ರಂಗಕರ್ಮಿ ಪ್ರೊ. ಸಿ.ಜಿ.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ನಡೆಯುತ್ತಿರುವ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಫೆಬ್ರವರಿ 19 ರಿಂದ 22ರವರೆಗೆ ನಡೆಯಲಿದೆ. ರಂಗೋತ್ಸವದ ಮೊದಲ ದಿನ ದಕ್ಲಾಕಥಾ ದೇವಿಕಾವ್ಯ ಕನ್ನಡ ನಾಟಕ ಪ್ರದರ್ಶನವಾಗಲಿದೆ.
ಭಾಷೆ: ಕನ್ನಡ
ನಿರ್ದೇಶನ: ಲಕ್ಷ್ಮಣ ಕೆ ಪಿ
ತಂಡ: ಜಂಗಮ ಕಲೆಕ್ವಿವ್, ಬೆಂಗಳೂರು.
ಸಮಯ: ಸಂಜೆ 7.15ಕ್ಕೆ
ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.
ದಕ್ಲಾಕಥಾ ದೇವಿಕಾವ್ಯ ಕನ್ನಡ ನಾಟಕ ಕೆ ಬಿ ಸಿದ್ದಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗವನ್ನು ಜಂಗಮ ಕಲೆಕ್ವಿವ್, ಬೆಂಗಳೂರು ತಂಡ ಪ್ರದರ್ಶಿಸುತ್ತಿದೆ. ನಾಟಕರೂಪ ಮತ್ತು ನಿರ್ದೇಶನವನ್ನು ಲಕ್ಷ್ಮಣ ಕೆ.ಪಿ. ಮಾಡಿದ್ದಾರೆ.
‘ದಕ್ಲ ಕಥಾ ದೇವಿ ಕಾವ್ಯ’ ತಳಾತಿತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಈ ಪ್ರಯೋಗ ಅವರ ಆಚರಣೆ, ನಂಬುಗೆ, ಹಸಿವು, ಬಯಕೆ, ಹಾಡುಪಾಡನ್ನು ಬಿಚ್ಚಿಡುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಇಲ್ಲಿನ ನಾದ. ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಈ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಉಂಟಾಗುವ ಅರಿವು ಇಲ್ಲಿ ನಮ್ಮನ್ನು ಎದುರಾಗುತ್ತದೆ.
ನಿರ್ದೇಶಕರ ಲಕ್ಷ್ಮಣ ಕೆ ಪಿ. ನಟ, ನಿರ್ದೇಶಕ, ಬರಹಗಾರ ಮತ್ತು ರಂಗತರಬೇತುದಾರ. ನೀನಾಸಂ (ಹೆಗ್ಗೋಡು) ಮತ್ತು ಸಿಂಗಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ ಪದವೀದರ. ಭಾರತ ಮತ್ತು ವಿದೇಶದ ಅನೇಕ ನಾಟಕೋತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಭಾರತೀಯ ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಮತ್ತು ಸಂಸ್ಕೃತಿಗಳ ಬಗ್ಗೆ ಇವರಿಗಿರುವ ಅಪಾರ ಕಾಳಜಿ ಅವರ ನಾಟಕಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ.
ಜಂಗಮ ಕಲೆಕ್ಟಿವ್ ತಂಡವು ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನೆಲೆಗಳ ಕಲಾವಿದರ ಸಮೂಹ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ.
ಕಲಾವಿದರಾದ ಬಿಂದು ರಕ್ಷಿದಿ, ರಮಿಕ, ರಮಿಕ ಚೈತ್ರ, ಸಂತೋಷ್ ದಿಂಡ್ಗುರು, ನರಸಿಂಹರಾಜು, ಬಿ ಕೆ ಭರತ್, ಡಿಂಗ್ರಿ ಅಭಿನಯಿಸಲಿದ್ದಾರೆ. ರಂಗ ವಿನ್ಯಾಸ ಮೋಹಿತ್ ವಿ ಕೆ, ಬೆಳಕಿನ ವಿನ್ಯಾಸ: ಮಂಜು ನಾರಾಯಣ್, ವಸ್ತ್ರ ವಿನ್ಯಾಸ: ಶ್ವೇತಾರಾಣಿ ಸಹಾಯಕ ನಿರ್ದೇಶನ ಸ್ಕಂದ ಘಾಟೆ, ಶ್ರೀಹರ್ಷ ಜಿ ಎನ್, ಪ್ರೊಡಕ್ಷನ್ ಮ್ಯಾನೇಜರ್: ಪೂರ್ವಿ ಕಲ್ಯಾಣಿ, ಪ್ರಚಾರ: ಮನೋಜ್ ಕುಮಾರ್ ಎಂ, ನೇಪಥ್ಯ: ಚಂದ್ರಶೇಖರ ಎಚ್ ಅವರದು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