ವಿಪಕ್ಷಗಳ ನಾಯಕರು ಮತ್ತು ಪತ್ರಕರ್ತರ ಪೋನ್‌ಗಳ ಮೇಲೆ ‘ಸರ್ಕಾರಿ ಪ್ರಾಯೋಜಿತ’ ದಾಳಿ: ಆಪಲ್ ಐಪೋನ್ ಎಚ್ಚರಿಕೆ

ಹೊಸದಿಲ್ಲಿ: ‘ಸರ್ಕಾರಿ ಪ್ರಾಯೋಜಿತ’ ಕಣ್ಗಾವಲು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಆಪಲ್‌ ಐಫೋನ್ ಎಚ್ಚರಿಕೆ ಸಂದೇಶ ನೀಡಿದೆ ಎಂದು ವಿಪಕ್ಷಗಳ ಹಲವಾರು ಪ್ರಮುಖ ನಾಯಕರು ಹಾಗೂ ಖ್ಯಾತ ಪರ್ತಕರ್ತರು ಮಂಗಳವಾರ ಆರೋಪಿಸಿದ್ದಾರೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ದಿ ವೈರ್ ಸಂಪಾದಕ ಸಿದ್ದಾರ್ಥ್ ವರದರಾಜನ್ ಸೇರಿದಂತೆ 20ಕ್ಕಿಂತ ಹೆಚ್ಚು ಮಂದಿ ಈ ಬಗ್ಗೆ ದೂರಿಕೊಂಡಿದ್ದಾರೆ. ದಾಳಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಹಲವು ಜನರ ಮೊಬೈಲ್‌ಗೂ ಈ ರೀತಿಯ ಸಂದೇಶ ಬಂದಿದೆ ಎಂದು ಆರೋಪಿಸಲಾಗಿದೆ. ಆಪಲ್ ಎಚ್ಚರಿಕೆ ನೀಡಿರುವ ವ್ಯಕ್ತಿಗಳ ಹೆಸರು ಕೆಳಗಿದೆ. ದಾಳಿ

ಇದನ್ನೂ ಓದಿ: ಕರ್ನಾಟಕ-50ರ ಸಂಭ್ರಮ | ಕನ್ನಡ ರಾಜ್ಯೋತ್ಸವದಲ್ಲಿ ಈ 5 ಹಾಡುಗಳು ಕಡ್ಡಾಯ!

1. ಸೀತಾರಾಮ್ ಯೆಚೂರಿ (ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ)
2. ಪ್ರಿಯಾಂಕಾ ಚತುರ್ವೇದಿ (ಶಿವಸೇನಾ UBT ಸಂಸದೆ)
3. ರಾಘವ್ ಚಡ್ಡಾ (ಎಎಪಿ ಸಂಸದ)
4. ಶಶಿ ತರೂರ್ (ಕಾಂಗ್ರೆಸ್ ಸಂಸದ)
5. ಅಸಾದುದ್ದೀನ್ ಓವೈಸಿ (ಎಐಎಂಐಎಂ ಸಂಸದ)
6. ಮಹುವಾ ಮೊಯಿತ್ರಾ (ತೃಣಮೂಲ ಕಾಂಗ್ರೆಸ್ ಸಂಸದೆ)
7. ಪವನ್ ಖೇರಾ (ಕಾಂಗ್ರೆಸ್ ವಕ್ತಾರ)
8. ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷದ ಅಧ್ಯಕ್ಷ)
9. ಸಿದ್ಧಾರ್ಥ್ ವರದರಾಜನ್ (ಸಂಸ್ಥಾಪಕ ಸಂಪಾದಕ, ದಿ ವೈರ್)
10. ಶ್ರೀರಾಮ್ ಕರ್ರಿ (ರೆಸಿಡೆಂಟ್ ಸಂಪಾದಕ, ಡೆಕ್ಕನ್ ಕ್ರಾನಿಕಲ್)
11. ಸಮೀರ್ ಸರನ್ (ಅಧ್ಯಕ್ಷರು, ಅಬ್ಸರ್ವರ್ ರಿಸರ್ಚ್ ಫೌಂಡೇಶನ್)
12. ರೇವತಿ (ಸ್ವತಂತ್ರ ಪತ್ರಕರ್ತೆ)
13. ಕೆ.ಸಿ. ವೇಣುಗೋಪಾಲ್ (ಕಾಂಗ್ರೆಸ್ ಸಂಸದ)
14. ಸುಪ್ರಿಯಾ ಶ್ರೀನಾಟೆ (ಕಾಂಗ್ರೆಸ್ ವಕ್ತಾರರು)
15. ಆನಂದ್ ಮಂಗ್ನಾಲೆ (ಪ್ರಾದೇಶಿಕ ಸಂಪಾದಕ, ದಕ್ಷಿಣ ಏಷ್ಯಾ, OCCRP)
16. ರೇವಂತ್ ರೆಡ್ಡಿ (ಕಾಂಗ್ರೆಸ್ ಸಂಸದ)
17. ಟಿ.ಎಸ್. ಸಿಂಗ್‌ದೇವ್ (ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ)
18. ರವಿ ನಾಯರ್ (ಪತ್ರಕರ್ತ, OCCRP)
19. ಕೆ.ಟಿ. ರಾಮರಾವ್ (ತೆಲಂಗಾಣ ಸಚಿವ ಮತ್ತು BRS ನಾಯಕ)

ಈ ಬಗ್ಗೆ ಮಾತನಾಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, “ಕಳೆದ ರಾತ್ರಿ ನನಗೆ ಆಪಲ್‌ನಿಂದ ಇ-ಮೇಲ್ ಬಂದಿದೆ. ಅದರಲ್ಲಿ, ‘ರಾಜ್ಯ ಪ್ರಾಯೋಜಿತ’ ಕಣ್ಗಾವಲು ಮಾಡಲಾಗುತ್ತಿದೆ ಮತ್ತು ನಿಮ್ಮ ಫೋನ್ ಮತ್ತು ಎಲ್ಲಾ ಡಿವೈಸ್‌ಗಳು ಹ್ಯಾಕ್ ಆಗುತ್ತಿವೆ. ಅಲ್ಲದೆ ಇದನ್ನು ನಿಭಾಯಿಸುವುದು ಕಷ್ಟಕರವಾಗಿದೆ…’ ಎಂದು ಬರೆಯಲಾಗಿದೆ. ನಮ್ಮ ಸಂವಿಧಾನದ ಪ್ರಕಾರ ಖಾಸಗಿತನ ಪ್ರತಿಯೊಬ್ಬ ನಾಗರಿಕನ ಹಕ್ಕು… ಇದನ್ನು ಏಕೆ ಮಾಡಲಾಗುತ್ತಿದೆ ಎಂಬುದರ ಕುರಿತು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವಕ್ಕೆ ಆಳವಾದ ಮತ್ತು ದೊಡ್ಡ ರಂಧ್ರವನ್ನು ಅಗೆಯಲು, ಅಂತಿಮವಾಗಿ ಅದನ್ನು ನಾಶಮಾಡಲು ಈ ಭಾರತ ವಿರೋಧಿ ಸರ್ಕಾರಕ್ಕೆ ಇಂತಹ ಕಣ್ಗಾವಲು ಮತ್ತು ಸ್ನೂಪ್ ರಾಜ್ ಅಗತ್ಯವಿದೆ ಎಂದು ಅವರು ಯೆಚೂರಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಸಾಧಕರಿಗೆ,10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ವಿಜೇತರ ವಿವರ

“ಎಚ್ಚರಿಕೆ: ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ iPhone ಅನ್ನು ಗುರಿಯಾಗಿಸುತ್ತಿರಬಹುದು” ಎಂಬ ಶೀರ್ಷಿಕೆಯ ಇಮೇಲ್, “ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ ಕಾರಣಕ್ಕಾಗಿ ಈ ದಾಳಿಕೋರರು ನಿಮ್ಮನ್ನು ಪ್ರತ್ಯೇಕವಾಗಿ ಗುರಿಪಡಿಸುತ್ತಿರಬಹುದು. ನಿಮ್ಮ ಡಿವೈಸ್‌ ಸರ್ಕಾರಿ ಪ್ರಾಯೋಜಿತ ಆಕ್ರಮಣಕಾರರಿಗೆ ಗುರಿಯಾದರೆ ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು ಅಥವಾ ಕ್ಯಾಮರಾ ಮತ್ತು ಮೈಕ್ರೊಫೋನ್ ಅನ್ನು ದೂರದಿಂದಲೇ ಬಳಸಬಹುದಾಗಿದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ” ಎಂದು ಎಚ್ಚರಿಸಿದೆ.

ಹ್ಯಾಕಿಂಗ್ ಎಚ್ಚರಿಕೆ ಸೂಚನೆಗಳನ್ನು ಕಂಪನಿಯು 2021 ರಲ್ಲಿ ಸಕ್ರಿಯಗೊಳಿಸಿದ್ದು, ಅಂದಿನಿಂದ ಅಂತಹ ಅಧಿಸೂಚನೆಗಳನ್ನು ಸುಮಾರು 150 ದೇಶಗಳ ವ್ಯಕ್ತಿಗಳಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಹಣ ನೀಡುವವರ ಬಗ್ಗೆ ತಿಳಿಯುವ ಹಕ್ಕು ನಾಗರಿಕರಿಗಿಲ್ಲ: ಕೇಂದ್ರದ ಬಿಜೆಪಿ ಸರ್ಕಾರ

ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಮೇಲ್ ಟ್ವೀಟ್ ಮಾಡಿದ್ದಾರೆ.

ಆಪಲ್ ಕಳುಹಿಸಿರುವ ಎಚ್ಚರಿಕೆಯ ಬಗ್ಗೆ ಮೊಹುವಾ ಮೊಯಿತ್ರಾ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, “ಸರ್ಕಾರವು ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂಬ ಆಪಲ್‌ನ ಎಚ್ಚರಿಕೆ ಸಂದೇಶ ನನಗೆ ಬಂದಿದೆ” ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಮತ್ತು ಅದಾನಿ ಬೆದರಿಕೆ ಪಡೆಯನ್ನು ಉಲ್ಲೇಖಿಸಿರುವ ಅವರು, “ನಿಮ್ಮ ಭಯವು ನನಗೆ ನಿಮ್ಮ ಮೇಲೆ ಅನುಕಂಪವನ್ನುಂಟು ಮಾಡುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನವೆಂಬರ್-06 | ನ್ಯೂಸ್ ಕ್ಲಿಕ್ ಮೇಲಿನ ಸುಳ್ಳು ಎಫ್ಐಆರ್ ಪ್ರತಿ ಸುಟ್ಟು ಹಾಕಿ ಪ್ರತಿಭಟನಾ ದಿನ – ಎಸ್ ಕೆ.ಎಂ ಕರೆ

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರವು “ಸರ್ಕಾರವನ್ನು ಅದಾನಿಗೆ ಮಾರಿದೆ” ಎಂದು ಮರೆಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. “ನಿಮಗೆ ಬೇಕಾದ ಎಲ್ಲವನ್ನೂ ಹ್ಯಾಕ್ ಮಾಡಿ, ಆದರೆ ನಾವು ನಿಮ್ಮನ್ನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ದಾಳಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ ಸಚಿವ ಮತ್ತು ಬಿಜೆಪಿ ನಾಯಕ ಅಶ್ವಿನಿ ವೈಷ್ಣವ್ ಅವರು ಆಪಲ್‌ನ ಅಧಿಸೂಚನೆಗಳು “ಅಸ್ಪಷ್ಟ ಮತ್ತು ನಿರ್ದಿಷ್ಟವಲ್ಲದವು” ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಆಪಲ್ ಸಾಧನಗಳು ನಿಜವಾಗಿಯೂ ಸುರಕ್ಷಿತವಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

“ಎಲ್ಲಾ ನಾಗರಿಕರ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದರ ಬಗ್ಗೆ ಭಾರತ ಸರ್ಕಾರವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಈ ಅಧಿಸೂಚನೆಗಳ ಮೂಲವನ್ನು ಪಡೆಯಲು ತನಿಖೆ ನಡೆಸುತ್ತದೆ. ಅಂತಹ ಮಾಹಿತಿ ಮತ್ತು ವ್ಯಾಪಕವಾದ ಊಹಾಪೋಹಗಳ ಹಿನ್ನೆಲೆಯಲ್ಲಿ ಆಪಾದಿತ ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ನೈಜ ಮತ್ತು ನಿಖರವಾದ ಮಾಹಿತಿಯೊಂದಿಗೆ ತನಿಖೆಗೆ ಹಾಜರಾಗಲು ನಾವು ಆಪಲ್ ಅನ್ನು ಕೇಳಿದ್ದೇವೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಬಾರಿಸು ಕನ್ನಡ ಡಿಂಡಿಮವ – ಕುವೆಂಪು – ಹಾಡಿದವರು : ಶ್ವೇತಾ ಮೂರ್ತಿ 

 

Donate Janashakthi Media

Leave a Reply

Your email address will not be published. Required fields are marked *