ತಿರುವನಂತಪುರ: ಕೆಲವೇ ತಿಂಗಳಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ವೇಳೆ ಸಮಾರಂಭವೊಂದರಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕಾಲೇಜು ವಿದ್ಯಾರ್ಥಿನಿಯರಿಗೆ ಮಾಸಿಕ 1,000 ಸಹಾಯಧನ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದರು. ಕಾಂಗ್ರೆಸ್
ಮಾರ್ಚ್ 7ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ರಾಜ್ಯವ್ಯಾಪಿ ನಡೆಸಿದ್ದ ‘ಪುದುಯುಗ (ನವಯುವ) ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ರಾಹುಲ್ ಭಾಗವಹಿಸಿ ಮಾತನಾಡಿದರು. ‘ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಟದ ಗೆಲುವಿಗಾಗಿ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಟಿ-20 ವಿಶ್ವಕಪ್‌ನಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ ತಿರುವನಂತ ಪುರದ ಸಂಜು ಸ್ಯಾಮ್‌ಸನ್ ಅವರಿಗೆ ರಾಹುಲ್ ಶುಭಾಶಯ ಕೋರಿದರು.
ಇದನ್ನೂ ಓದಿ: ಒಡಿಶಾ| ಏಪ್ರಿಲ್ 1 ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭ: ಚುನಾವಣಾ ಆಯೋಗ
ಯೋಜನೆಗಳು ಯಾವುವು?
- ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ಕಾಲೇಜಿ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹1,000 ಸಹಾಯಧನ
- ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ಆರೋಗ್ಯ ವಿಮೆ
- ವಿವಿಧ ಪಿಂಚಣಿ ಮೊತ್ತವನ್ನು ₹2 ಸಾವಿರದಿಂದ ₹3 ಸಾವಿರಕ್ಕೆ ಏರಿಸುವುದು
- ವೃದ್ಧರಿಗಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪನೆ
ಇದನ್ನೂ ನೋಡಿ: “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media
