ಬೆಂಗಳೂರು : ಇಬ್ಬರು ಸ್ನೇಹಿತರು ಮೊಬೈಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಒಬ್ಬ ಸ್ನೇಹಿತ ಕೊಲೆಗೆ ಹೀಡಾಗಿರುವ ಘಟನೆ ಸಿ.ಕೆ.ಅಚ್ಚಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಬೈಲ್
ಟಿ.ನರಸೀಪುರ ತಾಲ್ಲೂಕಿನ ಶ್ರೀನಿವಾಸ(45) ಕೊಲೆಯಾದ ಗಾರೆಕೆಲಸಗಾರರ ಆರೋಪಿ ನಾಗರಾಜ ಪರಾರಿಯಾಗಿದ್ದಾನೆ. ಶ್ರೀನಿವಾಸ ಮತ್ತು ನಾಗರಾಜ ಟಿ.ನರಸೀಪುರ ತಾಲ್ಲೂಕಿನ ತಾಯೂರು ನಿವಾಸಿಗಳಾಗಿದ್ದು, ಇವರಿಬ್ಬರೂ ಕತ್ರಿಗುಪ್ಪೆಯ ಶ್ರೀನಿವಾಸನಗರದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.
ಇದನ್ನೂ ಓದಿ : ಬಳ್ಳಾರಿ: ಲಕ್ಕಿ ಡಿಪ್ ಹೆಸರಲ್ಲಿ ವಂಚನೆ – ಗಿಫ್ಟ್ ಕೊಡುತ್ತೆವೆ ಎಂದು ನಂಬಿಸಿ ಹಣ ಪಡೆದು ಪರಾರಿ
ಇವರಿಬ್ಬರೂ ಒಂದೇ ಊರಿನವರಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದರು. ಸಂಜೆ 6.30ರ ಸಮಯದಲ್ಲಿ ಕೆಲಸ ಮುಗಿಸಿಕೊಂಡು ರೂಮ್ಮೆ ಬಂದಿದ್ದಾರೆ. ಆ ವೇಳೆ ನಾಗರಾಜನ ಮೊಬೈಲು ಶ್ರೀನಿವಾಸ ತೆಗೆದುಕೊಂಡನೆಂದ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ನಾಗರಾಜು ನೀರಿನ ಹೀಟರ್(ಕಾಯಿಲ್)ನ್ನು ತೆಗೆದುಕೊಂಡು ಶ್ರೀನಿವಾಸನಿಗೆ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಕ್ಕಪಕ್ಕದವರು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಆರೋಪಿ ನಾಗರಾಜನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
ಇದನ್ನೂ ನೋಡಿ : ನಡುರಸ್ತೇಲಿ ಶರ್ಟ್ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media