ಬೆಂಗಳೂರು: ಜನ ಶಿಕ್ಷಣ ಟ್ರಸ್ಟ್ ಮತ್ತು ಇಎಂಪಿಆರ್ ಐ ಸಹಯೋಗದಲ್ಲಿ ಪರಿಸರ ಅರಿವು ಸಮಾವೇಶ ನಡೆಯುತ್ತಿದೆ. ಇದೇ ವೇಳೆ “ಕರ್ನಾಟಕ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ” ಕುರಿತು ಉಪನ್ಯಾಸ ನಡೆಯಲಿದೆ.
ಇಎಸ್‌ಐನ ಪ್ರಾಧ್ಯಾಪಕಿ ಡಾ. ಮದುರಾ ಸ್ವಾಮಿನಾಥಮ್ ಆಶಯ ಭಾಷಣ ಮಾಡಲಿದ್ದಾರೆ. ಕರ್ನಾಟಕದ ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಉಪಶಮನ ಮಾಡಲು, ತಾಳಿಕೊಳ್ಳಲು ಕಾರ್ಯ ಯೋಜನೆಯ ಕುರಿತು ಇಎಂಪೊಆರ್‌ಐನ ನಿರ್ದೇಶಕರಾದ ಟಿ. ಮಹೇಶ್ ಹಾಗೂ ಹಿರಿಯ ಸಮಾಲೋಚಕರಾದ ಡಾ. ಸರಿತಾ ಪ್ರಬಂಧ ಮಂಡಿಸಲಿದ್ದಾರೆ.
ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನಿ ಜಿ.ಎನ್. ನಾಗರಾಜ್ ವಹಿಸಲಿದ್ದು, ಕರ್ನಾಟಕದ ಕೃಷಿ ಮತ್ತು ಆಹಾರ ಭದ್ರತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುವುದು ಹೇಗೆ? ಸರಕಾರದ ಕಾರ್ಯ ಯೋಜನೆ-ವಿಮರ್ಶೆ, ಕಾರ್ಯಸಾಧ್ಯತೆ ಕುರಿತು ಸಂವಾದ ನಡೆಯಲಿದೆ.
ಇದನ್ನೂ ಓದಿ : ಅಂಬೇಡ್ಕರ್ ಅವರಿಗೆ “ಅಂಬೇಡ್ಕರ್” ಎಂಬ ವಾಸ್ತವವೇ ಉತ್ತರ….. ಪುರಾಣ ಹಿನ್ನೆಲೆಯ “ದೇವರು ” ಅಲ್ಲ…..!
ಸಂವಾದದಲ್ಲಿ ಸಿ.ಯತಿರಾಜು (ಪರಿಸರ ಚಳುವಳಿಕಾರರು), ಪ್ರೊ. ಮಹಾದೇವ ಮೂರ್ತಿ(ಜಿಕೆವಿಕೆ), ಡಾ.ವಿದ್ಯಾ ಎಸ್. (CSTEP), ಐ.ಯಶವಂತ (ಕರ್ನಾಟಕ ಪ್ರಾಂತ ರೈತ ಸಂಘ), ಡಾ. ಸಿದ್ದನಗೌಡ ಪಾಟೀಲ (ಅಖಿಲ ಭಾರತ ಕಿಸಾನ ಸಭಾ-ಕರ್ನಾಟಕ), ಬಡಗಲಪುರ ನಾಗೇಂದ್ರ (ಕರ್ನಾಟಕ ರಾಜ್ಯ ರೈತ ಸಂಘ), ಎಚ್.ಬಸವರಾಜಪ್ಪ(ಕರ್ನಾಟಕ ರಾಜ್ಯ ರೈತ ಸಂಘ), ಡಾ.ಸಂದೀಪನ್ ಬಕ್ಸಿ(FAS), ಡಾ.ಪ್ರಕಾಶ (ಪರಿಸರ ವಿಜ್ಞಾನ, ಬೆಂಗಳೂರು ವಿವಿ), ಪ್ರಶಾಂತ ಬಾಬು(ಭಾರತ ಜ್ಞಾನ ವಿಜ್ಞಾನ ಸಮಿತಿ), ರಂಜಿತ್ (BSC), ಡಾ. ಎಸ್.ಚಟರ್ಜಿ (AIPSN), ಕೆ.ಎಸ್.ರವಿಕುಮಾರ್(ಪರಿಸರ ಚಳುವಳಿಕಾರರು) ಭಾಗಿಯಾಗಲ್ಲಿದ್ದಾರೆ ಎಂದು ಜನ ಶಿಕ್ಷಣ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟ್ ಎನ್. ಕೆ. ವಸಂತರಾಜ ತಿಳಿಸಿದ್ದಾರೆ.
ಇದನ್ನೂ ನೋಡಿ : ಅಂಬೇಡ್ಕರ್ ಕುರಿತ ಹೇಳಿಕೆ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Janashakthi Media