ಐದು ರಾಜ್ಯಗಳ ಚುನಾವಣಾ ಮತದಾನೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ?: ಇಲ್ಲಿದೆ ಪೂರ್ಣ ವಿವರ!

ಐದು ರಾಜ್ಯಗಳ ಚುನಾವಣೆಗಳು ಮುಗಿದಿದ್ದು, ವಿವಿಧ ಸಂಸ್ಥೆಗಳಿಂದ ನಡೆಯಲ್ಪಟ್ಟ ಬಹು ನಿರೀಕ್ಷಿತ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿವೆ. ಹಾಗಾದ್ರೆ, ಈ ಚುನಾವಣೋತ್ತರ ಫಲಿತಾಂಶ ಹೇಳೋದೇನು? ರಾಜ್ಯ ರಾಜ್ಯದಲ್ಲಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ? ಎಂಬ ಬಿಸಿ ಬಿಸಿ ಚರ್ಚೆ ಈಗ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರವಾದ ವರದಿ ಪ್ರಕಟಿಸಿವೆ.ಟೈಮ್ಸ್ ನೌ-ವಿಟೋ, ಜನ್ ಕಿ ಬಾತ್, ನ್ಯೂಸ್ ಎಕ್ಸ್, ಎಬಿಪಿ ಸಿ-ವೋಟರ್ ಮತದಾನೋತ್ತರ ಸಮೀಕ್ಷೆಯಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದೆ.

ಎಕ್ಸಿಟ್ ಪೋಲ್‌ಗಳಿಗೆ ಅಧಿಕೃತತೆ ಇದೆಯೇ?

ಎಲ್ಲ ಸುದ್ದಿ ವಾಹಿನಿಗಳು ಎಕ್ಸಿಟ್ ಪೋಲ್‌ಗಳ ಮೂಲಕ ಯಾರು ಸರ್ಕಾರ ರಚಿಸಬಹುದು ಎಂದು ಹೇಳಲು ಪ್ರಯತ್ನಿಸುತ್ತವೆ. ಆದರೆ, ಇದು ಕೇವಲ ಸುದ್ದಿ ವಾಹಿನಿಗಳ ಸಮೀಕ್ಷೆಯನ್ನು ಆಧರಿಸಿದೆ ಮತ್ತು ಯಾವುದೇ ಸತ್ಯಾಸತ್ಯತೆಯನ್ನು ಹೊಂದಿಲ್ಲ. ಹೀಗಿದ್ದರೂ ಎಕ್ಸಿಟ್ ಪೋಲ್‌ಗಳ ಬಗ್ಗೆ ಜನ ಕುತೂಹಲ ಹೊಂದಿದ್ದಾರೆ. ಎಕ್ಸಿಟ್ ಪೋಲ್‌ಗಳು ಹೊರ ಹಾಕಿರುವ ಚಿತ್ರಣ ಈ ಕೆಳಗಿನಂತಿದೆ.

ಉತ್ತರ ಪ್ರದೇಶ : ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆ, ರಾಷ್ಟ್ರಪತಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಈ ಮತ ಸಮರವನ್ನು ಪ್ರಮುಖ ಪಕ್ಷಗಳು ಪ್ರತಿಷ್ಠೆಯಾಗಿ ಪರಿಣಮಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ ಸಮಾಜವಾದಿ ಪಕ್ಷದ ತೀವ್ರ ಪೈಪೋಟಿ ಕಾರಣ ಸರಳ ಬಹುಮತಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿವೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್‌ಗೆ ಫಲಕೊಟ್ಟಿಲ್ಲ. ಬಿಎಸ್‌ಪಿಯ ಮಾಯಾವತಿ ಮ್ಯಾಜಿಕ್ ಮಾಡಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.

ಉತ್ತರಪ್ರದೇಶ ಒಟ್ಟು ಸ್ಥಾನ – 403. ಬಹುಮತಕ್ಕೆ ಬೇಕಾದ ಸಂಖ್ಯೆ : 202

ರಿಪಬ್ಲಿಕ್: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 262-277
ಎಸ್‌ಪಿ: 119-134
ಬಿಎಸ್‌ಪಿ: 07-09

ಕಾಂಗ್ರೆಸ್: 03-08
ಇತರರು: 02-06

ಸಿ-ವೋಟರ್: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 161
ಎಸ್‌ಪಿ: 141
ಬಿಎಸ್‌ಪಿ: 87

ಇತರರು: 14

ಟುಡೇಸ್‌ ಚಾಣಕ್ಯ: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 285
ಎಸ್‌ಪಿ: 88
ಬಿಎಸ್‌ಪಿ: 27
ಇತರರು: 03

ಪಂಜಾಬ್ : ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯವೆಂದರೆ ಪಂಜಾಬ್. ಇಲ್ಲಿ ನಾಯಕತ್ವದ ಕಿತ್ತಾಟದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ದೆಹಲಿ ಬಳಿಕ ಪಂಜಾಬ್‌ನಲ್ಲಿ ಎಎಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎಎಪಿಗೆ ಗದ್ದುಗೆ ಏರಲಿದೆ ಎಂದಿದೆ. ಶಿರೋಮಣಿ ಅಕಾಲಿ ದಳ ಸ್ವಲ್ಪಮಟ್ಟಿಗೆ ಮಾತ್ರ ಪ್ರಭಾವ ಬೀರಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಸೇರಿದ್ದು ಬಿಜೆಪಿಗೆ ಪ್ರಯೋಜನವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಈ ಚುನಾವಣೆ ಮೇಲೆ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ರೈತ ಹೋರಾಟ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ.

