ಬೆಂಗಳೂರು: ಎಐ ನ ನಕಲಿ ವಿಡಿಯೋಗಳು ಹಳ್ಳಿಯಿಂದ ದೆಹಲಿ ತನಕ ಸದ್ದು ಮಾಡುತ್ತಿದ್ದು, ಸಾಮಾನ್ಯ ಜನರ ಜೊತೆಗೆ ದೊಡ್ಡ ದೊಡ್ಡ ರಾಜಕೀಯ ನಾಯಕರಿಗೂ ನಕಲಿ ಎಐ ವಿಡಿಯೋ ಬಿಸಿ ತಾಗುತ್ತಿದೆ. ಫೇಕ್
ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಕ್ತಿತ್ವಕ್ಕೆ ಚ್ಯುತಿ ತರಲು, ಕೃತಕ ಬುದ್ಧಿಮತ್ತೆ ಮೂಲಕ ಫೇಕ್ ವಿಡಿಯೋ ಸೃಷ್ಟಿಸಿರುವ ಆರೋಪದ ಹಿನ್ನೆಲೆ ಆರೋಪಿಯನ್ನು ಅರೆಸ್ಟ್ ಮಾಡಲು ಬಲೆ ಬೀಸಲಾಗಿದೆ.
ಇದನ್ನೂ ಓದಿ: ಆನೇಕಲ್ | ಮನೆ ಕಿಟಿಕಿಯಲ್ಲಿ ಇರಿಸಿದ್ದ ಕೀ ಬಳಸಿ 120 ಗ್ರಾಂ ಚಿನ್ನ ಮತ್ತು ನಗದು ಕಳವು
ಎಐ ತಂತ್ರಜ್ಞಾನದ ಸಹಾಯದಿಂದ ನಕಲಿ ವಿಡಿಯೋ ಸೃಷ್ಟಿಸಿರುವ ಆರೋಪವು ಇದಾಗಿದ್ದು, ಕನ್ನಡ ಚಿತ್ರದುರ್ಗ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಹೊಂದಿರುವ ವ್ಯಕ್ತಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಸಿ.ಆರ್.ದೀಪು ಎಂಬುವವರು ನೀಡಿದ ದೂರಿನ ಆಧಾರ ತನಿಖೆ ಶುರುವಾಗಿದ್ದು, ಎಫ್‌ಐಆರ್ ದಾಖಲಾಗಿದೆ.
ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ವಿಡಿಯೋ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರೋಪ ಇದಾಗಿದೆ. ಪೊಲೀಸರು ಈ ಘಟನೆ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಿದ್ದು, ಆರೋಪಿ ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳುವ ನಿರೀಕ್ಷೆ ಇದೆ.
ಇದನ್ನೂ ನೋಡಿ: ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು – ಎನ್ ಎಲ್. ಭರತ್‌ರಾಜ್ Janashakthi Media
