ಚುನಾವಣಾ ಅಕ್ರಮ: ₹ 47.43 ಕೋಟಿ ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳ ವಶ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾಗಿದ್ದು  ಹಲವಾರು  ಚುನಾವಣಾ ಅಕ್ರಮಗಳ ವಿರುದ್ಧ ಅಧಿಕಾರಿ ಗಳು ಕಣ್ಣಿಟ್ಟು ಕಾರ್ಯಪ್ರವೃತ್ತರಾಗಿದ್ದಾರೆ.

ಈ ಸಂಬಂಧ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ₹ 47.43 ಕೋಟಿ ಮೌಲ್ಯದ ನಗದು, ಮದ್ಯ, ಮತದಾರರಿಗೆ ಆಮಿಷ ಒಡ್ಡಲು ಬಳಸುವ ವಸ್ತುಗಳು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಪ್ರಕಟಣೆಯಲ್ಲಿ ತಿಳಸಿದೆ

ಒಟ್ಟು ನಗದು – ₹ 12.82 ಕೋಟಿ
ಮದ್ಯ – ₹ 16.02 ಕೋಟಿ ಮೌಲ್ಯದ 2.78 ಲಕ್ಷ ಲೀಟರ್‌
ಚಿನ್ನ – ₹ 6.72 ಕೋಟಿ ಮೌಲ್ಯದ 13.5 ಕೆ.ಜಿ
ಬೆಳ್ಳಿ – ₹ 63.98 ಲಕ್ಷ ಮೌಲ್ಯದ 88.7 ಕೆ.ಜಿ
ಮಾದಕವಸ್ತುಗಳು – ₹ 41.26 ಲಕ್ಷ ಮೌಲ್ಯದ 79.44 ಕೆ.ಜಿ
ಮತದಾರರಿಗೆ ಆಮಿಷ ಒಡ್ಡಲು ಇದ್ದ ವಿವಿಧ ವಸ್ತುಗಳು – ₹ 10.79 ಕೋಟಿ ಮೌಲ್ಯದ್ದು

ಸದ್ಯ ಇವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾದ ಆರೋಪದಡಿ ಒಟ್ಟು 270 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಚುನಾವಣಾ ಅಕ್ರಮಗಳ ಸಿದ್ಧತೆ: ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ಚುನಾವಣಾ ಅಕ್ರಮದ ಆರೋಪದಡಿ ಒಟ್ಟು 316 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 1,416 ಪ್ರಕರಣ ದಾಖಲಿಸಿ, 1,869 ಜನರಿಂದ ಬಾಂಡ್‌ ಭದ್ರತೆ ಪಡೆಯಲಾಗಿದೆ ಎಂದು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *