ರಾಮಮಂದಿರ ಉದ್ಘಾಟನೆ ಬಳಿಕ ಗೋಧ್ರಾ ರೀತಿಯ ಘಟನೆ ಸಂಭವಿಸಬಹುದು: ಉದ್ಧವ್ ಠಾಕ್ರೆ ಎಚ್ಚರಿಕೆ

ಜಲವಾಂವ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಉದ್ಘಾಟನೆಗೆ ರಾಷ್ಟ್ರದಾದ್ಯಂತ ಜನರು ಸೇರುವ ನಿರೀಕ್ಷೆಯಿದ್ದು, ಅಲ್ಲಿಂದ “ಹಿಂತಿರುಗುವ” ಸಮಯದಲ್ಲಿ “ಗೋಧ್ರಾ ರೀತಿಯ” ಘಟನೆ ಸಂಭವಿಸಬಹುದು ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಎಚ್ಚರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಯಾಗುವ ಸಾಧ್ಯತೆ ಇದೆ.

2002ರ ಫೆಬ್ರವರಿ 27 ರಂದು ಗುಜರಾತ್‌ನ ಗೋಧ್ರಾ ನಿಲ್ದಾಣದಲ್ಲಿ ಅಯೋಧ್ಯೆಯಿಂದ ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ವಾಪಸಾಗುತ್ತಿದ್ದ ಕರಸೇವಕರ (ಬಾಬರಿ ಮಸೀದಿ ಒಡೆಯುವ ದುಷ್ಕೃತ್ಯದಲ್ಲಿ ಭಾಗವಹಿಸಿದ ದುಷ್ಕರ್ಮಿಗಳಿಗೆ ಸಂಘ ಪರಿವಾರದ ಬಳಸುವ ಪದ) ಮೇಲೆ ದಾಳಿ ನಡೆಸಲಾಗಿತ್ತು. ಅಲ್ಲದೆ, ಅವರಿದ್ಧ ರೈಲು ಕೋಚ್‌ಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯ ನಂತರ ಗುಜರಾತ್‌ನಾದ್ಯಂತ ದೊಡ್ಡ ಪ್ರಮಾಣದ ಗಲಭೆಗಳು ಭುಗಿಲೆದ್ದಿತ್ತು. ಉದ್ಧವ್ ಠಾಕ್ರೆ

ಇದನ್ನೂ ಓದಿ: ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 7 : ‘ಅದಾನಿ ಹಗರಣ’

“ಸರ್ಕಾರವು ರಾಮಮಂದಿರ ಉದ್ಘಾಟನೆಗೆ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್‌ಗಳು ಮತ್ತು ಟ್ರಕ್‌ಗಳಲ್ಲಿ ಆಹ್ವಾನಿಸುವ ಸಾಧ್ಯತೆಯಿದೆ. ಅವರು ಹಿಂದಿರುಗುವಾಗ ಗೋಧ್ರಾದಲ್ಲಿ ಸಂಭವಿಸಿದ ರೀತಿಯ ಘಟನೆ ಸಂಭವಿಸಬಹುದು” ಎಂದು ಠಾಕ್ರೆ ಜಲಗಾಂವ್‌ನಲ್ಲಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಉದ್ಧವ್ ಠಾಕ್ರೆ ಅವರದೆ ರೀತಿಯ ಹೇಳಿಕೆಯನ್ನು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ, ಬಿಜೆಪಿ ನಾಯಕ ಸತ್ಯಪಾಲ್ ಮಲಿಕ್ ಕೂಡಾ ಹೇಳಿದ್ದರು. ಜುಲೈನಲ್ಲಿ ಹೇಳಿಕೆ ನೀಡಿದ್ದ ಅವರು, “2024ರ ಲೋಕಸಭಾ ಚುನಾವಣೆ ಗೆಲ್ಲಲು ರಾಮಮಂದಿರ ಸ್ಫೋಟ ಸೇರಿದಂತೆ ಬಿಜೆಪಿ ನಾಯಕರು ದೇಶದಲ್ಲಿ ಯಾವುದೇ ರೀತಿಯ ಗಂಭೀರ ಅನಾಹುತ ಮಾಡಿಸಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪುಲ್ವಾಮ ದಾಳಿಗೆ ಪ್ರಧಾನಿ ಮೋದಿ ಸರ್ಕಾರದ ಅಸಮರ್ಥತೆಯೇ ಕಾರಣ ಎಂದಿದ್ದ ಮಾಜಿ ಗೌವರ್ನರ್ ಸತ್ಯಪಾಲ್ ಮಲಿಕ್‌ಗೆ ಸಿಬಿಐ ನೋಟಿಸ್

ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅವರು, “ಚುನಾವಣೆ ಗೆಲ್ಲಲು ರಾಮಮಂದಿರ ಸ್ಫೋಟ ಅಥವಾ ಪ್ರಭಾವಿ ಬಿಜೆಪಿ ನಾಯಕನ ಹತ್ಯೆ ಮಾಡಿಸಿ ರಾಜಕೀಯ ಲಾಭ ಪಡೆದುಕೊಳ್ಳಬಹುದು. ಪುಲ್ವಾಮ ದಾಳಿ ಮಾಡಿಸಿದವರು ಏನನ್ನು ಬೇಕಾದರೂ ಮಾಡಬಹುದು” ಎಂದು ಮಲಿಕ್ ಹೇಳಿದ್ದರು. ಅವರ ಹೇಳಿಕೆಯನ್ನು ಅವರು ತನ್ನ ಟ್ವಿಟರ್‌ನಲ್ಲಿ ಕೂಡಾ ಅಪ್‌ಲೋಡ್‌ ಮಾಡಿದ್ದರು.

ಪ್ರಧಾನಿ ಮೋದಿಯವರ ನಿರ್ದಯ ಚುನಾವಣಾ ತಂತ್ರಗಳನ್ನು ಉಲ್ಲೇಖಿಸಿದ್ದ ಮಲಿಕ್, “2019ರ ಪುಲ್ವಾಮಾ ದಾಳಿಯನ್ನು ಉಂಟುಮಾಡುವ ಸಾಮರ್ಥ್ಯವಿರುವ ಯಾರಾದರೂ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಏನು ಬೇಕಾದರೂ ಮಾಡಬಹುದು. ಪ್ರಧಾನಿ ಮೋದಿಗೆ ಹೇಗೆ ಕುತಂತ್ರವಾಗಿ ಆಡಳಿತ ನಡೆಸಬೇಕು ಎಂದು ತಿಳಿದಿದೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುವ ಕಾರಣದಿಂದ ಈಗಲೇ ರಾಜೀನಾಮೆ ನೀಡುವುದು ಒಳ್ಳೆಯದು” ಎಂದು ಸತ್ಯಪಾಲ್ ಮಲಿಕ್ ಆಗ್ರಹಿಸಿದ್ದರು.

ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಇದು ನಾಚಿಕೆಗೇಡಿನ ಮತ್ತು ಅಸಭ್ಯ ಹೇಳಿಕೆಯಾಗಿದೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ತಿಂಗಳ ಪಗಾರ ಕಮ್ಮಿ- ಅದೂ ಸರಿಯಾಗಿ ಬರಲ್ಲ- ಸಂಜೀವಿನಿ ನೌಕರರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *