ಜಮ್ಮು ಮತ್ತು ಕಾಶ್ಮೀರ: ಥತ್ರಿ ಪಟ್ಟಣದ ಮೇಲ್ದಂಡೆ ಪ್ರದೇಶಗಳಲ್ಲಿ ಜುಲೈ 7ರಂದು ಭಾರಿ ಮಳೆಯ ಪರಿಣಾಮವಾಗಿ ಆಕಸ್ಮಿಕ ಪ್ರವಾಹ ಸಂಭವಿಸಿ, ಮನೆಗಳು, ಅಂಗಡಿಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಕೂಡ ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಲ್ಪಟ್ಟಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥತ್ರಿ
ಕಳೆದ ಎರಡು ದಿನಗಳಲ್ಲಿ ದೋಡಾ ಜಿಲ್ಲೆ ಮತ್ತು ಕಿಸ್ತಾವಾರ್ ಜಿಲ್ಲೆಗಳಲ್ಲಿ ಸಂಭವಿಸಿದ ಮೂರನೇ ಆಕಸ್ಮಿಕ ಪ್ರವಾಹ ಇದಾಗಿದೆ. ನಿರಂತರ ಮಳೆಯ ಅಟ್ಟಹಾಸದಿಂದ ಪರ್ವತ ಪ್ರದೇಶಗಳು ತತ್ತರಿಸಿವೆ. ಥತ್ರಿ
ಅಧಿಕಾರಿಗಳ ಪ್ರಕಾರ, ಮೇಲ್ದಂಡೆ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ಬಂಡೆಗಳು, ಮಣ್ಣು ಮತ್ತು ಅವಶೇಷಗಳು ತಾತ್ತ್ರಿ ಪಟ್ಟಣದತ್ತ ಹರಿದುಬಂದು, ಹಲವು ನಿವಾಸಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಭಾಗಶಃ ಹಾನಿಯಾಗಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಬಿಜೆಪಿ-ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಮಣ್ಣಿನಡಿ ಹೂತುಹೋಗಿವೆ. ಕೆಲವು ವಾಹನಗಳು ಚೆನಾಬ್ ನದಿಗೆ ಹರಿದುಹೋಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರವಾಹದಿಂದ ಡೋಡಾ-ಕಿಶ್ತ್ವಾರ್ ಹೆದ್ದಾರಿ ತಾತ್ತ್ರಿಯಲ್ಲಿ ಬಂದ್ ಆಗಿ, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲಾಡಳಿತ, ಪೊಲೀಸರು ಮತ್ತು ಇತರ ಸಂಸ್ಥೆಗಳು ಅವಶೇಷಗಳನ್ನು ತೆರವುಗೊಳಿಸಿ ರಸ್ತೆ ಪುನಃ ತೆರೆಯುವ ಕಾರ್ಯಾಚರಣೆ ಕೈಗೊಂಡಿವೆ.
ಈ ಘಟನೆಗೆ ಮುನ್ನದಿನವೂ ಭಾರೀ ಮಳೆಯ ಪರಿಣಾಮವಾಗಿ 540 ಮೆಗಾವಾಟ್ ಸಾಮರ್ಥ್ಯದ ಕ್ವಾರ್ ಜಲವಿದ್ಯುತ್ ಯೋಜನೆ ಸಮೀಪದ ಹೆದ್ದಾರಿ ಭಾಗಕ್ಕೆ ಹಾನಿಯಾಗಿದೆ.
ಜಿಲ್ಲಾಧಿಕಾರಿ ಕೃಷ್ಣ ಲಾಲ್ ಅವರು ಮಳೆ ಸಂಬಂಧಿತ ಘಟನೆಗಳಿಗೆ ಆಡಳಿತ ತಕ್ಷಣ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ. “ಈ ಬೆಳಿಗ್ಗೆ ತಾತ್ತ್ರಿ ತಾಲೂಕಿನ ಪ್ರೇಮ್ ನಗರ ಪ್ರದೇಶದಲ್ಲಿ ಸಣ್ಣ ಮಟ್ಟಿನ ಬೆಟ್ಟದ ಕುಸಿತ ಸಂಭವಿಸಿತು. ರಸ್ತೆ ಮೇಲೆ ಮಣ್ಣು ಮತ್ತು ಅವಶೇಷಗಳು ಜಮಾಯಿಸಿದ್ದವು. ಅದನ್ನು ತಕ್ಷಣ ತೆರವುಗೊಳಿಸಿ ಸಂಚಾರ ಪುನಃ ಆರಂಭಿಸಲಾಗಿದೆ,” ಎಂದರು.
ಚಿರಲ್ಲಾ ತಾಲೂಕು ಮತ್ತು ಬಾಗ್ನಾ ಲಿಂಕ್ ರಸ್ತೆಯಲ್ಲಿಯೂ ಮಣ್ಣು ಮತ್ತು ಕಲ್ಲುಗಳು ಹರಿದುಬಂದಿದ್ದರೂ ಅವುಗಳನ್ನು ಕೂಡ ಶೀಘ್ರವಾಗಿ ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಯ ಪರಿಣಾಮದಿಂದ ಈ ಘಟನೆಗಳು ಸಂಭವಿಸಿದ್ದೇ ಹೊರತು ‘ಕ್ಲೌಡ್ಬರ್ಸ್ಟ್’ ಅಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. “ಇವು ಭಾರೀ ಮಳೆಯ ಪರಿಣಾಮವಾಗಿ ಬೆಟ್ಟದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುವ ಘಟನೆಗಳು. ಜನರು ಆತಂಕಪಡುವ ಅಗತ್ಯವಿಲ್ಲ, ವದಂತಿಗಳನ್ನು ಹರಡಬಾರದು,” ಎಂದು ಅವರು ಮನವಿ ಮಾಡಿದ್ದಾರೆ.
ಯಾವುದೇ ಮಾಹಿತಿ ಹಂಚುವ ಮುನ್ನ ಜಿಲ್ಲಾಡಳಿತ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಪರಿಶೀಲಿಸಲು ಜನರಿಗೆ ಅವರು ಕರೆ ನೀಡಿದ್ದಾರೆ.
ಇದನ್ನೂ ನೋಡಿ: 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ
