ಜನ ತಮಗೆ ಇಷ್ಟವಾದದ್ದು ತಿನ್ನುತ್ತಾರೆ-ಮೊಟ್ಟೆ, ಮಾಂಸ ತಿಂದರೆ ನಿಮಗೇನೂ ಸಮಸ್ಯೆ: ಗುಜರಾತ್ ಹೈಕೋರ್ಟ್ ಪ್ರಶ್ನೆ

ಅಹ್ಮದಾಬಾದ್‌: ಜನರು ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟದ್ದು. ತಮಗೆ ಇಷ್ಟಬಂದದ್ದನ್ನು ತಿನ್ನಲು ಜನರಿಗೆ ಅಡ್ಡಿಪಡಿಸಬೇಡಿ ಎಂದು ಗುಜರಾತ್ ಹೈಕೋರ್ಟ್ ಅಹಮದಾಬಾದ್ ನಗರ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನಗರದಲ್ಲಿ ಮಾಂಸಾಹಾರ ಮಾರಾಟಕ್ಕೆ ಎಎಂಸಿ ಪಾಲಿಕೆಯ ಕೌನ್ಸಿಲರ್ ಗಳು ಆಕ್ಷೇಪ ವ್ಯಕ್ತಪಡಿಸಿ ಬೀದಿಬದಿ ವ್ಯಾಪಾರಿಗಳ ಗಾಡಿಗಳನ್ನು ವಶಪಡಿಸಿಕೊಂಡಿರುವ ಸಂಬಂಧ 25 ಮಂದಿ ಬೀದಿಬದಿ ವ್ಯಾಪಾರಿಗಳು ಗುಜರಾತ್‌ ಹೈಕೋರ್ಟ್‌ನಲ್ಲಿ ವಿವಿಧ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಆಲಿಸುತ್ತಿದ್ದರು.

ಅಧಿಕಾರದಲ್ಲಿರುವ ಪಕ್ಷವು ಜನರನ್ನು ನಿಯಂತ್ರಿಸುತ್ತದೆ. ಮೊಟ್ಟೆಗಳನ್ನು ತಿನ್ನಲು ಬಯಸುವುದಿಲ್ಲ. ಹಾಗಾಗಿ ನಾವು ಅವುಗಳನ್ನು ನಿಲ್ಲಿಸಲು ಬಯಸುತ್ತೇವೆ ಎನ್ನುತ್ತದೆ. ಆಗ ನೀವು ಅವುಗಳನ್ನು ಎತ್ತಿಕೊಂಡು ಹೋಗುತ್ತೀರಾ? ನೀವು ಏಕೆ ಅದನ್ನು ಮಾಡುತ್ತಿದ್ದೀರಿ? ನಿಮ್ಮ ಕಾರ್ಪೋರೇಷನ್ ಆಯುಕ್ತರನ್ನು ಇಲ್ಲಿಗೆ ಬರುವಂತೆ ಹೇಳಿ? ಜನರನ್ನು ಮನಬಂದಂತೆ ನಡೆಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.

ಸಕ್ಕರೆ ಕಾಯಿಲೆ ಬರುವುದು ಎಂಬ ಕಾರಣಕ್ಕೆ ನಾಳೆ ಕಬ್ಬಿನ ರಸವನ್ನು ಸೇವಿಸಬಾರದು ಎಂದು ಹೇಳುತ್ತೀರಿ! ಕಾಫಿ ಆರೋಗ್ಯಕ್ಕೆ ಹಾನಿಕರ ಎಂದರೆ ಅದನ್ನು ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದರು. ಪುಟ್ ಪಾತ್ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಿ, ಆದರೆ ಜಪ್ತಿ ಮಾಡಬೇಡಿ, ಎಂದು ನ್ಯಾಯಮೂರ್ತಿ ವೈಷ್ಣವ್ ಪ್ರಶ್ನಿಸಿದರು.

ಮಾರಾಟಗಾರರ ಸರಕು ಮತ್ತು ಸಾಮಗ್ರಿಗಳನ್ನು ಅವರಿಗೆ ಮರಳಿಸಬೇಕೆಂಬ ಅರ್ಜಿದಾರರ ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಪಾಲಿಕೆಗೆ ನ್ಯಾಯಾಲಯ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು. ಇದೇ ವೇಳೆ, ಯಾರದೋ ಅಹಂಕಾರವನ್ನು ತಣಿಸಲು ಇಂತಹ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳು ಪಾಲಿಕೆಯನ್ನು ಈ ವೇಳೆ ಎಚ್ಚರಿಸಿದರು.

Donate Janashakthi Media

Leave a Reply

Your email address will not be published. Required fields are marked *