ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ (ಎನ್‌ಡಿಎ ಕೂಟ) 400 ಕ್ಕೂ ಹೆಚ್ಚು ಸ್ಥಾನಗಳನ್ನುಪಡೆಯುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಆರ್‌ಎಸ್‌ಎಸ್ ಆಂತರಿಕ ಸರ್ವೆ ಪ್ರಕಾರ ಬಿಜೆಪಿ 200 ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುತ್ತಿದೆ. ಇದರ ಬೆನ್ನಲ್ಲೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಶಿ ಜೂನ್ ವೇಳೆಗೆ 175ಕ್ಕೆ ಬಂದಿರುತ್ತದೆ ಎಂದು ಮಾವಿನ ಹಣ್ಣಿ ದರಕ್ಕೆ ಬಿಜೆಪಿ ಗೆಲ್ಲಬುದಾದ ಸ್ಥಾನಗಳು ಎಂದು ಹೋಲಿಕೆ ಮಾಡಿದ್ದಾರೆ. 400
ಈ ಕುರಿತು ಎಕ್ಸ್ ನಲ್ಲಿ (x) ಪೋಸ್ಟ್ ಮಾಡಿರುವ ಅವರು, ಮಾವಿನ ಹಣ್ಣಿನ ದರದ (mango rate) ಬಗ್ಗೆ ಮಾತನಾಡಿ ಬಿಜೆಪಿ ಘೋಷಣೆಗೆ ವ್ಯಂಗ್ಯ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಅಬ್ ಕಿ ಬಾರ್ 400 ಪರ್’ ಘೋಷಣೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಅವರು 400+ ಎಂದು ಮಾತನಾಡುತ್ತಿದ್ದಾರೆ. ಮೇ ಅಂತ್ಯದವರೆಗೆ ಕಾಯಿರಿ ಮತ್ತು ಅದು 250 ಕ್ಕೆ ಇಳಿಯುತ್ತದೆ. ಜೂನ್ ಮೊದಲ ವಾರದ ವೇಳೆಗೆ ಇದು 175-200 ರ ವ್ಯಾಪ್ತಿಯಲ್ಲಿರಬೇಕು … ನಾನು ಅರ್ಧ ಡಜನ್ ಅಲ್ಫೋನ್ಸೋ ಮಾವಿನ ಹಣ್ಣಿನ ಬೆಲೆಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ
ಪ್ರತಿಯೊಂದು ಸಂದೇಶವು ರಾಜಕೀಯದ ಬಗ್ಗೆ ಇರಬೇಕಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದು, ಖುರೈಶಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಕೆಣಕುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಮೋದಿಜಿಗೆ ನೀವು ಎಷ್ಟು ಬಯಸುತ್ತೀರಿ ಎಂಬುದು ನಮಗೆ ತಿಳಿದಿದೆ. ಮೋದಿ ಮತ್ತು ಬಿಜೆಪಿ ಮೇಲಿನ ನಿಮ್ಮ ದ್ವೇಷವು ಸ್ಪಷ್ಟವಾಗಿದೆ ಎಂದಿದ್ದಾರೆ.
ಮತ್ತೊಬ್ಬರು ಮಾವಿನಹಣ್ಣಿನ ಲೆಕ್ಕಾಚಾರದಲ್ಲೆ ಹುಳುಕನ್ನು ತೆಗೆದಿದ್ದಿರಿ, ನೀವು ಹೇಳಿದಂತೆ 175 ಕ್ಕಿಂತಲೂ ಕಡಿಮೆ ಆಗಬಹುದು. ಕೀಟವನ್ನು ಓಡಿಸಬೇಕು ಎಂದು ಬಿಜೆಪಿಯ ಹೆಸರುಹೇಳದೆ ಪೋಸ್ಟ್ ಮಾಡಿದ್ದಾರೆ.