ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಈಶ್ವರಪ್ಪ

ಶಿವಮೊಗ್ಗ: ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ಧ ಹಾಗೂ ಮೋದಿ ಹಿಂದೂತ್ವ ಹೆಸರಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ, ಬಿ ಎಸ್ ವೈ ಸೇರಿದಂತೆ ಬಿಎಸ್ವೈ ದ್ವಿಪುತ್ರರು ಈಶ್ವರಪ್ಪ ನಾಮಪತ್ರ ಹಿಂಪಡೆಯುತ್ತಾರೆಂದು ಹೇಳಿರುವ ಬಗೆಗಿನ ಹೇಳಿಕೆಯನ್ನು ಈಶ್ವರಪ್ಪ ಸುಳ್ಳು ಮಾಡಿದ್ದಾರೆ.

ನಾಮಪತ್ರ ಹಿಂಪಡೆಯಲು ಏಪ್ರಿಲ್‌ 22 ಅಂತಿಮ ದಿನವಾಗಿದ್ದು ಈಶ್ವರಪ್ಪ ನಾಮಪತ್ರ ಹಿಂತೆಗೆದುಕೊಂಡಿಲ್ಲ. ಅಲ್ಲದೇ ಕಬ್ಬು ಹಿಡಿದ ರೈತನ ಬ್ಲಾಕ್‌ ಎಂಡ್‌ ವೈಟ್‌ ರೇಖಾಚಿತ್ರವುಳ್ಳ ಚಿಹ್ನೆ ಈಶ್ವರಪ್ಪಗೆ ದೊರೆತಿದ್ದು, ಈ ಚಿಹ್ನೆಯಡಿ ಈಶ್ವರಪ್ಪ ಇರಲಿದ್ದಾರೆ.

ಇದನ್ನು ಓದಿ : ಡಿ.ಕೆ. ಶಿವಕುಮಾರ್ ಕಟ್ಟಿಹಾಕಲು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದೆ:ಡಿ.ಕೆ.ಸುರೇಶ್

ಹಿಂದೆ ಮೋದಿ ಹಿಂದೂತ್ವ ಹೆಸರಿನ ಕೇಸರಿ ಶಾಲನ್ನು ಈಶ್ವರಪ್ಪ ಮತು ಬೆಂಬಲಿಗರು ಹೊದ್ದು ಬಿಎಸ್ವೈ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಮೋದಿ ಹೆಸರಿಲ್ಲದೇ ಬಿಎಸ್ವೈ ಮತ್ತು ಅವರ ಮಕ್ಕಳು ಚುನಾವಣೆ ಮಾಡಲೀ ಎಂದು ಸೆಡ್ಡುಹೊಡೆದಿದ್ದರು. 2013 ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿ ಅದರಿಂದ ರುದ್ರೇಗೌಡರನ್ನು ಕಣಕ್ಕಿಳಿಸಿ ಈಶ್ವರಪ್ಪ ಸೋಲಿಗೆ ಕಾರಣರಾಗಿದ್ದರು.

ಈಗ ಈಶ್ವರಪ್ಪ ಬಿಜೆಪಿ ಅಧಿಕೃತ ಅಭ್ಯರ್ಥಿ ಹಾಗೂ ಯಡಿಯೂರಪ್ಪ ಪುತ್ರ ರಾಘವೇಂದ್ರರನ್ನು ಪರಾಭವಗೊಳಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಮೇ 7 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ.

ಇದನ್ನು ನೋಡಿ : ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿಯನ್ನು ಸೋಲಿಸಿ – ವಸುಂಧರಾ ಭೂಪತಿ Janashakthi Media

Donate Janashakthi Media

Leave a Reply

Your email address will not be published. Required fields are marked *