ಸರಕಾರಗಳ ನೀತಿಗಳಿಂದ ಜನ ಹಸಿವಿನಿಂದ ಸಾಯುತ್ತಿದ್ದಾರೆ – ಮಹಾಂತೇಶ್

ವರದಿ : ಆನಂದರಾಜ್

ದಾವಣಗೆರೆ : ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಡಬಲ್ ಎಂಜೀನ್ ಸರ್ಕಾರಗಳು ಒಂದೆಡೆ ದೇಶದ ಹಸಿವಿನ ಸೂಚ್ಯಂಕವನ್ನು ಜಾಗತಿಕವಾಗಿ 107 ನೇ ಸ್ಥಾನಕ್ಕೇರಿಸಿ ಇನ್ನೊಂದು ಕಡೆ ಅಸಾಮಾನ್ಯ ಶ್ರೀಮಂತರನ್ನು ಸೃಷ್ಟಿಸಿವೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಟೀಕಿಸಿದರು.

ದಾವಣಗೆರೆ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಸಿಐಟಿಯು 6 ನೇ ಜಿಲ್ಲಾ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದ ‌ಅವರು ಕಳೆದ ಮೂರು ದಶಕಗಳಿಂದ ದೇಶದಲ್ಲಿ ಜಾರಿಗೊಳಿಸಿದ ನವ ಉದಾರವಾದಿ ಆರ್ಥಿಕ ನೀತಿಗಳು ಕೋಟ್ಯಾಂತರ ದುಡಿಯುವ ಜನರನ್ನು ಅಸಮಾನಯತ್ತ ದೂಡಿ ನೂರಾರು ಮಿಲಿಯಾಧಿಪತಿಗಳನ್ನು ಸೃಷ್ಟಿಸಿತು ಕಳೆದ ಎಂಟು ವರ್ಷಗಳ ಬಿಜೆಪಿ ಸರ್ಕಾರ ಅನುಸರಿದ ಕಾರ್ಪೋರೆಟ್ ಆರ್ಥಿಕ ಕ್ರಮಗಳು ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7 ರ ಗಡಿದಾಟಲು ಮತ್ತು ಜಾಗತಿಕ ಹಸಿವಿನ ಸೂಚ್ಯಂಕ ವನ್ನು 107 ಸ್ಥಾನಕ್ಕೆ ಏರಲು ಕಾರಣವಾಗಿವೆ ಅದೇ ವೇಳೆ ದೇಶದಲ್ಲಿ ಅದಾನಿ ,ಅಂಬಾನಿಯಂತಹ ಬೆರಣಿಕೆಯ ಶತಕೋಟ್ಯಾಧೀಶರನ್ನು ಸೃಷ್ಟಿ ಮಾಡಿದೆ.ಅಸಂಘಟಿತ ವಲಯದ ಕಾರ್ಮಿಕರ‌ದಿನದ ಆದಾಯ ರೂ 200 ಗಡಿಯೊಳಗೆ ಇರುವಾಗ ಅದಾನಿಯ ದಿನದ ಗಳಿಕೆ ಮಾತ್ರವೇ 1600 ಕೋಟಿ ದಾಟಿರುವುದು ನಮ್ಮ ಕಾಲದ ಅತಿದೊಡ್ಡ ಬೆಳವಣಿಗೆ ಎಂದು ನಾವೆಲ್ಲ ಹೆಮ್ಮೆ ಮಟ್ಡುಕೊಳ್ಳೋಣವೇ ಎಂದು ಅವರು ವ್ಯಂಗ್ಯ ವಾಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ನೌಕರರ ಸಂಘದ ನಾಯಕಿ ಲತಾಭಾಯಿ ಮಾತನಾಡಿ ಕಳೆದ ನಲವತ್ತು ವರ್ಷಗಳಿಂದ ಮಕ್ಕಳ ಹಸಿವು,ತಾಯಂದಿರ ಅಪೌಷ್ಟಿಕತೆ ನೀಗಿಸಲು ಶ್ರಮಪಡುತ್ತಿರುವ ನೌಕರರಿಗೆ ಕನಿಷ್ಟ ವೇತನ,ಗ್ರಾಚುಟಿ, ಸಾಮಾಜಿಕ ಭದ್ರತೆಯನ್ನು ‌ನೀಡದೇ ಸರ್ಕಾರಗಳು ಶೋಷಣೆ ಮಾಡುತ್ತಿವೆ ಬಿಜೆಪಿ ಸರ್ಕಾರಗಳಂತೂ NEPನ್ನು ಜಾರಿಗೊಳಿಸಿ ಅಂಗನವಾಡಿ ಕೇಂದ್ರಗಳನ್ನೇ ಮುಚ್ಚಲು ಹೊರಟಿದೆ ಈಗಾಗಲೇ ಎಂದು ‌ಟೀಕಿಸಿದರು.

ಗ್ರಾಮಪಂಚಾಯತ್ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬೇತೂರು ಬಸವರಾಜ್ ಮಾತನಾಡಿ ಗ್ರಾಮೀಣಾಭಿವೃದ್ಧಿ ಗಾಗಿ ಹಗಲಿರುಳು ದುಡಿಯುತ್ತಿರುವ ನೌಕರರಿಗೆ ಹತ್ತಾರು ತಿಂಗಳು ವೇತನ‌ ನೀಡಲು ಸಾಧ್ಯವಾಗದ ಸರ್ಕಾರಗಳು ಖಾಸಗೀಕರಣದ‌ ಮಂತ್ರವನ್ನು ದಿನನಿತ್ಯ ಜಪಿಸುತ್ತಿವೆ ಎಂದು ಆರೋಪಿಸಿದರು.

ಉದ್ಘಾಟನೆ ಬಳಿಕ ಜಿಲ್ಲಾ ಸಂಚಾಲಕ ಆನಂದರಾಜ್ ಮಂಡಿಸಿದ ವರದಿ ಮೇಲೆ ಹರಿಹರ ಸಿಐಟಿಯು ಮುಖಂಡ ಮುದಿಮಲ್ಲನಗೌಡ, ಬೀಡಿ ಕಾರ್ಮಿಕ ಸಂಘದ ಅಸ್ಪಾಖುಲ್ಲಾ, ಹಾಸ್ಟಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಏಕಾಂತಪ್ಪ, ಮತ್ತು ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಮಂಜುನಾಥ್ ಆಲೂರು,ಮಂಡಕ್ಕಿಭಟ್ಟಿ ಕಾರ್ಮಿಕರ ಸಂಘದ ರಜೀಯಾಬೀ ಮೊದಲಾದವರು ಮಾತನಾಡಿದರು ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಿಐಟಿಯು ಹಿರಿಯ ಮುಖಂಡ ಶ್ರೀನಿವಾಸ್ ಮೂರ್ತಿ ಧ್ವಜಾ ನೇರವೇರಿಸಿದರು.ಎಸ್.ಎಫ್.ಐ ಮುಖಂಡ‌ ಅನಂತರಾಜ್, ರೈತ ಮುಖಂಡ ಇ.ಶ್ರೀನಿವಾಸ,ಶುಭಕೋರಿದರು.

ಕೊನೆಯಲ್ಲಿ 23 ಜನರ ಜಿಲ್ಲಾ ಸಂಚಾಲಕ ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಿತು.‌ಸಂಚಾಲಕರಾಗಿ ಕೆ.ಎಚ್.ಆನಂದರಾಜ್, ಸಹಾಸಂಚಾಲಕರಾಗಿ ಬೇತೂರು ಬಸವರಾಜ್, ಲತಾಭಾಯಿ ಹಾಗೂ ಮುದಿನ ಮಲ್ಲನಗೌಡ ಆಯ್ಕೆಯಾದರು.

Donate Janashakthi Media

Leave a Reply

Your email address will not be published. Required fields are marked *