ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಅನ್ನು ಆರೋಪಿ ಎಂದಿರುವ ಜಾರಿ ನಿರ್ದೇಶನಾಲಯ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮತ್ತೊಂದು ಚಾಜ್ ಶೀಟ್ ಸಲ್ಲಿಸಿದೆ. ಅರವಿಂದ್
ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಲಾಗಿದ್ದು, ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸುವಂತೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪದಚ್ಯುತಗೊಳಿಸುವಂತೆ ಸಲ್ಲಿಸಲಾದ ಅರ್ಜಿ ವಜಾ
ಈ ಪ್ರಕರಣದಲ್ಲಿ ಇಡಿ ಸಲ್ಲಿಸಿರುವ ಎಂಟನೇ ಚಾರ್ಜ್ ಶೀಟ್ ಇದಾಗಿದ್ದು, ಇದುವರೆಗೆ 18 ಜನರನ್ನು ಬಂಧಿಸಿದೆ. ಕಳೆದ ವಾರ, ಬಿಆರ್‌ಎಸ್ ನಾಯಕ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ನಾಲ್ವರ ವಿರುದ್ಧ ಸಂಸ್ಥೆಯು ಇದೇ ರೀತಿಯ ದೂರು ದಾಖಲಿಸಿದೆ.
ಆಗಸ್ಟ್ 17, 2022 ರಂದು ದಾಖಲಿಸಲಾದ ಸಿಬಿಐ ಎಫ್‌ಐಆರ್‌ನ ಆಧಾರದ ಮೇಲೆ , 2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ತನಿಖೆಗಾಗಿ ED 2022 ಆಗಸ್ಟ್ 22 ರಂದು ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.
ಇದನ್ನೂ ನೋಡಿ: ಮೋದಿ ಸರ್ಕಾರಕ್ಕೆ ಮುಖಭಂಗ | ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಿಡುಗಡೆಗೆ ಸುಪ್ರೀಂ ಆದೇಶ