ಆರ್​​ಎಸ್​​ಎಸ್​ ಪಥಸಂಚಲನದಲ್ಲಿ ಭಾಗಿ: ನಾಲ್ವರು ಶಿಕ್ಷಕರಿಗೆ ನೋಟಿಸ್

ಬೀದರ್: ಹೈಕೋರ್ಟ್​​ನಲ್ಲಿ RSSಗೆ ಪರೋಕ್ಷವಾಗಿ ಅಂಕುಶ ಹಾಕಹೊರಟಿದ್ದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದೂ, ಹೀಗಿರುವಾಗ ಆರ್​​ಎಸ್​​ಎಸ್​ ಪಥಸಂಚಲನದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಔರಾದ್​ ತಾಲೂಕಿನ ನಾಲ್ವರು ಶಿಕ್ಷಕರಿಗೆ ಕಾರಣ ಕೇಳಿ, ಬಿಇಓ ಅವರಿಂದ ನೋಟಿಸ್​ ಜಾರಿ ಮಾಡಲಾಗಿದೆ.

ಅಕ್ಟೋಬರ್. 7 ಮತ್ತು 13ರಂದು ಔರಾದ್​ನಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ನಡೆದಿತ್ತು. ಶಿಕ್ಷಕರಾದ ಮಹದೇವ​, ಶಾಲಿವಾನ್​, ಪ್ರಕಾಶ್ ಮತ್ತು ಸತೀಶ್​​ ಭಾಗವಹಿಸಿದ್ದರು.

ಈ ಬಗ್ಗೆ ಅಕ್ಟೋಬರ 27 ರಂದು ದಲಿತ ಸೇನೆಯ ಮುಖಂಡರು ಬಿಇಒಗೆ ದೂರು ನೀಡಿದ್ದರು. ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ದೂರು ಸಲಿಸಿದ ಮರುದಿನ ಅಂದರೆ ಮಂಗಳವಾರ ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಇಸ್ರೇಲಿನ ಆಕ್ರಮಣ ಕೋರತೆಗೆ ಲಗಾಮು ಹಾಕಬೇಕು – ಗಾಜಾದ ಮೇಲೆ ಮತ್ತೆ ದಾಳಿಗೆ ಸಿಪಿಐ(ಎಂ) ಖಂಡನೆ

ನೋಟಿಸ್​​ನಲ್ಲಿ ಏನಿದೆ?

ಬೀದರ ಜಿಲ್ಲೆಯ ಔರಾದ ಬಿ ತಾಲೂಕಿನಲ್ಲಿ ಅಕ್ಟೋಬರ್​ 7 ಮತ್ತು 13 ರಂದು ನಡೆದ ಆರ್​​ಎಸ್​​​ಎಸ್​ ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತಿರಿ. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.

ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವುಗಳು ಆರ್‌ಎಸ್​​​ಎಸ್​ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ ಕರ್ತವ್ಯ ಮಾಡಿರುವಿರಿ.

ಈ ಪ್ರಯುಕ್ತ ತಾವುಗಳು ಈ ನೋಟಿಸ್ ತಲುಪಿದ ಬಳಿಕ ಕಾರಣ ಕೇಳುವ ನೋಟಿಸ್‌ಗೆ ಲಿಖಿತ ಹೇಳಿಕೆಯನ್ನು ನೀಡಿ ಖುದ್ದಾಗಿ ಬಂದು ಈ ಕಛೇರಿಗೆ ಸಲ್ಲಿಸುವುದು. ಇಲ್ಲವಾದಲ್ಲಿ ಏಕಪಕ್ಷಿಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ. ನಿಯಂಕ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ನೋಡಿ: ಆರೆಸ್ಸೆಸ್ ನೂರು: ಅಹ್ಮದಾಬಾದ್ ಗಲಭೆಯಿಂದ ನವ ನಾಜೀವಾದದವರೆಗೆJanashakthi Media

Donate Janashakthi Media

Leave a Reply

Your email address will not be published. Required fields are marked *