ಥಿಗಳು ಕೂಡಾ ಕೆಲವು ಪ್ರಮುಖ ಹುದ್ದೆಗಳನ್ನು ಗೆದ್ದಿದ್ದಾರೆ.

ಅಧ್ಯಕ್ಷರಾಗಿ ಎಸ್‌ಎಫ್‌ಐ ಅಭ್ಯರ್ಥಿ ಮೊಹಮ್ಮದ್ ಅತೀಕ್ ಅಹಮದ್ ಅವರು ಎಬಿವಿಪಿ ಅಭ್ಯರ್ಥಿ ಶೇಕ್ ಆಯೇಷಾ ವಿರುದ್ಧ 471 ಮತಗಳಿಂದ ಗೆಲುವು ಕಂಡಿದ್ದಾರೆ. ಅತೀಕ್ ಅಹಮದ್ ಅವರು ಒಟ್ಟು 1,880 ಮತಗಳನ್ನು ಪಡೆದಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿ ಎಬಿವಿಪಿ ಮುಸ್ಲಿಂ ಅಭ್ಯರ್ಥಿಯನ್ನು ವಿಶ್ವವಿದ್ಯಾಲಯದ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಿಸಿತ್ತು. ಹೈದರಾಬಾದ್

ಇದನ್ನೂ ಓದಿ: ಪ್ಯಾಲೆಸ್ತೀನ್ | ಗಾಝಾ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ನವಜಾತ ಶಿಶು ಸಾವು

ಜಲ್ಲಿ ಆಕಾಶ್ (ಎಎಸ್‌ಎ-ಎಸ್‌ಎಫ್‌ಐ) 1,671 ಮತಗಳನ್ನು ಪಡೆದು ಎಬಿವಿಪಿ ಅಭ್ಯರ್ಥಿ ತರುಣ್ ಅವರನ್ನು 1,283 ಮತಗಳಿಂದ ಸೋಲಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದ ಸ್ಪರ್ಧೆಯಲ್ಲಿ, ದೀಪಕ್ ಕುಮಾರ್ ಆರ್ಯ (ಎಎಸ್‌ಎ-ಎಸ್‌ಎಫ್‌ಐ) 1,765 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ದೀಪಕ್ ವಿರುದ್ಧ ಸ್ಪರ್ಧಿಸಿದ್ದ ಎಬಿವಿಪಿಯ ಅಭ್ಯರ್ಥಿ ರಾಜೇಶ್ ಪಲ್ಲಾ 1,285 ಮತಗಳನ್ನು ಪಡೆದಿದ್ದಾರೆ.

ಸಹಾಯಕ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಲವುಡಿ ಬಾಲ ಆಂಜನೇಯುಲು (ಎಸ್‌ಎಫ್‌ಐ-ಟಿಎಸ್‌ಎಫ್) 1,775 ಮತಗಳನ್ನು ಪಡೆದು ಆಯ್ಕೆಯಾಗಿದ್ದು, 1,134 ಮತಗಳನ್ನು ಪಡೆದ ಎಬಿವಿಪಿಯ ರಾಥೋಡ್ ವಸಂತಕುಮಾರ್ ಅವರನ್ನು ಸೋಲಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಕ್ಕೆ 1,656 ಮತಗಳನ್ನು ಪಡೆದ ಶಮೀಮ್ ಅಕ್ಟರ್ ಶೇಕ್ (ಎಎಸ್‌ಎ-ಎಸ್‌ಎಫ್‌ಐ) ಆಯ್ಕೆಯಾಗಿದ್ದು, ಅವರು ಆಂಟನಿ ಬಸುಮತರಿ ಅವರನ್ನು ಸೋಲಿಸಿದರು. ಎಸ್‌ಎಫ್‌ಐ ಅಭ್ಯರ್ಥಿ ಅತುಲ್ 1,642 ಮತಗಳನ್ನು ಪಡೆದು ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಎಬಿವಿಪಿ ಅಭ್ಯರ್ಥಿ ಜ್ವಾಲಾ ಪ್ರಸಾದ್ ಸ್ಪರ್ಧಿಸಿ 1406 ಮತಗಳನ್ನು ಪಡೆದು ಸೋತಿದ್ದಾರೆ.

ಜಿಎಸ್ ಕ್ಯಾಶ್ ಇಂಟಿಗ್ರೇಟೆಡ್ ಮತ್ತು ಜಿಎಸ್ ಕ್ಯಾಶ್ (ಪಿಜಿ) ಸ್ಥಾನಕ್ಕೆ ಎಸ್ಎಫ್‌ಐಯಿಂದ ನಂದನ್ ಪಾಲಕಿಲ್ ಮತ್ತು ಕೆ.ಪೂಜಾ ಆಯ್ಕೆಯಾಗಿದ್ದಾರೆ. ಇಷ್ಟೆ ಅಲ್ಲದೆ, ಎಸ್‌ಎಫ್‌ಐನಿಂದ ಸೌಮ್ಯ ಕೇಪಿ ಮತ್ತು ಪವನ್ ಅವರು ಜಿಎಸ್ ಕ್ಯಾಶ್ (ಸಂಶೋಧನೆ) ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ವಿಡಿಯೊ ನೋಡಿ: ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *