“ನುಡಿದಂತೆ ನಡೆದ ಮೋದಿ ಸರ್ಕಾರ: GDP ಏರಿತು, ಜನರ ಜೇಬು ಖಾಲಿಯಾಯಿತು!”

– ಗುರುರಾಜ ದೇಸಾಯಿ
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ಸುದ್ದಿ ಕೇಳಿದಾಗ ದೇಶದ ಪ್ರತಿಯೊಬ್ಬ ನಾಗರಿಕನ ಎದೆ ಉಬ್ಬಬೇಕು. ಟಿವಿ ಸ್ಟುಡಿಯೋಗಳಲ್ಲಿ ಚಪ್ಪಾಳೆ ತಟ್ಟಬೇಕು. ವಾಟ್ಸಾಪ್ ಗುಂಪುಗಳಲ್ಲಿ ದೇಶಭಕ್ತಿ ಸಂದೇಶಗಳು ಹರಿದಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ “ವಿಶ್ವಗುರು ಭಾರತ” ಎಂಬ ಪೋಸ್ಟ್‌ಗಳು ವೈರಲ್ ಆಗಬೇಕು. ಮೋದಿ

ಆದರೆ ಅದೇ ಸಮಯದಲ್ಲಿ ಒಬ್ಬ ಬೈಕ್ ಸವಾರ ಪೆಟ್ರೋಲ್ ಬಂಕ್‌ಗೆ ಹೋಗಿ ₹100ಕ್ಕೆ ಪೆಟ್ರೋಲ್ ಹಾಕಿಸಿಕೊಂಡಾಗ, ಮೀಟರ್‌ನಲ್ಲಿ ಕೇವಲ ಒಂದು ಲೀಟರ್ ಕೂಡ ತುಂಬದ ದೃಶ್ಯವನ್ನು ನೋಡಿದರೆ ಅವನಿಗೆ GDP ಬಗ್ಗೆ ಹೆಮ್ಮೆಪಡುವುದೋ ಅಥವಾ ತನ್ನ ಪರ್ಸ್ ಬಗ್ಗೆ ಚಿಂತಿಸುವುದೋ ಎಂಬ ಗೊಂದಲ ಶುರುವಾಗುತ್ತದೆ.

ಅರ್ಥಶಾಸ್ತ್ರಜ್ಞರು GDP ಎಂದರೆ Gross Domestic Product ಎಂದು ಹೇಳುತ್ತಾರೆ. ಆದರೆ ಈಗ ಜನರ ಅನುಭವದಲ್ಲಿ ಅದರ ಅರ್ಥ ಬದಲಾಗಿದೆ. ಮೋದಿ

G = Gas ಬೆಲೆ
D = Diesel ಬೆಲೆ
P = Petrol ಬೆಲೆ

ನಾಲ್ಕನೇ ಸ್ಥಾನದಲ್ಲಿ ಭಾರತ, 121ನೇ ಸ್ಥಾನದಲ್ಲಿ ಭಾರತೀಯ! ಮೋದಿ

ಇದನ್ನೂ ಓದಿ: ನೀರಿನ ಸೋರಿಕೆ, ಕಳ್ಳತನಕ್ಕೆ ಬ್ರೇಕ್: AI ಆಧಾರಿತ ಯೋಜನೆ ಆರಂಭ

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ. ಆದರೆ ಪೆಟ್ರೋಲ್ ಖರೀದಿ ಸಾಮರ್ಥ್ಯದಲ್ಲಿ 158 ದೇಶಗಳ ಪೈಕಿ 121ನೇ ಸ್ಥಾನದಲ್ಲಿದೆ. ಮೋದಿ

ಇದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ತರಗತಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ ಎಂದು ಘೋಷಿಸಿ, ಅಂಕಪಟ್ಟಿ ನೋಡಿದಾಗ ಗಣಿತದಲ್ಲಿ 35 ಅಂಕ, ವಿಜ್ಞಾನದಲ್ಲಿ 38 ಅಂಕ ಮತ್ತು ಇಂಗ್ಲಿಷ್‌ನಲ್ಲಿ ಗ್ರೇಸ್ ಮಾರ್ಕ್ಸ್‌ನಿಂದ ಪಾಸ್ ಆಗಿರುವುದನ್ನು ಕಂಡಂತಿದೆ! ಮೋದಿ

ದೇಶ ಶ್ರೀಮಂತವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ದೇಶದ ಜನರು ಶ್ರೀಮಂತರಾಗುತ್ತಿದ್ದಾರೆ ಎನ್ನುವುದಕ್ಕೆ ಅಂಕಿಅಂಶಗಳು ಸಾಕ್ಷಿಯಾಗುತ್ತಿಲ್ಲ.

ಅಂಕೆಗಳ ಜಾದೂ

ಸರ್ಕಾರ ಹೇಳುತ್ತದೆ:

“ಭಾರತದ ಆರ್ಥಿಕತೆ 4 ಟ್ರಿಲಿಯನ್ ಡಾಲರ್ ದಾಟಿದೆ.”

ಜನ ಕೇಳುತ್ತಾರೆ:

“ಸಾರ್, ನನ್ನ ಸಂಬಳ ಯಾವಾಗ 36 ಸಾವಿರ ದಾಟುತ್ತದೆ?”

ಸರ್ಕಾರ ಹೇಳುತ್ತದೆ:

“ಭಾರತ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ.”

ಜನ ಕೇಳುತ್ತಾರೆ:

“ಹಾಗಾದರೆ LPG ಸಿಲಿಂಡರ್ ಮತ್ತೆ ₹500ಕ್ಕೆ ಯಾವಾಗ ಬರುತ್ತದೆ?”

ಸರ್ಕಾರ ಹೇಳುತ್ತದೆ:

“ವಿಶ್ವವೇ ಭಾರತವನ್ನು ಮೆಚ್ಚುತ್ತಿದೆ.”

ಜನ ಕೇಳುತ್ತಾರೆ:

“ಹಾಗಾದರೆ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಯಾಕೆ ನಮ್ಮನ್ನು ದೋಚುತ್ತಿದ್ದಾರೆ?”

ಮುಂದಿನ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಮತ್ತೆ GDP ಅಂಕೆಗಳನ್ನು ತೋರಿಸುತ್ತಲೆ ಇದ್ದಾರೆ…

GDP ಬೆಳವಣಿಗೆ ಯಾರಿಗೆ?

ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ಸ್ಕೂಟರ್, ಒಂದು ಗ್ಯಾಸ್ ಸಿಲಿಂಡರ್ ಮತ್ತು ತಿಂಗಳಿಗೆ ಎರಡು ಬಾರಿ ಹೋಟೆಲ್ ಊಟ ಸಾಕಾಗುತ್ತಿತ್ತು.

ಈಗ ಕುಟುಂಬದ ಬಜೆಟ್ ಸಭೆಯಲ್ಲಿ ಮೊದಲ ಪ್ರಶ್ನೆ:

“ಈ ತಿಂಗಳು ಗ್ಯಾಸ್ ಬುಕ್ ಮಾಡೋಣವೇ, ಇಲ್ಲ ಮಕ್ಕಳ ಶಾಲಾ ಫೀಸ್ ಕಟ್ಟೋಣವೇ?”

ಪೆಟ್ರೋಲ್ ದರ ಏರಿದರೆ ತರಕಾರಿ ದುಬಾರಿ.

ಡೀಸೆಲ್ ದರ ಏರಿದರೆ ಸಾರಿಗೆ ದುಬಾರಿ.

ಗ್ಯಾಸ್ ದರ ಏರಿದರೆ ಅಡುಗೆ ದುಬಾರಿ.

ಆದರೆ ಈ ಎಲ್ಲದರ ನಡುವೆಯೂ GDP ಮಾತ್ರ ಬೆಳೆಯುತ್ತಲೇ ಇರುತ್ತದೆ. ಅದು ಹೇಗೆ? ಮತ್ತೆ ಕುಟುಂಬದ ಸಬೆಯಲ್ಲಿ ಚರ್ಚೆ. ತೋ ಸಾಕಾಯ್ತಪಾ ಟಿವಿ ಆದ್ರೂ ನೋಡೋಣ ಅಂತ ಟಿವಿ ಹಾಕಿದ್ರೂ ಅದರಲ್ಲೂ ಜಿಡಿಪಿಯಲ್ಲಿ ಜಿಗತ ಎಂಬ ಅಂಕಿ ಅಂಶಗಳ ಆಟ.

ಹೀಗಾಗಿ ನಮ್ಮ ಜನರಲ್ಲಿ ಒಂದು ಅನುಮಾನ ಮೂಡಿದೆ! ಅದು ಏನು ಅಂದ್ರೆ.., GDP ಬೆಳೆಯುತ್ತಿದೆ ಎಂದರೆ ದೇಶ ಬೆಳೆಯುತ್ತಿದೆಯೋ, ಇಲ್ಲವೇ ಬೆಲೆಗಳೇ ಬೆಳೆಯುತ್ತಿವೆಯೋ? ಒಂದು ವರದಿ ಹೇಳುತ್ತಿದೆ. ಒಬ್ಬ ಅಮೆರಿಕನ್ ತನ್ನ ಒಂದು ದಿನದ ಆದಾಯದಿಂದ ಸುಮಾರು 199 ಲೀಟರ್ ಪೆಟ್ರೋಲ್ ಖರೀದಿಸಬಲ್ಲ…. ಆದರೆ ಒಬ್ಬ ಬಾರತೀಯ? ಕೇವಲ 8 ಲೀಟರ್‌ ಮಾತ್ರ, ಅಂದರೆ ಅಮೆರಿಕನ್ನನು ಒಂದು ದಿನ ದುಡಿದರೆ ಕಾರಿನಲ್ಲಿ ರಾಜ್ಯ ಸುತ್ತಬಹುದು. ಭಾರತೀಯನು ಒಂದು ದಿನ ದುಡಿದರೆ ಆಫೀಸ್‌ಗೆ ಹೋಗಿ ಬರುವುದನ್ನೇ ಲೆಕ್ಕ ಹಾಕಬೇಕಾದ ಪರಿಸ್ಥಿತಿ.

ದೇಶದ ಆರ್ಥಿಕತೆ ಬೆಳೆಯಬೇಕು. ಅದು ಅಗತ್ಯವೂ ಹೌದು. ಆದರೆ ಆ ಬೆಳವಣಿಗೆಯ ಲಾಭ ಸಾಮಾನ್ಯ ಜನರ ಆದಾಯದಲ್ಲಿ, ಉದ್ಯೋಗದಲ್ಲಿ, ಶಿಕ್ಷಣದಲ್ಲಿ, ಆರೋಗ್ಯದಲ್ಲಿ ಮತ್ತು ಖರೀದಿ ಸಾಮರ್ಥ್ಯದಲ್ಲಿ ಕಾಣಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು GDP ಎಂದರೆ Gross Domestic Product ಎಂದು ನೆನಪಿಡುವುದಿಲ್ಲ. ಬದಲಾಗಿ “ನಮ್ಮ ದೇಶದಲ್ಲಿ GDP ಅಂದ್ರೆ Grossly Difficult Petrol!”

GDP ಬೆಳವಣಿಗೆಯ ಅಂಕೆಗಳು ಆಕಾಶ ಮುಟ್ಟುತ್ತಿವೆ. ಆದರೆ ಪೆಟ್ರೋಲ್ ಬಂಕ್‌ನಲ್ಲಿ ₹100 ನೋಟು ಕೊಟ್ಟಾಗ ಸಿಗುವ ಇಂಧನ ಮಾತ್ರ ನೆಲಕ್ಕಿಳಿಯುತ್ತಲೇ ಇದೆ. ಬಹುಶಃ ಇದೇ ಅಮೃತ ಕಾಲದ ಹೊಸ ಅರ್ಥವಿರಬಹುದು! ಏನಂತೀರಿ……!

ಇದನ್ನೂ ನೋಡಿ: “ಗ್ರಾಮಗಳ ಸ್ವಚ್ಛತೆಗೆ ಶ್ರಮ, ಬದುಕಿಗೆ ಸಂಕಷ್ಟ: ಸ್ವಚ್ಛವಾಹಿನಿ ನೌಕರರ ಅಳಲು” Janashakthi Media

Donate Janashakthi Media

Leave a Reply

Your email address will not be published. Required fields are marked *