ಬೆಂಗಳೂರು : ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಗೀತೆ ರಚಿಸಿದ್ದಾರೆ.ಸಂವಿಧಾನದ ಬಗ್ಗೆ ಬರೆದ ಈ ಸಾಲುಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವೇ ಧ್ವನಿ ನೀಡಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು ಹಂಸಲೇಖರವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಉಡಿಪಿಯ ಪೇಜಾವರ ಮಠದ ನಡೆಯ ಕುರಿತು ಸತ್ಯದ ಮಾತುಗಳನ್ನು ಆಡಿದ್ದ ಹಂಸಲೇಖರವ ಮಾತುಗಳನ್ನೆ ಬೇಕೆಂದಲೆ ವಿವಾದ ಮಾಡಲಾಗಿತ್ತು. ಅವರ ಉದ್ದೇಶವನ್ನು ತಿರುಚಿ ಅಪಪ್ರಚಾರ, ಪ್ರತಿಭಟನೆ ಮೂಲಕ ವಿವಾದವನ್ನು ಎಬ್ಬಿಸಲಾಯಿತು. ಹಂಸಲೇಖ ವಿರುದ್ಧ ಧ್ವನಿ ಎತ್ತುವವರು ಒಂದು ಕಡೆ. ಹಂಸಲೇಖ ಪರ ಬೆಂಬಲಕ್ಕೆ ನಿಂತವರು ಮತ್ತೊಂದು ಕಡೆ. ಹೀಗಾಗಿ ಇಬ್ಬರ ನಡುವೆ ವಾದ-ವಿವಾದಗಳು, ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹಂಸಲೇಖ ಸಂವಿಧಾನದ ಪಾಠ ಮಾಡಿದ್ದಾರೆ. ಬಡವರ ಗೀತೆಯೊಂದರ ಬಗ್ಗೆ ಸವಿಸ್ತಾರವಾದ ಗೀತೆಯೊಂದನ್ನು ರಚಿಸಿದ್ದಾರೆ. ಈ ಗೀತೆಯೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಂಸಲೇಖ ಸಂವಿಧಾನ ಗೀತೆಯನ್ನು ರಚಿಸಿ, ಸಂವಿಧಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಸಂವಿಧಾನದ ಬಗ್ಗೆ ಹಂಸಲೇಖ ಬರೆದ ಸಾಲುಗಳು ಹೀಗಿವೆ.
” ನಾನು:
ನೀನು:
ನಮಗಾಗಿರೋದೇ ಕಾನೂನು,
ನಾವು:
ನೀವು:
ಎಲ್ಲರೂ ಇದರಲ್ಲಿ ಕೂಡೆವು,
ಕೂಡೆವು:
ಬಾಳೆವು:
ಬಂಧುತ್ವವನು ಕಟ್ಟೇವು
ಜೀವನ ವಿಧಾನ ಯಾನ:
ವಿದ್ಯಾ ಪ್ರಧಾನ ಗಾನ:
ಬೃಹತ್ ಭಾರತದ ಬೃಹತ್ ಸಂವಿಧಾನ!
ಓ ಬಡವರ ಗೀತೆ,
ನೀ ಬಹುಜನ ಜಾತೆ!
ಅಕ್ಷರ ರೂಪದ
ಶಾಂತಿಯ ಧನಿಯ :
ಪ್ರಜಾಪ್ರಭುತ್ವದ institution
ವಂದೇ ಇಂಡಿಯನ್ constitution”
ಇದನ್ನೂ ಓದಿ : ಹಂಸಲೇಖ ಹೇಳಿದ್ದು ಸರಿ… : ಸತ್ಯ ಹೇಳಿದವರು ಕ್ಷಮೆ ಕೇಳುವ, ಹಸಿ ಸುಳ್ಳು ಹೇಳಿದವರು ಪದ್ಮಪ್ರಶಸ್ತಿ ಪಡೆಯುವ ದುಸ್ಥಿತಿ ಸರಿಯಲ್ಲ