ಜನ್‌ಕಿ ಬಾತ್ ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 60 ರಿಂದ 80
ಕಾಂಗ್ರೆಸ್: 18 ರಿಂದ 31
ಶಿರೋಮಣಿ ಅಕಾಲಿ ದಳ+ : 12 ರಿಂದ 19
ಬಿಜೆಪಿ+: 03 ರಿಂದ 7

ಇಂಡಿಯಾ ಟುಡೆ ಆಕ್ಸಿಸ್ 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 76-90
ಕಾಂಗ್ರೆಸ್:19-31
ಬಿಜೆಪಿ+: 1-4
ಶಿರೋಮಣಿ ಅಕಾಲಿ ದಳ+: 7-11

ಎಬಿಪಿಸಿ ವೋಟರ್ ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 51-61
ಕಾಂಗ್ರೆಸ್:22-28
ಶಿರೋಮಣಿ ಅಕಾಲಿ ದಳ:20-26
ಬಿಜೆಪಿ: 7-13
ಇತರರು: 1-5

ಚಾಣಾಕ್ಯ ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 100
ಕಾಂಗ್ರೆಸ್ : 10
ಬಿಜೆಪಿ: 1
ಅಕಾಲಿ ದಳ: 6

ಗೋವಾ : ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು. ನಾಯಕರು ಇಲ್ಲದೇ ಇದ್ದರೂ ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಡಲಿದೆ. ಇಲ್ಲಿ ಯಾವುದೇ ಪಕ್ಷ ಗೆದ್ದರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಸಮೀಕ್ಷೆಯಲ್ಲಿ ಸಿಕ್ಕಿವೆ.

ಗೋವಾ : ಒಟ್ಟು ವಿಧಾನಸಭಾ ಕ್ಷೇತ್ರ: 40 ಸ್ಥಾನ
ಬಹುಮತಕ್ಕೆ ಬೇಕಾದ ಸಂಖ್ಯೆ : 21 ಸ್ಥಾನ

ಜನ್‌ಕಿ ಬಾತ್ ಸಮೀಕ್ಷೆ(ಗೋವಾ)
ಬಿಜೆಪಿ: 17
ಕಾಂಗ್ರೆಸ್+:17
ಆಪ್: 1
ಇತರರು:1

ಟೈಮ್ಸ್ ನೌ ಸಮೀಕ್ಷೆ(ಗೋವಾ)
ಕಾಂಗ್ರೆಸ್ +: 16
ಬಿಜೆಪಿ: 14
ಆಪ್: 4
ಟಿಎಂಸಿ:0
ಇತರರು:6

ಎಬಿಪಿ ಸಮೀಕ್ಷೆ(ಗೋವಾ)
ಬಿಜೆಪಿ: 13 ರಿಂದ 17
ಕಾಂಗ್ರೆಸ್+: 12 ರಿಂದ 16
ಆಪ್: 1 ರಿಂದ 5
ಟಿಎಂಸಿ ಎಂಜಿಪಿ: 5 ರಿಂದ 9
ಇತರರು: 0 ಯಿಂದ 2

ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುತ್ತಾ..? ಕಾಂಗ್ರೆಸ್ ಬರುತ್ತಾ..? ಮಣಿಪುರದಲ್ಲಿ ಏನಾಗಬಹುದು ಫಲಿತಾಂಶ ಎಂಬ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಿವೆ ಎಂಬುದನ್ನು ನೋಡೋಣ.

ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ- ಉತ್ತರಾಖಂಡ: 70

ಬಿಜೆಪಿ+: 29-34
ಕಾಂಗ್ರೆಸ್‌: 33-38
ಬಿಎಸ್‌ಪಿ: 01-33
ಇತರರು: 01-03
ಮ್ಯಾಜಿಕ್ ನಂಬರ್: 36

ಈಟಿಜಿ ರಿಸರ್ಚ್ ಮತಗಟ್ಟೆ ಸಮೀಕ್ಷೆ: ಉತ್ತರಾಖಂಡ: 70

ಬಿಜೆಪಿ+: 37-40
ಕಾಂಗ್ರೆಸ್‌: 29-32
ಬಿಎಸ್‌ಪಿ: 00-01
ಇತರರು: 01-02
ಮ್ಯಾಜಿಕ್ ನಂಬರ್: 36

ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿದೆ.

ಇಂಡಿಯಾ ಟಿವಿ, ಗ್ರೌಂಡ್ ಝೀರೋ ರಿಸರ್ಚ್ ಸರ್ವೆ
ಬಿಜೆಪಿ 26 -31
ಕಾಂಗ್ರೆಸ್ 11 -17

ಜೀನ್ಯೂಸ್ ಡಿಸೈನ್ ಬಾಕ್ಸ್

ಬಿಜೆಪಿ 32 -38
ಕಾಂಗ್ರೆಸ್ 12 -17

ನ್ಯೂಸ್ 18, ಪಿ ಮಾರ್ಕ್
ಬಿಜೆಪಿ 27 -31,
ಕಾಂಗ್ರೆಸ್ 11 -17

ಮಾರ್ಚ್ 10 ರಂದು ಮತದಾನ ಎಣಿಕೆ ನಡೆಯಲಿದ್ದು, ಯಾರಿಗೆ ಅಧಿಕಾರದ ಗದ್ದುಗೆ ಎನ್ನುವ ಕುತೂಹಲ ಮೂಡಿಸಿದೆ.

Donate Janashakthi Media

Leave a Reply

Your email address will not be published. Required fields are marked *