ಬೆಂಗಳೂರು : ಗಿರೀಶ್ ಮಟ್ಟೆಣ್ಣನವರ್, ತಿಮರೋಡಿ, ಜಯಂತ್, ವಿಠಲಗೌಡರನ್ನು ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಬೆಂಗಳೂರು
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿದೆ. ಮುಂದಿನ ವಿಚಾರಣೆಯವರೆಗೆ ಧರ್ಮಸ್ಥಳ ಪ್ರಕರಣಕ್ಕೆ ತಡೆಯಾಜ್ಞೆ. ಎಸ್ ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ಹೈ ಕೋರ್ಟ್ ಆದೇಶಿಸಿದೆ. ಬೆಂಗಳೂರು
ಇದನ್ನೂ ಓದಿ : ಕಡುಬಡತನದಿಂದ ಮುಕ್ತವಾದ ಕೇರಳ
ಹೈಕೋರ್ಟ್ ಕಲಾಪ ಸಾರಾಂಶ :
ಚಿನ್ನಯ್ಯ ವಿರುದ್ದ ಪೋರ್ಜರಿ ಕೇಸ್ ಹಾಕಿ ಅದರ ಆಧಾರದ ಮೇಲೆ ಹೋರಾಟಗಾರರಿಗೆ ನೋಟಿಸ್ ಕೊಡುವುದು BNSS 215(1)(b) ಪ್ರಕಾರ ಎಸ್ಐಟಿ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಹ ಹಿರಿಯ ವಕೀಲ ಎಸ್ ಬಾಲನ್ ವಾದ ಮಂಡಿಸಿದರು. ಬೆಂಗಳೂರು
ಗಿರೀಶ್ ಮಟ್ಟೆಣ್ಣನವರ್, ತಿಮರೋಡಿ, ಜಯಂತ್, ವಿಠಲಗೌಡ ರೇ ಈ ಪ್ರಕರಣದ ಆರೋಪಿಗಳು. ಹಾಗಾಗಿ ಅವರನ್ನು ತನಿಖೆ ಮಾಡಬೇಕಿದೆ ಎಂದು ಎಸ್‌ಐಟಿ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿದಿರು.
ಅವರು ಆರೋಪಿಗಳಾಗಿದ್ದರೆ ಪ್ರತ್ಯೇಕ ಎಫ್ಐಆರ್ ಮಾಡಬೇಕಿತ್ತು. ಅದರ ಬದಲು ಕಾನೂನು ಉಲ್ಲಂಘಿಸಿ ಯಾಕೆ ಎಫ್ಐಆರ್ ಮಾಡಬೇಕು ಎಂದು ಹೈಕೋರ್ಟ್ ಎಸ್ಐಟಿ ಪರ ಹಾಜರಿದ್ದ ವಕೀಲರನ್ನು ಪ್ರಶ್ನಿಸಿತು.
ನಾಲ್ವರು ಹೋರಾಟಗಾರರ ಹೆಸರು ಎಫ್ಐಆರ್ ನಲ್ಲಿ ಇಲ್ಲ. ಎಲ್ಲಾ ನೋಟಿಸ್ ಗೆ ಹಾಜರಾಗಿದ್ದಾರೆ. 9 ನೋಟಿಸ್ ಪೈಕಿ 9 ನೋಟಿಸ್ ಗೆ ಹಾಜರಾಗಿದ್ದಾರೆ. ಸುಮಾರು 100 ಗಂಟೆ ವಿಚಾರಣೆ ಎದುರಿಸಿದ್ದಾರೆ. ಆದರೂ ಹೋರಾಟಗಾರರನ್ನು ಆರೋಪಿ ಮಾಡಿದ್ರೆ ಹೇಗೆ ? ಎಂದು ವಕೀಲ ಬಾಲನ್ ಮಾದ ಮುಂದಿಟ್ಟರು.
ನಾಲ್ವರು ಆರೋಪಿಗಳು ಅನ್ನೋದನ್ನು ರೆಕಾರ್ಡ್ ಮಾಡಿಕೊಳ್ಳೋದಾ ? ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತು.
ಹೌದು ಈ ನಾಲ್ವರು (ಮಟ್ಟೆಣ್ಣನನವರ್, ತಿಮರೋಡಿ, ಜಯಂತ್, ವಿಠಲ ಗೌಡ) ಆರೋಪಿಗಳು. ಅವರು ಜಾಮೀನು ತಗೊಳ್ಳಲಿ ಎಂದು ಸರ್ಕಾರ ವಾದ ಮಂಡಿಸಿತು.
ನಾಲ್ವರ ಮೇಲೆ ಯಾವುದೇ ದೌರ್ಜನ್ಯ ಮಾಡಬಾರದು ಎಂದು ಹೈಕೋರ್ಟ್ ನ್ಯಾಯಾಧೀಶರ ಆದೇಶಿಸಿದರು.
ಯಾಕೆ ಜಾಮೀನು ತಗೋಬೇಕು ? ಹೋರಾಟಗಾರರನ್ನು, ದೂರುದಾರರನ್ನೇ ಕಾನೂನು ಉಲ್ಲಂಘಿಸಿ ಎಫ್ಐಆರ್ ಮಾಡಿದ್ರೆ ಅದನ್ಜು ಒಪ್ಪಬೇಕಾ ? BNSS 215(1)(b) ಪ್ರಕಾರ ಇದು ಕಾನೂನು ಬಾಹಿರ ಎಂದು ಹಿರಿಯ ವಕೀಲ ಎಸ್ ಬಾಲನ್ ಪ್ರಶ್ನಿಸಿದರು.
ಅಂತಿಮವಾಗಿ ಪೂರ್ತಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶ.
ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media
