ಬಿಹಾರ| ರೈಲು ಬೋಗಿ ಜೋಡಿಸುವ ನಡುವೆ ಸಿಲುಕಿ ಫೋರ್ಟರ್ ಸಾವು

ಬಿಹಾರ: ಗುಸರಾಯ್‌ನ ಬ‌ನ್ಸಿ ಜಂಕ್ಷನ್‌ನಲ್ಲಿ ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅನಭಾತದಿಂದಾಗಿ ರೈಲ್ವೆ ಫೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತನನ್ನು ಅಮ‌ ಕುಮಾರ್ ರಾವ್ ಎಂದು ಗುರುತಿಸಲಾಗಿದೆ. ಈತ ಸೇನಾಪುರ ರೈಲ್ವೆ ವಲಯ ವ್ಯಾಪ್ತಿಯ ಎಲ್ಯಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಿಹಾರ

ಲಕ್ಕೋ-ಬ‌‍ನಿ ಎಕ್ಸ್‌ಪ್ರೆಸ್ (ಸಂಖ್ಯೆ: 15204) ಲಕ್ಕೋ ಜಂಕ್ಷನ್‌ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್‌ನ 5 ನೇ ಪ್ಲಾಟ್‌ಫಾರ್ಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಸಾವನ್ನಪ್ಪಿದ್ದಾರೆ. ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿ ನಜ್ಜುಗುಜ್ಜಾಗಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನೀಟ್ ಆಕಾಂಕ್ಷಿಯ ಮೇಲೆ ಅತ್ಯಾಚಾರ ಎಸಗಿ ಬ್ಯಾಕ್ ಮೇಲ್ ಮಾಡುತಿದ್ದ ಇಬ್ಬರು ಶಿಕ್ಷಕರ ಬಂಧನ

ಈ ಭಯಾನಕ ಘಟನೆಯನ್ನು ನೋಡಿದ ಪ್ರಯಾಣಿಕರು ಕೂಗುತ್ತಿದಂತೆಯೇ ರೈಲು ಚಾಲಕ ರೈಲಿನಿಂದ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಈ ಅಪಘಾತದ ಭಯಾನಕ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಎರಡು ಬೋಗಿಗಳ ನಡುವೆ ರಾವ್ ಸಿಲುಕಿರುವುದು ಕಂಡುಬಂದಿದೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಇದನ್ನೂ ನೋಡಿ: ಎಲ್‌ಐಸಿ ಖಾಸಗೀಕರಣದ ವಿರುದ್ಧ ಹೋರಾಟ ಬಲಗೊಳ್ಳಲಿದೆ – ಎಸ್‌.ಕೆ ಗೀತಾ Janashakthi Media

Donate Janashakthi Media

Leave a Reply

Your email address will not be published. Required fields are marked *