ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಮೇಶ್ ರೆಡ್ಡಿ ಹಾಗೂ ಬೃಹತ್ಪಾದಕರಿ ಸೇರಿದಂತೆ ಹಲವು ಕೈದಿಗಳ ಕೈಯಲ್ಲಿ ಮೊಬೈಲ್ ಕಂಡುಬಂದಿದ್ದು, ಈ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಇದಕ್ಕೆ ಯಾರು ಹೊಣೆಗಾರರಾಗಿದ್ದಾರೆ. ಅಂಥವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇವಂದು ಘಟನೆಗಳು ಮಂಗಳೂರು ಬೆಳಗಾವ್ ಸೇರಿದಂತೆ ಬಹಳ ಕಡೆ ಆದ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪದೇಪದೇ ಆಗಿದ್ದು ಕೇಳಿಬಂದಿದ್ದು ಇದೇ ಕೂಡ ಇದೇ ರೀತಿಯಾದಾಗ ಕೆಲವರನ್ನು ಸಸ್ಪೆಂಡ್ ಮಾಡಲಾಗಿತ್ತು ಎಂದು ಅವರು ಹೇಳಿದರು.
ಇದನ್ನೂ ಓದಿ: ಭೂಪಾಲ್ | ಸರ್ಕಾರಿ ಶಾಲೆಯಲ್ಲಿ ತಟ್ಟೆ ಬದಲಿಗೆ ಪೇಪರ್ ಹಾಳೆಯಲ್ಲಿ ಊಟ ಸವಿಯುತ್ತಿರುವ ವಿಧ್ಯಾರ್ಥಿಗಳು
ಎಡಿಜಿಪಿ ಬಿ ದಯಾನಂದ ಜೊತೆಗೆ ನಾನು ಮಾತನಾಡಿದ್ದೇನೆ ಯಾರು ಹೊಣೆಗಾರರಾಗಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೂಪರಿಟೆಂಡೆಂಟ್ ಮತ್ತು ಕೆಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೂಡಲೇ ವರದಿ ನೀಡುವಂತೆ ನಾನು ಸೂಚನೆ ನೀಡಿದ್ದೇನೆ. ಮೊಬೈಲ್ ಇತರೆ ಫೆಸಿಲಿಟಿ ಯಾರಿಗೂ ಕೊಡುವ ಹಾಗಿಲ್ಲ ಇದನ್ನು ನಾವು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇವೆ ಫೆಸಿಲಿಟಿ ಕೊಟ್ಟರೆ ಜೈಲು ಅಂತ ಹೇಗೆ ಅನ್ನಿಸಿಕೊಳ್ಳುತ್ತದೆ ಉಗ್ರ ಮಾತ್ರವಲ್ಲ ಯಾರಿಗೂ ರಾಜಾತಿಥ್ಯ ನೀಡಂಗಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದರು.
ಇನ್ನು ನಟ ದರ್ಶನ್ ವಿಚಾರವಾಗಿ ಮಾತನಾಡಿದ ಅವರು ಹಾಸಿಗೆ ದಿಂಬಿಗಾಗಿ ದರ್ಶನ್ ಕೋರ್ಟಿಗೆ ಹೋಗಬೇಕಾಯಿತು. ಕೈದಿಗಳಿಗೆ ಸುಲಭವಾಗಿ ಸಿಗುತ್ತೆ ಅನ್ನೋದನ್ನು ನೋಡಿದ್ದೇವೆ. ಎಲ್ಲವನ್ನು ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಇದನ್ನೂ ನೋಡಿ: JNU ವಿದ್ಯಾರ್ಥಿ ಸಂಘದ ಚುನಾವಣೆ | ಎಡ ವಿದ್ಯಾರ್ಥಿ ಒಕ್ಕೂಟ ಕ್ಲೀನ್ ಸ್ವೀಪ್ Janashakthi | #JNUSU |#LeftUnity
