ಹಂದಿ ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿ ನಿಧನ

ವಾಷಿಂಗ್ಟನ್: ವೈದ್ಯಕೀಯ ವಿಜ್ಞಾನದ ಜಾಗತಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಮೊದಲ ಚಿಕಿತ್ಸೆಯಾದ ಹಂದಿ  ಹೃದಯ ಕಸಿ ಮಾಡಿಸಿಕೊಂಡ ಮೊದಲ ವ್ಯಕ್ತಿ  ಡೇವಿಡ್ ಬೆನೆಟ್ ಸಾವು ನಿಧನರಾಗಿದ್ದಾರೆ.

ಮೇರಿಲ್ಯಾಂಡ್ ನಿವಾಸಿ 57 ವರ್ಷದ ಡೇವಿಡ್ ಬೆನೆಟ್ ಹೃದಯ ಶ್ವಾಸಕೋಶದ ಬೈಪಾಸ್ ಯಂತ್ರದಲ್ಲಿ ಕಳೆದ  ಹಲವಾರು ತಿಂಗಳುಗಳ ಹಿಂದೆ ಹಾಸಿಗೆ ಹಿಡಿದಿದ್ದರು. ಈ ಹೃದಯ  ಸಂಬಂಧಿತ  ರೋಗದಿಂದ  ಬಳುತ್ತಿದ್ದ ಡೇವಿಡ್ ಬೆನಿಟ್ ಗೆ ಅಮೇರಿಕಾದ ಮೇರಿಲ್ಯಾಂಡ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜಿನ ಶಸ್ತ್ರ ಚಿಕಿತ್ಸಕರು  ಹಂದಿಯ  ಹೃದಯವನ್ನು ಕಸಿಮಾಡಿದ್ದರು. ಆರೋಗ್ಯದಲ್ಲಿ ಏರುಪೇರಿನಲ್ಲಿರುವ  ವ್ಯಕ್ತಿಗೆ ಅಮೇರಿಕಾದ ವೈದ್ಯಕೀಯ ಜಗತ್ತು ಯಶಸ್ವಿಯಾಗಿ ಹಂದಿಯ  ಹೃದಯವನ್ನು ಕಸಿ ಮಾಡಿ ವೈದ್ಯಕೀಯ ಲೋಕಕ್ಕೆ ಅಚ್ಚರಿ ಪಡಿಸಿತ್ತು.

ಇದನ್ನು ಓದಿ: ಬ್ರೇನ್ ಡೆಡ್ ಮನುಷ್ಯನ ಶರೀರಕ್ಕೆ ಹಂದಿ ಮೂತ್ರಪಿಂಡಗಳ ಯಶಸ್ವಿ ಕಸಿ

ಆದರೆ, ಜಗತ್ತಿನಲ್ಲೇ ಹಂದಿ  ಹೃದಯವನ್ನ ಯಶಸ್ವಿಯಾಗಿ ಕಸಿ  ಮಾಡಿಸಿಕೊಂಡ ವ್ಯಕ್ತಿ 2 ತಿಂಗಳ ನಂತರ  ಹಂದಿಯಲ್ಲಿ ಕಾಣುವ ಪಾರ್ಸಿನ್ ವೈರಸ್ ನಿಂದಾಗಿ ಡೇವಿಡ್ ಬೆನೆಟ್ ಏಕಾಏಕಿ ಸಾವನ್ನಪ್ಪಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆ ಫಲಕಾರಿಯಾದಾಗ ಸಂತೋಷ ವ್ಯಕ್ತಪಡಿಸಿದ್ದ ಕುಟುಂಬ, ಇಂದು ಮನೆಯ ಹಿರಿಯ ಸದಸ್ಯನನ್ನು ಕಳೆದುಕೊಂಡ  ದುಃಖಭರಿತವಾಗಿದೆ.

ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ ಅಮೇರಿಕಾದ  ತಜ್ಞರ ತಂಡದಲ್ಲಿದ್ದವರಿಗೆ, ಈ ಸಾವಿನ ನಿಜವಾದ  ಕಾರಣವೆನೆಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಸಾವಿನ ವಿಚಾರವನ್ನು ಸಾರ್ವಜನಿಕವಾಗಿ ಪ್ರಕಟಿಸಲಿಲ್ಲ. ಆ ಹಂದಿ  ಹೃದಯದಲ್ಲಿ ಪೊರ್ ಸಿನ್ ಸೈಟೊಮೆಗಲೊ ವೈರಸ್  ಸೊಂಕು ಇತ್ತು. ಹಾಗಾಗಿ ಇದಕ್ಕೆ ನಿಜವಾದ ಕಾರಣ ಹಂದಿ ಹೃದಯದಲ್ಲಿ ಕಂಡುಬರುವ ವೈರಾಣುಗಳಾಗಿವೆ. ಶಸ್ತ್ರ ಚಿಕಿತ್ಸೆ ಮುನ್ನ ಶಾಸ್ತ್ರತಜ್ಞರು ಈ ವಿಚಾರವನ್ನು  ಆಲೋಚಿಸಿದ್ದರೆ, ಬೆನಿಟ್ ಅವರು ಇನ್ನು ಕೆಲಕಾಲ  ಜೀವಂತವಾಗಿ ಇರುತ್ತಿದ್ದರು ಎಂದು ಯೂನಿವರ್ಸಿಟಿ  ಆಫ್ ಮೇರಿಲ್ಯಾಂಡ್ ನ ವರದಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *