ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು: ಹೆಚ್ ​ಡಿ ದೇವೇಗೌಡ

ಬೆಂಗಳೂರು: ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧಸುಳ್ಳು. ನನಗೂ ಆರ್​ಎಸ್​ಎಸ್​ಗೂ ಯಾವುದೇ ಸಂಬಂಧವಿಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಹೆಚ್‌ ಡಿ ದೇವೇಗೌಡ ನನಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ. ಆರ್‌ಎಸ್‌ಎಸ್ ಬಗ್ಗೆ ಗಂಧವೂ ಗೊತ್ತಿಲ್ಲ. ನಾನು ಬೈಟಕ್‌ ಕೂತಿಲ್ಲ, ಹೊಗಳಿಯೂ ಇಲ್ಲ. ರಾಮ್‌ಲೀಲಾ ಮೈದಾನದಲ್ಲಿ ಯಾರ‍್ಯಾರು ಏನು ಹೇಳಿದರು ಎಂಬುದು ಎಲ್ಲವೂ ಗೊತ್ತಿದೆ, ಈಗ ಚರ್ಚೆ ಬೇಡ ಎಂದರು.

ಇದನ್ನು ಓದಿ: ಪಿಡಿಒಯಿಂದ ರಾಷ್ಟ್ರಪತಿವರೆಗೂ ಆರೆಸ್ಸೆಸ್‌ ನವರೇ ಇದ್ದಾರೆ: ಹೆಚ್‌ಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್

ಸಿಂದಗಿಯಲ್ಲಿ ನಾನು ಹೆಚ್ಚು ಪ್ರಚಾರ ಮಾಡುವೆ. ಮತ ಕೇಳುವ ಎಲ್ಲ ಹಕ್ಕು ನನಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕೆಲಸ ಮಾಡಿದ್ದೇನೆ. ಸಿಂದಗಿ, ಇಂಡಿಗೆ ನೀರಾವರಿ‌ ಮಾಡಿಸಿದ್ದೇನೆ. ನಾನು ಪ್ರಧಾನಿ ಆಗಿದ್ದಾಗ ಯುಕೆಪಿಗೆ ಅನುದಾನ ಕೊಟ್ಟಿದ್ದೆ. ನಾನು ಸಿಂದಗಿಯಲ್ಲೇ ಹೆಚ್ಚು ವಾಸ್ತವ್ಯ ಮಾಡುತ್ತೇನೆ ಎಂದು ದೇವೇಗೌಡ ಮಾಹಿತಿ ನೀಡಿದರು.

ಎಲ್.ಕೆ.ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಚರ್ಚೆ ಮಾಡಿದ್ದೆವು. ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಕಾರ್ಯಕ್ರಮ ನಡೆದಿತ್ತು. ನನ್ನ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ನಡೆದಿತ್ತು. ಸಭೆ ದುರುಪಯೋಗ ಮಾಡುವುದು ಸರಿಯಲ್ಲವೆಂದು ಹೇಳಿದ್ದೆ. ಅಂದು ನಡೆದ ಸಭೆಯಲ್ಲೇ ನಾನು ಹೇಳಿದ್ದೆ. ತುರ್ತುಪರಿಸ್ಥಿತಿ ಬೆಂಬಲಿಸ್ತೇವೆಂದು ಹಲವರು ಬರೆದುಕೊಟ್ಟಿದ್ದರು ಎಂದು ಹೆಚ್.ಡಿ.ದೇವೇಗೌಡ ಹೇಳಿದರು.

‘ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್‌ನವರು ಹೊತ್ತೊಯ್ದರೆ ನಾವೇನು ಮಾಡಬೇಕು’ ಎಂದು ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು. ಹೀಗಾಗಿ ಸಿಂದಗಿ ಕ್ಷೇತ್ರದಲ್ಲಿ ನಾವು ಬೇರೆ ಅಭ್ಯರ್ಥಿ ಹಾಕಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸ್ಥಿತಿ ಏನಾಗುತ್ತಿದೆ ಎಂಬುದು ಗೊತ್ತಿದೆ. ನೆಹರೂ ಕಾಲದಿಂದ ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿಗೆ ಬಂದಿದೆ. ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ‌ ಇರಲ್ಲ ಎಂದು ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಮುಸ್ಲಿಂ ಸಮುದಾಯವನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ. ಬಲಗೈ ಭಂಟ ಎನ್ನುವುದಿಲ್ಲ ಎಂದು ಜಮೀರ್ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ದೇವೇಗೌಡ ಕಿಡಿಕಾರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *