ಗುಜುರಾತ್: ಮಾಸ್ಕ್ ಧರಿಸದ ಜನರಿಂದ ಎರಡು ವರ್ಷದಲ್ಲಿ 249 ಕೋಟಿ ದಂಡ ವಸೂಲಿ

ಗಾಂಧಿನಗರ: ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಗುಜರಾತ್‌ ರಾಜ್ಯದಲ್ಲಿ ಜಾರಿಯಲ್ಲಿರುವ ಮಾಸ್ಕ್‌ ಧರಿಸದೆ ತಿರುಗಾಡುತ್ತಿದ್ದ 36 ಲಕ್ಷಕ್ಕೂ ಅಧಿಕ ಜನರಿಂದ ಕಳೆದ ಎರಡು ವರ್ಷಗಳಲ್ಲಿ ಪೊಲೀಸರು 249 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗೃಹ ಖಾತೆಯನ್ನು ಹೊಂದಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಮಾಸ್ಕ್‌ ಧರಿಸದೆ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ 36.26 ಲಕ್ಷ ಜನರಿಂದ 249.90 ಕೋಟಿ ದಂಡ ವಸೂಲು ಮಾಡಲಾಗಿದೆ ಎಂದು ತಿಳಿಸಿದರು.

ಅದಲ್ಲದೆ, ಸ್ಥಳದಲ್ಲೇ ದಂಡವನ್ನು ಪಾವತಿಸದ ಸುಮಾರು 52,000 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ  ಅಡಿಯಲ್ಲಿ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿದ್ದಾರೆ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಅಹಮದಾಬಾದ್ ಜಿಲ್ಲೆಯೊಂದರಿಂದರಲ್ಲೆ 59.85 ಕೋಟಿ ರೂಪಾಯಿ, ಸೂರತ್‍ನಿಂದ 29.47 ಕೋಟಿ ಮತ್ತು ವಡೋದರಾ ಜಿಲ್ಲೆಯಿಂದ 21.01 ಕೋಟಿ ರೂಪಾಯಿ ದಂಡ ದಾಖಲಾಗಿದೆ.

ಗುಜರಾತಿನಲ್ಲಿ ಪ್ರಸ್ತುತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನಗಳ ಒಳಗೆ ಮಾಸ್ಕ್‌ ಧರಿಸದಿದ್ದಲ್ಲಿ 1,000 ರೂಪಾಯಿ ದಂಡವಿತ್ತು ಜುಲೈ 2020 ರಲ್ಲಿ ದಂಡದ ಮೊತ್ತವನ್ನು ರೂ. 200 ರಿಂದ ರೂ. 500 ಕ್ಕೆ ಹೆಚ್ಚಿಸಲಾಯಿತು. ಒಂದು ತಿಂಗಳೊಳಗೆ, ಗುಜರಾತ್ ಹೈಕೋರ್ಟ್ ನಿರ್ದೇಶನದ ಪ್ರಕಾರ ಅದನ್ನು ಮತ್ತೆ ರೂ. 1,000 ಕ್ಕೆ ಏರಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *