ಅಪ್ರಾಪ್ತ ಬಾಲಕನ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲು ಮೊಹಮ್ಮದ್ ಜುಬೇರ್
ಮುಜಾಫರ್‌ನಗರ (ಯುಪಿ): ಜಿಲ್ಲೆಯ ಖುಬ್ಬಾಪುರ ಗ್ರಾಮದಲ್ಲಿ ಶಿಕ್ಷಕಿಯೊಬ್ಬರ ಸೂಚನೆ ಮೇರೆಗೆ ಸಹಪಾಠಿಗಳು ಹಲ್ಲೆ ಮಾಡಿದ ಅಪ್ರಾಪ್ತ ಮುಸ್ಲಿಂ ಬಾಲಕನ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಸೋಮವಾರ ಇಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
2015ರ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಜುಬೈರ್ ಬಾಲಕನ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ದೂರುದಾರ ವಿಷ್ಣು ದತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ
ಶುಕ್ರವಾರದಂದು ಶಾಲೆಯ ಶಿಕ್ಷಕಿ ತ್ರಿಪ್ತಾ ತ್ಯಾಗಿ ಅವರ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ 2 ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನ ಹೋಮ್‌ವರ್ಕ್ ಮಾಡಿಲ್ಲ ಎಂದು ಆರೋಪಿಸಿ ಸಹಪಾಠಿಗಳಿಂದ ಕಪಾಳಕ್ಕೆ ಹೊಡೆಯುವಂತೆ ಮಾಡಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿತ್ತು.
ಬಾಲಕನ ಕುಟುಂಬದವರು ನೀಡಿದ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ. ಮೊಹಮ್ಮದ್ ಜುಬೇರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಪ್ತಾ ತ್ಯಾಗಿ, ಘಟನೆಗೆ ಕೋಮು ಬಣ್ಣ ನೀಡಲಾಗಿದ್ದು ವೀಡಿಯೊವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಯನ್ನು ವಿದ್ಯಾರ್ಥಿಯ ಚಿಕ್ಕಪ್ಪ ಚಿತ್ರೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. “ಎರಡು ತಿಂಗಳ ಹಿಂದಿನ ಪಾಠವನ್ನು ವಿದ್ಯಾರ್ಥಿ ಕಂಠಪಾಠ ಮಾಡಿರಲಿಲ್ಲ. ಆದ್ದರಿಂದ, ನಾನು ಅವನನ್ನು ಶಿಸ್ತುಕ್ರಮಕ್ಕೆ ಒಳಪಡಿಸಬೇಕಾಗಿತ್ತು, ಆದರೆ ನಾನು ಅಂಗವಿಕಲೆಯಾಗಿದ್ದರಿಂದ ಬೇರೆ ವಿದ್ಯಾರ್ಥಿಗಳ ಮೂಲಕ ಅವನ ಕಪಾಳಕ್ಕೆ ಹೊಡೆಯುವಂತೆ ಮಾಡಿದ್ದೇನೆ” ಎಂದು ಶಿಕ್ಷಕಿ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ತರಗತಿಯಲ್ಲೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಕಗಳಿಂದ ಹೊಡೆಸಿದ ಶಿಕ್ಷಕಿ
ವೈರಲ್ ವೀಡಿಯೊದಲ್ಲಿ, ಶಿಕ್ಷಕಿಯು “ಅವನಿಗೆ ಜೋರಾಗಿ ಹೊಡೆಯಿರಿ” ಎಂದು ಇತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ದಾಖಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಯ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟೆ ಅಲ್ಲದೆ ಮಗುವಿಗೆ ಹೊಡೆದ ಸಹಪಾಠಿಯೊಂದಿಗೆ, ”ಅವನ ಸೊಂಟಕ್ಕೆ ಹೊಡೆಯಿರಿ” ಎಂದು ಹೇಳುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ.
ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜವನ್ನು ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯಾಗಿ ಪರಿವರ್ತಿಸುವುದರಿಂದ ಶಿಕ್ಷಕನು ದೇಶಕ್ಕಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದೇ ಸೀಮೆಎಣ್ಣೆ ಬಿಜೆಪಿಯವರು ಹರಡಿ ಭಾರತದ ಮೂಲೆ ಮೂಲೆಗೆ ಬೆಂಕಿ ಹಚ್ಚಿದ್ದಾರೆ. ಮಕ್ಕಳು ಭಾರತದ ಭವಿಷ್ಯ, ಅವರನ್ನು ದ್ವೇಷಿಸಬೇಡಿ, ನಾವೆಲ್ಲರೂ ಒಟ್ಟಾಗಿ ಪ್ರೀತಿಯನ್ನು ಕಲಿಸಬೇಕು” ಎಂದು ಹೇಳಿದ್ದರು. ಮೊಹಮ್ಮದ್ ಜುಬೇರ್
ವಿಡಿಯೊ ನೋಡಿ: ಸೌಜನ್ಯ ಸಾವಿನ ರಹಸ್ಯ : ಭಾಗ 3 – ಸಂತೋಷ್ ರಾವ್ ಮೈ ಮೇಲಿನ ಗಾಯಗಳು ಹಾಗೂ ಬಣ್ಣ ಬಣ್ಣದ ಕಥೆಗಳುJanashakthi Media