ಮೈಸೂರು: ರಾಜ್ಯದಲ್ಲಿ ಬರೋಬ್ಬರಿ ನೂರು ವರ್ಷದ ನಂತರ ಭೀಕರ ಬರಗಾಲದ ಪರಿಣಾಮ ಅನ್ನದಾತ ರೈತ ಕಂಗಾಲಾಗಿದ್ದಾನೆ.ಅಲ್ಲದೇ ರೈತರ ಬೆಳೆಗೆ ಬಳೆಯೂ ಬಾರದೇ,ಜಾನುವಾರಗಳಿಗೆ ಮೇವು ಸಿಗದೇ ಅನ್ನದಾತ ಕಂಗಾಲಾಗಿದ್ದಾನೆ.
ರೈತರ ಸಮಸ್ಯೆಯನ್ನು ನೂತನವಾಗಿ ಮತದಾನ ಮಾಡುವ ಮೂಲಕ ಬಮಬಿಸುವ ಪ್ರಯತ್ನವನ್ನು ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಮತ್ತಿತ್ತರ ರೈತರು ಮಾಡಿದರು.
ಇದನ್ನು ಓದಿ : ನ್ಯೂಮೋನಿಯಾದಿಂದ ಬಳಲುತ್ತಿದ್ದ ತೀವ್ರಾ ನಿಗಾ ಘಟಕದಲ್ಲಿದ್ದ ವೃದ್ಧೆಯಿಂದ ಮತದಾನ
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಇನ್ನಿತರ ರೈತರು ಎತ್ತಿನಗಾಡಿಗೆ ಹಸಿರು ತೋರಣ ಕಟ್ಟಿ ಒಣಗಿದ ಕಬ್ಬಿನ ಜಲ್ಲೆ ಹಿಡಿದು ವಿನೂತನವಾಗಿ ಬಂದು ಮತಚಲಾಯಿಸಿದ ದೃಶ್ಯ ಕಂಡುಬಂದಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್,ನಾವು ಸಂಕಷ್ಟದಲ್ಲಿ ಇದ್ದರೂ ಕೂಡ ಮತದಾನ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬರುವ ಮುನ್ನ ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ನಮ್ಮನ್ನೆ ತುಳಿಯುತ್ತಾರೆ ಎಂದರು.
ಇದನ್ನು ನೋಡಿ : “ಶೃತಿ ಮೆಡಂ ಶಕ್ತಿ ಯೋಜನೆ ನಮಗೆ ಬಲ ತಂದಿದೆ” ಬಾಯಿ ಇದೆ ಅಂತ ಹೆಂಗೆಂಗೊ ಮಾತಾಡಿದ್ರೆ ಹೇಗೆ ಮೆಡಂ” – ಮಹಿಳೆಯರ ಆಕ್ರೋಶ