ಬೆಂಗಳೂರು : ಹಬ್ಬಗಳು ಬಂದ್ರೆ ಸಾಕು ಹೂವು ಹಾಗೂ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತವೆ. ಇದೀಗ ದಸರಾ ಹಬ್ಬದ ಹಿನ್ನಲೆಯಲ್ಲಿ ಹೂ, ಹಣ್ಣು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳ್ತಾ ಇದೆ.
ಹೌದು, ಆಯುಧ ಪೂಜೆಗೆ ಇನ್ನೊಂದೇ ದಿನ ಬಾಕಿ ಇದೆ. ಒಂದು ದಿನ ಬಾಕಿ ಇರುವಾಗಲೇ ಹೂ, ಹಣ್ಣು, ಪೂಜೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನು ದರ ಏರಿಕೆ ಆಗುತ್ತೆ ಅಂತ ಇಂದೇ ಖರೀದಿಗೆ ಮುಂದಾಗಿದ್ದಾರೆ.
ಮಲ್ಲಿಗೆ ಕೆಜಿಗೆ 1000 ಸಾವಿರ ರೂಪಾಯಿ ಆದ್ರೆ, ಸೇವಂತಿಗೆ 300-500 ರೂಪಾಯಿಯಾಗಿದೆ. ಚೆಂಡು ಹೂ 150 ರೂ, ಕನಕಾಂಬರ 3 ಸಾವಿರ, ಸುಗಂಧರಾಜ 400 ರೂ., ಕಾಕಡ 700-800 ರೂ. ಇದೆ.
ಇನ್ನು ಈ ಹಬ್ಬಕ್ಕೆ ಕುಂಬಳಕಾಯಿ ಮುಖ್ಯವಾದದ್ದು. ಇದು ಕೆಜಿಗೆ 35 ರಿಂದ 40 ರೂಪಾಯಿ ಆಗಿದೆ. ಬಾಳೆ ಕಂಬ ಎರಡಕ್ಕೆ 150 ರೂಪಾಯಿ ಆಗಿದೆ. ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆ ಅಂತಾರೆ ಕುಂಬಳಕಾಯಿ ಮಾರುವ ವ್ಯಾಪಾರಸ್ಥರು. ಒಟ್ಟಾರೆ ದಸರಾ ಹಬ್ಬಕ್ಕೆ ,ಇಂದು ಹಾಗೂ ನಾಳೆ ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯ ಬಿಸಿಯಲ್ಲಿ ಈ ಬಾರಿ ದಸರಾ ಹಬ್ಬ ಮಾಡಲು ಮುಂದಾಗಿದ್ದಾರೆ.
ಯಾವ ಹೂವಿನ ಬೆಲೆ ಎಷ್ಟಿದೆ?
ಮಲ್ಲಿಗೆ ಹೂ 1000 ಸಾವಿರ. ಕೆಜಿ.
ಸೇವಂತಿಗೆ 300-500 ಕೆಜಿ.
ಚೆಂಡು ಹೂ 150 ರೂ ಕೆಜಿ.
ಕನಕಾಂಬರ 3 ಸಾವಿರ. ಕೆಜಿ.
ಸುಗಂಧರಾಜ 400 ಕೆಜಿ.
ಕಾಕಡ 700-800 ರೂ. ಕೆಜಿ.