ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡ ಮತದಾರರು-ಮೊದಲು ಮತದಾನ ಎಂದವರು

ಬೆಂಗಳೂರು: ಮತದಾನದ ದಿನ ಕೆಲ ಮತದಾರರು ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡು ಎಲ್ಲರನ್ನೂ ಮತದಾನದ ದಿನ ಆಕರ್ಷಿಸಲು ಮುಂದಾಗುತ್ತಾರೆ.

ಇತ್ತ ಮೈಸೂರಿನ ಕುವೆಂಪುನಗರದ ವಿವೇಕಾನಂದ ಸರ್ಕಲ್ ಬಳಿಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ವಿಶೇಷವಾಗಿ ಮಹಾರಾಜರ  ಉಡುಗೆ ತೊಟ್ಟು ಮತದಾನಕ್ಕೆ ಆಗಮಿಸಿ ಜನರನ್ನು ಆಕರ್ಷಿಸಿದ್ದಾರೆ. ಕುವೆಂಪುನಗರದ ನಿವಾಸಿ ಉಮಾಕಾಂತ್ ಎಂಬ ವ್ಯಕ್ತಿ ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿ ವಿಶೇಷವಾಗಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಇವರ ಮಹಾರಾಜರ ತೊಡುಗೆ ನೋಡುಗರ ಗಮನಸೆಳೆದಿದೆ

ಇನ್ನು ಮೈಸೂರಿನ ರಾಜವಂಶದ ಯಧುವೀರ್ ಒಡೆಯರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುದಿಲ್ಲಿ ಗಮನಾರ್ಹ.

ಇದನ್ನೂ ಓದಿ: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯಾಘಾತ; ಪ್ರಾಣ ಉಳಿಸಿದ ಮತದಾನಕ್ಕೆಂದು ಬಂದ ವೈದ್ಯ

ಇತ್ತ ಕಡೆ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ವೈದ್ಯ ಡಾ. ಶ್ರೀಧರ್ ಎಂಬುವವರು ಕುದುರೆ ಏರಿ ಬಂದು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 82 ರಲ್ಲಿ ಮತದಾನ ಮಾಡಿದ್ದು, ಕುದುರೆ ಏರಿ ಮತಗಟ್ಟೆಗೆ ಬಂದ ವೈದ್ಯ ಇತರ ಮತದಾರರ ಗಮನ ಸೆಳೆದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ವಿಜಾಪುರ ಗ್ರಾಮದಲ್ಲಿ ಅರುಣ್ ಹಾಗೂ ಕಾವ್ಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಹೊತ್ತಿನಲ್ಲಿ ಮತಚಲಾಯಿಸಿದ್ದಾರೆ. ಮಾಂಗಲ್ಯಸೂತ್ರ ಧಾರಣೆಯ ನಂತರ ಗ್ರಾಮದ ಮತಗ ಸಂಖ್ಯೆ 13ಕ್ಕೆ ಆಗಮಿಸಿ ನವಜೋಡಿ ಮತದಾನ ಮಾಡಿತು.

ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ವರ ತಾಳಿ ಕಟ್ಟುವ ಮುನ್ನ ಮತದಾನ ಮಾಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಚೇತನ್, ದೀಪಿಕಾ ಜೊತೆ ಸಪ್ತಪದಿ ತುಳಿಯಬೇಕಿತ್ತು. ಆದರೆ, ತಾಳಿ ಕಟ್ಟುವ ಮುನ್ನ ಮತಗಟ್ಟೆ ಸಂಖ್ಯೆ 60ಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ

ಅಲ್ಲದೇ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ ಕೇಂದ್ರ ಸಂಖ್ಯೆ 203 ರಲ್ಲಿ ವಿನುತಾ ಎಂಬ ವಧು ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಮತದಾನ ಮಾಡಿದರು.

ಇದನ್ನೂ ನೋಡಿ: ನೇಹಾ ಹತ್ಯೆ ಪ್ರಕರಣ : ಕಲಿಯಬೇಕಾದ ಪಾಠ- ನಿಲ್ಲಿಸಬೇಕು ಧರ್ಮದ ಹೆಸರಿನ ಆಟ Janashakthi Media

Donate Janashakthi Media

Leave a Reply

Your email address will not be published. Required fields are marked *