ಬೆಂಗಳೂರು: ಇದೊಂದು ನಿರ್ಣಾಯಕ ಸಮಯ, ರೈತ ಮತ್ತು ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿ ಎಂದು ನಾವು ತಿಳಿದುಕೊಂಡಿದ್ದೇವೆ. ಎಲ್ಲಿ ನಮ್ಮ ಜನ ಜಾಗೃತಿಯಿಂದ ಇರುತ್ತಾರೋ ಅಲ್ಲಿ ಸರ್ಕಾರ ನಡುಗಬೇಕಾಗುತ್ತದೆ ಎಂದು ಎಐಸಿಸಿಟಿಯು ಮುಖಂಡ ಕ್ಲಿಫ್ಟನ್ ರೊಸಾರಿಯೋ ಹೇಳಿದರು. ಜಾಗೃತಿಯಿಂದ
ಮೂರನೇ ದಿನದ ಮಹಾಧರಣಿಯಲ್ಲಿ ಭಾಗವಹಿಸಿ ಕಾರ್ಮಿಕ ಮತ್ತು ರೈತರ ಪರವಾಗಿ ಮಾತನಾಡಿದ ಅವರು, ಮೋದಿ ಸರ್ಕಾರ ಬಂದಾಗ ಅಚ್ಚೇದಿನ್ ಬರುತ್ತದೆ ಎಂದರು, ಅದು ಎರಡು ವರ್ಷ ಹೇಳಿದರು, ಆದರೆ ಅಚ್ಚಾ ದಿನ್ ನಂತರ ಹೋಯಿತು. ನಂತರ ಬ್ಲಾಕ್ ಮನಿ ತರುತ್ತೇವೆ ಎಂದು ನೋಟ್ ಬ್ಯಾನ್ ಮಾಡಿದ್ರು, ನಂತರ ಜಿಎಸ್‌ಟಿ ತಂದರು. ಕೊರುನಾ ಸಮಯದಲ್ಲಿ ಲಾಕ್‌ಡೌನ್ ಮಾಡಿ ಮನೆಯಲ್ಲೆ ಕೆಲಸ ಮಾಡುವಂತೆ ಹೇಳಿದರು. ಆ ವೇಳೆ ಲಕ್ಷಾಂತರ ಜನರು ಸಾವಿಗೀಡಾದರು, ವಾಸ್ತವದಲ್ಲಿ ಅವರು ಸಾವಿಗೀಡಾಗಿದ್ದು ಅಲ್ಲ, ಈ ಸರ್ಕಾರವೇ ಅವರನ್ನು ಕೊಂದಿದ್ದಾಗಿದೆ ಎಂದರು.ಜಾಗೃತಿಯಿಂದ
ಇದನ್ನೂ ಓದಿ:ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್
ಎರಡೂ ಸರ್ಕಾರ ರೈತರ ವಿರೋಧಿ ಕಾನೂನು ತಂದು ಕಾರ್ಪೋರೇಟ್‌ಗಳಿಗೆ ಸಹಾಯ ಮಾಡಿತು. ಆದರೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಪೌರ ಕಾರ್ಮಿಕರಿಗೆ ಯಾವ ಕಾನೂನು ಕೂಡಾ ತಂದಿಲ್ಲ. ಕಾರ್ಮಿಕರು ಯಾವುದೇ ಸಂಘಟನೆ ಕಟ್ಟಬಾರದು ಎಂದು ಕಾನೂನು ತಂದರು. ಕೇಂದ್ರ ಸರ್ಕಾರ ನಾಗರಿಕ ಕಾಯ್ದೆ ತಿದ್ದುಪಡಿ ತಂದಿತು. ನಾಗರೀಕತೆ ಧರ್ಮ ಬಣ್ಣ ಹಚ್ಚಿದರು. ಯಾವ ರೀತಿಯಲ್ಲಿ ರೈತರು ಗೆದ್ದರೋ, ಸಿಎಎ ವಿರೋಧಕ್ಕೆ ಹೆದರಿ ಅಲ್ಲಿ ಅದು ಬಾಕಿ ಆಯಿತು. ಕೊನೆಗೆ ಹಿಜಾಬ್ ಹೆಸರಿನಲ್ಲಿ ಒಡೆದರು. ಆದರೆ ಕರ್ನಾಟಕದ ಜನತೆ ಅವರನ್ನು ಮನೆಗೆ ಕಳುಹಿಸಿ, ಕರ್ನಾಟಕ ಮಾಡೆಲ್ ಏನೆಂದು ತೋರಿಸಿಕೊಟ್ಟರು. ಇದನ್ನೇ ಮುಂದಿನ ಚುನಾವಣೆಯಲ್ಲಿ ಮಾಡಬೇಕಾಗಿದೆ ಎಂದರು.
ಕೇಂದ್ರದ ಸರ್ಕಾರ ಆರೆಸ್ಸೆಸ್‌ನ ಸರ್ಕಾರ, ದೇಶವನ್ನೇ ಸತ್ಯಾನಾಶ ಮಾಡುವ ಸಮಿತಿ ಅದು. ಅವರಿಗೆ ಭಗತ್ ಸಿಂಗ್, ಗಾಂಧಿಜಿ, ಅಂಬೇಡ್ಕರ್, ಸಂವಿಧಾನ ಬೇಡ. ಅವರಿಗೆ ಬೇಕಾಗಿದ್ದು ಗೋಳ್ವಾಲ್ಕರ್ ಮಾತ್ರ ಬೇಕಾಗಿದೆ. ರೈತ, ಕಾರ್ಮಿಕ, ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿರುದ್ಧ ಹೋದರೆ ಇಲ್ಲಿನ ರಾಜ್ಯ ಸರ್ಕಾರಕ್ಕೂ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.ಜಾಗೃತಿಯಿಂದ
ಉತ್ತರಾಖಂಡದ 41 ಕಾರ್ಮಿಕರು ಹಲವಾರು ದಿನಗಳಿಂದ ಕಷ್ಟ ಪಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿಗೆ ಇವೆಲ್ಲವನ್ನೂ ಮಾತಾಡಲು ಸಮಯವಿಲ್ಲ ಎಂದರು.
ಇದನ್ನೂ ಓದಿ:ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ
ಬೇಡಿಕೆಗಳ ಈಡೇರಿಕೆಗೆ ಮಾತ್ರ ಸೀಮಿತವಾದ ಹೋರಾಟ ಇದಲ್ಲ:ವಿಜಯ ಭಾಸ್ಕರ್
ಎಐಟಿಯುಸಿ ವಿಜಯ ಭಾಸ್ಕರ್ ಅವರು ಮಹಾಧರಣಿಯಲ್ಲಿ ಮಾತನಾಡಿ, ಇದೊಂದು ರಾಜಕೀಯ ಹೋರಾಟ, ಮೂಗಿಗೆ ಜೇನುತುಪ್ಪ ಸವರಿ ವಾಪಾಸು ಹೋಗುವ ಹೋರಾಟ ಇದಲ್ಲ. ರೈತರ ವಿರೋಧಿ ಕಾಯ್ದೆ ವಾಪಾಸು ಪಡೆಯುವ ವೇಳೆ ಲಿಖಿತವಾಗಿ ಕೊಟ್ಟ ವಾಗ್ದಾನಗಳಲ್ಲಿ ಒಂದಾಗಿದೆ ವಿದ್ಯತ್‌ಚ್ಛಕ್ತಿ ಕಾಯ್ದೆ ವಾಪಾಸು ಪಡೆಯುವುದಾಗಿದೆ. ಮತ್ತೊಂದು ರೈತರ ಮೇಲೆ ಹಾಕಲಾದ ಕೇಸ್ ವಾಪಾಸು ಪಡೆಯುವ ಬಗ್ಗೆ ಹೇಳಿದ್ದರು. ಆದರೆ ನಂತರ ಅವರು ಅದನ್ನು ಮರೆತರು. ಯುಪಿ ಚುನಾವಣೆಯಲ್ಲಿ ಕಾಯ್ದೆ ವಾಪಾಸು ಪಡೆದು ಲಿಖಿತ ಭರವಸೆ ಮರೆತರು. ಇದೊಂದು ಫ್ಯಾಸಿಸ್ಟ್ ಸರ್ಕಾರವಾಗಿದೆ. ಸರ್ಕಾರ ಯಾವುದೆ ವ್ಯಾಪಾರ ವ್ಯವಹಾರದಲ್ಲಿ ಇರಬೇಕಿಲ್ಲ ಎಂಬುವುದು ಅವರ ನೀತಿ. ಹಾಗಾಗಿಯೆ ಎಲ್ಲವನ್ನು ಕಾರ್ಪೋರೇಟ್‌ಗಳಿಗೆ ನೀಡಲು ಹವಣಿಸಿದರು, ಆದೆರೆ ರೈತರು ಬಹಳ ಸ್ಮಾರ್ಟ್ ಇದ್ದಾರೆ ಎಂದರು.
ಬೇಡಿಕೆಗಳ ಈಡೇರಿಕೆಗೆ ಮಾತ್ರ ಸೀಮಿತವಾದ ಹೋರಾಟ ಇದಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳುಹಿಸುವ ಸ್ಪಷ್ಟ ರಾಜಕೀಯ ಸಂದೇಶ ಕಳುಹಿಸುವ ಒಂದು ಹೋರಾಟ ಇದಾಗಿದೆ. ಇದರಲ್ಲಿ ರಾಜಕೀಯ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಸ್ಪಷ್ಟವಾಗಿ ಹೇಳುತ್ತೇವೆ, ನಮಗೆ ಇಲ್ಲಿ ಸ್ಪಷ್ಟ ರಾಜಕೀಯ ಸಂದೇಶವಿದೆ. ದೇಶದ್ರೋಹಿ ಸರ್ಕಾರವನ್ನು ಮನೆಗೆ ಕಳುಹಿಸುವ ಹೋರಾಟ ಇದಾಗಿದೆ. ಈ ದೇಶ ಮತ್ತು ಇಲ್ಲಿನ ಜನರನ್ನು ಉಳಿಸುವ ಹೋರಾಟ ಇದಾಗಿದೆ.
ನೀತಿಗಳನ್ನು ವಾಪಾಸು ಪಡೆಯುವ ಬಗ್ಗೆ ರಾಜ್ಯ ಸರ್ಕಾರಕ್ಕೂ ನೀಡಿದ್ದೇವೆ. ರಾಜ್ಯ ಸರ್ಕಾರದಿಂದ ಸಚಿವರು ಬಂದು ಮನವಿ ಸ್ವೀಕರಿಸಿ ಹೋಗಿದ್ದಾರೆ. ಅಷ್ಟು ಮಟ್ಟದ ಸೌಜನ್ಯ ರಾಜ್ಯ ಸರ್ಕಾರ ತೋರಿದೆ. ಆದರೆ ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ರೈತ ಹೋರಾಟಗಾರರನ್ನು ಖಲಿಸ್ತಾನಿಗಳು ಎಂದು ಬಿಂಬಿಸಿ ಅವರನ್ನು ದೇಹಲಿಯ ಹೊರಗಡೆ ಇರುವಂತೆ ಮಾಡಿತ್ತು. ಜನವರಿಗೆ 2024ರಂದು ರಾಮಮಂದಿರ ಉದ್ಘಾಟನೆ ಮಾಡಿದರೂ ಅಧಿಕಾರ ಸಿಗುತ್ತದೆ ಎಂಬುವುದು ಅವರಿಗೆ ಗ್ಯಾರೆಂಟಿ ಇಲ್ಲ. ಸಂವಿದಾನ, ಸಾರ್ಜನಿಕ ವಲಯ ಇದ್ದರೆ ಮಾತ್ರ ಮೀಸಲಾತಿ ಸಾಧ್ಯ ಎಂದು ಹೇಳಿದರು.
ಯಾವುದೆ ಕಾರಣಕ್ಕೂ 2024ರ ಚುನಾವಣೆಯಲ್ಲಿ ದುಷ್ಟ ಎನ್‌ಡಿಎ ಕೂಟವನ್ನು ಸೋಲಿಸಬೇಕು. ಪ್ರಶಾಂತವಾಗಿ ಇದ್ದ ರಾಜ್ಯದ 64 ಸಾವಿರ ಎಕರೆ ಜಮೀನನ್ನು ಕಾರ್ಪೋರೇಟ್ಗೆ ನೀಡಲು ಮಣಿಪುರಕ್ಕೆ ಬೆಂಕಿ ಹಚ್ಚಿದ್ದಾರೆ. 2024ಕ್ಕೆ ಮತ್ತೆ ಬಿಜೆಪಿ ಬಂದಿದ್ದೇ ಆದರೆ ಇಡೀ ದೇಶವನ್ನು ಮಣಿಪುರ ಮಾಡುತ್ತಾರೆ. ದೇಶವನ್ನೆ ಸರ್ವನಾಶ ಮಾಡುತ್ತಾರೆ. ಒಂದೇ ಒಂದು ಗುರಿಯನ್ನು ಇಟ್ಟುಕೊಂಡು ಈ ಫ್ಯಾಸಿಸ್ಟ್ ಶಕ್ತಿಯನ್ನು ನಾವು ಸೋಲಿಸಬೇಕಾಗಿದೆ ಎಂದರು. ಜಾಗೃತಿಯಿಂದ
ವಿಡಿಯೋ ನೋಡಿ:ಮಹಾಧರಣಿ| ದುಡಿಯುವ ಜನರ ಮಹಾಧರಣಿ: ಮೂರನೇ ದಿನದ ನೇರ ಪ್ರಸಾರ